ಸಿದ್ದಾರ್ಥ್ ಆತ್ಮಹತ್ಯೆ ಮಾಡಿಕೊಂಡರು ಎನ್ನುವ ಸೇತುವೆಯಿಂದ ಮತ್ತೊಬ್ಬ ಯುವಕ ಆತ್ಮಹತ್ಯೆಗೆ ಯತ್ನ.

0
2489

ಮಂಗಳೂರು ಹಾಗೂ ಉಳ್ಳಾಲಕ್ಕೆ ರಸ್ತೆ ಸಂಪರ್ಕವಾಗಿ ನಿರ್ಮಾಣವಾಗಿರುವ ನೇತ್ರಾವತಿ ನದಿ ಸೇತುವೆ ಇಂದ ಕಾಫಿ ಡೇ ಮಾಲೀಕರಾದ ಸಿದ್ದಾರ್ಥ್ ಕಾಣೆಯಾಗಿದ್ದಾರೆ ಎಂದು ಹೇಳಲಾಗಿರುವ ಸೇತುವೆ ಯಿಂದಲೇ ನಿನ್ನೆ ಮತ್ತೊಬ್ಬ ವ್ಯಕ್ತಿ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನ ಪಟ್ಟಿದ್ದಾರೆ.

ಈ ವ್ಯಕ್ತಿಯನ್ನು ಚಿಕ್ಕಮಂಗಳೂರು ಜಿಲ್ಲೆಯ ಕಡೂರಿನ ನಿವಾಸಿ ಗಿರೀಶ್ 32ವರ್ಷ ಎಂದು ಗುರುತಿಸಲಾಗಿದ್ದು, ಆತ್ಮಹತ್ಯೆ ಮಾಡಿಕೊಳ್ಳಲು ಸೇತುವೆಯಿಂದ ನದಿಗೆ ಜಿಗಿದ ಗಿರೀಶ್ ಕೊನೆಯ ಕ್ಷಣದಲ್ಲಿ ತನ್ನ ಹೆಂಡತಿ ಹಾಗೂ ಮಕ್ಕಳ ನೆನೆಸಿಕೊಂಡು ಮತ್ತೆ ಬದುಕಲು ಪ್ರಯತ್ನಪಟ್ಟು ನದಿಯಿಂದ ದಡಕ್ಕೆ ಈಜಲು ಮುಂದಾಗಿದ್ದಾನೆ, ಈತನನ್ನು ಗಮನಿಸಿದ ಮೀನುಗಾರರು ತಕ್ಷಣ ಹತ್ತಿರ ಬಂದು ಗಿರೀಶ್ ಪ್ರಾಣ ಕಾಪಾಡಿದ್ದಾರೆ.

ನಿಮ್ಮ ಹುಟ್ಟಿದ ಸಮಯ, ಜಾತಕ, ಮುಖಲಕ್ಷಣ ನೋಡಿ ಸಂಪೂರ್ಣ ಭವಿಷ್ಯ ನುಡಿಯುತ್ತಾರೆ, ನಿಮ್ಮ ಯಾವುದೇ ಘೋರ ನಿಗೂಢ ಮತ್ತು ಗುಪ್ತ ಸಮಸ್ಯೆಗಳಿಗೆ ಕೆಲವೇ ದಿನಗಳಲ್ಲಿ ಪರಿಹಾರ ಶತಸಿದ್ಧ ಮಾಡಿಕೊಡುತ್ತಾರೆ, ವಿಶೇಷ ಸೂಚನೆ : ( ವಶೀಕರಣ ಮಾಂತ್ರಿಕರು ) ಕರೆ ಮಾಡಿ : 9740202800

ಮಾಹಿತಿಗಳ ಪ್ರಕಾರ ಗಿರೀಶ್ ಅವರು ಊರ್ವ ಸ್ಟೋರ್ ಒಂದರಲ್ಲಿ ಸೀಯಾಳ ವ್ಯಾಪಾರ ಮಾಡುತ್ತಿದ್ದರು ಎನ್ನಲಾಗಿದೆ ಹಾಗೂ ಗಿರೀಶ್ ಅವರ ಪತ್ನಿ ಮಂಗಳೂರು ನಗರದ ಕೋರ್ಟ್ ನಲ್ಲಿ ಉದ್ಯೋಗ ಮಾಡುತ್ತಿದ್ದರು, ಹಾಗೂ ದಂಪತಿಗಳು ತಮ್ಮ ಒಂದು ಪುಟ್ಟ ಮಗುವಿನೊಂದಿಗೆ ಪಿಡಬ್ಲ್ಯೂಡಿ ಕ್ವಾಟರ್ಸ್ ನಲ್ಲಿ ವಾಸವಾಗಿದ್ದರು ಎನ್ನಲಾಗಿದೆ.

ಮೀನುಗಾರರು ಹಾಗೂ ಸ್ಥಳೀಯರ ಸಹಾಯದಿಂದ ಗಿರೀಶ್ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಪ್ರಾಣಾಪಾಯದಿಂದ ಉಳಿಸಲಾಗಿದೆ ಆದರೆ ಚರ್ಚೆಗೆ ಬಂದಿರುವ ವಿಷಯವೇನೆಂದರೆ ಕೆಫೆ ಕಾಫಿ ಡೇ ಮಾಲೀಕರಾದ ಸಿದ್ದಾರ್ಥ್ ಇದೇ ಜಾಗದಿಂದ ಆತ್ಮಹತ್ಯೆ ಮಾಡಿಕೊಂಡರು ಎಂಬ ಸುದ್ದಿ ದೇಶವೆಲ್ಲಾ ಹರಡಿದ್ದ ನಂತರ ಈ ಸ್ಥಳ ಸೂಸೈಡ್ ಪಾಯಿಂಟ್ ಆಗಿ ಪರಿವರ್ತನೆಯಾಗಿದೆ ಎಂಬುದಾಗಿದೆ.

LEAVE A REPLY

Please enter your comment!
Please enter your name here