ಒದ್ದೆ ಬಟ್ಟೆಯನ್ನು ಹುಟ್ಟು ದೇವಾಲಯದ ಪ್ರದಕ್ಷಿಣೆ ಮಾಡಲು ಕಾರಣವೇನು..?

0
478
Loading...
Loading...
Loading...

ಭಗವಂತನಿಗೆ ಭಕ್ತ ತನ್ನ ಭಕ್ತಿಯ ಅಳತೆಯನ್ನು ತೋರಿಸಲು ನಾನಾ ರೀತಿಯ ಪ್ರಯತ್ನಗಳನ್ನು ಮಾಡುತ್ತಿರುತ್ತಾನೆ, ನ್ಯೂ ಸಾಮಾನ್ಯವಾಗಿ ಗಮನಿಸಿರಬಹುದು ನದಿಗಳ ಪಕ್ಕದಲ್ಲಿ ಇರುವ ದೇವಸ್ಥಾನಗಳಿಗೆ ನದಿಯಲ್ಲಿ ಮಿಂದು ಒದ್ದೆ ಬಟ್ಟೆಯಲ್ಲೇ ದೇಗುಲ ಪ್ರವೇಶ ದೇವರ ದರ್ಶನವನ್ನು ಮಾಡುತ್ತಾರೆ, ಈ ರೀತಿ ಮಾಡುವುದರಿಂದ ಏನು ಲಾಭ ನಮ್ಮ ಧರ್ಮ ಅಥವಾ ಶಾಸ್ತ್ರದಲ್ಲಿ ಈ ಬಗ್ಗೆ ಪ್ರಸ್ತಾಪ ಇದೆ ಇವೆಲ್ಲದರ ಬಗ್ಗೆ ಎಂದು ತಿಳಿಯೋಣ.

ಭಗವಂತ ತನ್ನ ಭಕ್ತರಿಂದ ಕೇವಲ ಭಕ್ತಿ ಮಾತ್ರ ಪಡೆದುಕೊಳ್ಳಲು ಇಚ್ಚಿಸುತ್ತಾನೆ, ಅಂತಹ ದೇವರ ಬಳಿಗೆ ನಾವು ಹೋಗುವ ಸಮಯದಲ್ಲಿ ಮಾನಸಿಕ ಹಾಗೂ ದೈಹಿಕ ಶುದ್ಧತೆ ಇರಬೇಕು ಅಲ್ಲವೇ ? ಒದ್ದೆ ಬಟ್ಟೆ ಧರಿಸುವ ಸಮಯದಲ್ಲಿ ನಮ್ಮ ಮನಸ್ಸು ಏಕಾಗ್ರತೆಯಿಂದ ಕೂಡಿರುತ್ತದೆ, ಒಂದು ರೀತಿ ಮನಸ್ಸು ಭಕ್ತಿಭಾವದಲ್ಲಿ ಮುಳುಗಿರಲು ತಣ್ಣೀರು ಸ್ನಾನ, ಒದ್ದೆ ಬಟ್ಟೆಗಳು ಸಹಕಾರಿ ಆಗುತ್ತದೆ.

ಶಾಸ್ತ್ರ ಎಂಬುದು ಮಾನಸಿ ನಡೆ, ನುಡಿಗಳು, ವರ್ತನೆ, ವಾಸ್ತವಿಕ ನೆಲೆಗಟ್ಟಿನಲ್ಲಿ ಆಚರಿಸುವ ನಂಬಿಕೆಗಳು, ವೈಚಾರಿಕತೆ ತುಂಬಿರುವ ಚರ್ಚೆಗಳು ನಮ್ಮ ಶಾಸ್ತ್ರದ ಬಗ್ಗೆ ವಿವರಣೆ ನೀಡುತ್ತದೆ, ಸಹಜವಾಗಿ ಮನುಷ್ಯನಿಗೆ ಯಾವ ಸಂಗತಿಗಳು ಉಪಯೋಗ ಆಗುತ್ತದೆ ಎನ್ನುವ ಸಂಗತಿಗಳನ್ನು ನಮ್ಮ ಶಾಸ್ತ್ರದಲ್ಲಿ ವಿವರಣೆ ನೀಡುತ್ತದೆ, ನಮ್ಮ ಪೂರ್ವಿಕರು ಬಹಳ ಬುದ್ಧಿವಂತರು, ಅಂದಿನ ಕಾಲದಲ್ಲಿ ಮಾಡಿರುವ ಶಾಸ್ತ್ರದಲ್ಲಿ ನೈಜತೆ, ವಾಸ್ತವಿಕತೆ ಹಾಗೂ ಸಕಾರಾತ್ಮಕ ಚಿಂತನೆಗಳಿಂದ ಕೂಡಿರುತ್ತದೆ, ಹೀಗೆ ನಮ್ಮ ಸಂಪ್ರದಾಯ ಬಹಳ ಉನ್ನತವಾಗಿದೆ.

ವೈಜ್ಞಾನಿಕವಾಗಿ ಒದ್ದೆ ಬಟ್ಟೆ ಧರಿಸಿ ದೇವಾಲಯದಲ್ಲಿ ಪ್ರದಕ್ಷಿಣೆ ಮಾಡುವದರಿಂದ ಸಿಗುವ ಲಾಭಗಳು.

ಸಾಮಾನ್ಯವಾಗಿ ದೇವರ ದರ್ಶನ ಪಡೆದು ಕೊಳ್ಳಲು ಹೋಗುವ ಮೊದಲು ಅಲ್ಲಿ ಇರುವ ಕಲ್ಯಾಣಿ, ಕೊಳ ಅಥವಾ ನದಿಗಳಲ್ಲಿ ಸ್ನಾನ ಮಾಡುವುದು ವಾಡಿಕೆ, ನಮ್ಮ ಆಯುರ್ವೇದ ಶಾಸ್ತ್ರ ಬಹಳ ಪ್ರಾಚೀನವಾದುದು, ಆ ಶಾಸ್ತ್ರದಲ್ಲಿ ಹಾಟ್ ಪ್ಯಾಕ್ ಮತ್ತು ಕೋಲ್ಡ್ ಪ್ಯಾಕ್ ಎನ್ನುವ ವಿವರಣೆ ಬರುತ್ತದೆ, ನಾವು ಸೇವನೆ ಮಾಡುವ ಆಹಾರ ಜೀರ್ಣವಾದ ನಂತರ ಉಳಿದಿರುವ ಕಲ್ಮಶಗಳು ಅನೇಕ ಬಾರಿ ದೇಹದಲ್ಲಿ ಉಳಿದು ಬಿಟ್ಟು ಮಲಬದ್ಧತೆಗೆ ದಾರಿ ಮಾಡಿಕೊಡುತ್ತದೆ, ಈ ರೀತಿ ಅಜೀರ್ಣ ಉಂಟಾಗಲು ಕಾರಣ ತಿಂದ ಆಹಾರ ಸಕ್ರಮವಾಗಿ ಜೀರ್ಣ ಆಗದಿರುವುದು, ನಾವು ದೇವಸ್ಥಾನಕ್ಕೆ ಭೇಟಿ ನೀಡುವ ಸಮಯದಲ್ಲಿ ಮಡಿ ಎನ್ನುವ ಹೆಸರಿನಲ್ಲಿ ಒದ್ದೆ ಬಟ್ಟೆಗಳನ್ನು ಧರಿಸುವುದರಿಂದ ಅಜೀರ್ಣ ಹಾಗೂ ಮಲಬದ್ಧತೆ ನಿವಾರಣೆಯಾಗುತ್ತದೆ, ಹೀಗೆ ಒದ್ದೆ ಬಟ್ಟೆ ಊಟ್ಟಿಕೊಂಡು ದೇವಸ್ಥಾನದ ಸುತ್ತಲೂ ಪ್ರದಕ್ಷಿಣೆ ಹಾಕುವುದರಿಂದ ಆರೋಗ್ಯ ಸುಧಾರಣೆಯಾಗುತ್ತದೆ.

Loading...

LEAVE A REPLY

Please enter your comment!
Please enter your name here