ಹಾಲು ಸೌತೆಕಾಯಿ ಮತ್ತು ನಿಂಬೆರಸವನ್ನು ಹೀಗೆ ಬಳಸಿದರೆ ಕಣ್ಣ ಸುತ್ತಲಿನ ಕಪ್ಪು ಕಲೆ ಒಂದೇ ದಿನದಲ್ಲಿ ಮಾಯವಾಗುತ್ತದೆ..!!

0
3354

ಸರಿಯಾದ ನಿದ್ರೆ ಮಾಡಿಲ್ಲ ಅಂದ್ರೆ ಕಣ್ಣಿನ ಕೆಳಗೆ ಕಪ್ಪು ಕಲೆಗಳನ್ನು ಡಾರ್ಕ್ ಸರ್ಕಲ್ ಎಂದು ಕರೆಯುತ್ತಾರೆ, ಈ ಕಪ್ಪು ಕಲೆಗಳನ್ನು ನಿವಾರಿಸಲು ಬಹಳಷ್ಟು ಕ್ರೀಮ್ ಗಳನ್ನು ನೀವು ಖರೀದಿಸಿ ಹಚ್ಚುತ್ತಿದ್ದರು ನಿಮಗೆ ಸಂಪೂರ್ಣವಾದ ಪರಿಹಾರ ಸಿಕ್ಕಿರುವುದಿಲ್ಲ, ಆದರೆ ಈಗ ನಾವು ತಿಳಿಸುವ ಹಾಲಿನ ಆರೈಕೆಯನ್ನು ನಿಮ್ಮ ಕಣ್ಣುಗಳ ಕೆಳಗಿನ ಕಲೆ ಮಂಗ ಮಾಯ ವಾಗುತ್ತದೆ.

ನಿದ್ರೆ ಸರಿಯಾಗಿ ಮಾಡಿಲ್ಲ ಅಂದರೆ ಮಾತ್ರವಲ್ಲ ಬಿಸಿಲಿನಲ್ಲಿ ಹೊರಗೆ ಹೆಚ್ಚು ಪ್ರಯಾಣ ಮಾಡುವುದರಿಂದಲೂ ಹಾಗೂ ಕೆಲವು ಅಲ್ಲರ್ಜಿ ಗಳಿಂದಲೂ ಡಾರ್ಕ್ ಸರ್ಕಲ್ ಉಂಟಾಗುತ್ತದೆ, ಇಂತಹ ಡಾರ್ಕ್ ಸರ್ಕಲ್ ಅನ್ನು ನಿವಾರಿಸುವ ಹಾಲಿನ ಆರೈಕೆಗಾಗಿ ಮುಂದೆ ಓದಿ.

ತಂಪಾದ ಶುದ್ಧ ಹಾಲು ಹಾಗೂ ಅಷ್ಟೇ ಪ್ರಮಾಣದ ರೋಜ್ ವಾಟರ್ ಅನ್ನು ಮಿಶ್ರಣ ಮಾಡಿ ಒಂದು ಹತ್ತಿಯಲ್ಲಿ ಆ ಮಿಶ್ರಣವನ್ನು ಅದ್ದಿ, ಅದ್ದಿದ ಹತ್ತಿಯ ಉಂಡೆಯನ್ನು 20 ನಿಮಿಷಗಳವರೆಗೆ ನಿಮ್ಮ ಕಣ್ಣಿನ ಮೇಲಿರುವುದರಿಂದ ಕಪ್ಪು ಕಲೆ ಮಾಯವಾಗುತ್ತದೆ, ಆದರೆ ಹೀಗೆ ವಾರಕ್ಕೆ ಎರಡರಿಂದ ಮೂರು ಬಾರಿ ಮಾಡಬೇಕು.

ಒಂದು ಬಟ್ಟಲಿನಲ್ಲಿ ಬಾದಾಮಿಯನ್ನು ರಾತ್ರಿ ನೀರಿನಲ್ಲಿ ನೆನೆಸಿರಿ, ರೋಸೆಟ್ಟ ಬಾದಾಮಿಯನ್ನು ಬೆಳಗ್ಗೆ ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ, ಬಾದಾಮಿ ಪೇಸ್ಟ್ ಆದ ಬಳಿಕ ಅದಕ್ಕೆ ಸ್ವಲ್ಪ ಹಾಲನ್ನು ಸೇರಿಸಬೇಕು, ಹೀಗೆ ತಯಾರಾದ ಮಿಶ್ರಣವನ್ನು ಕಣ್ಣ ಸುತ್ತಲು ಹಾಗೆ ಬೇಕಾದರೆ ಮುಖಕ್ಕೂ ಕೂಡ ಹಚ್ಚಬಹುದು, 20 ನಿಮಿಷಗಳ ಕಾಲ ಹೀಗೆ ಹಚ್ಚಿಟ್ಟು ನಂತರ ತಂಪಾದ ನೀರಿನಿಂದ ಮುಖವನ್ನು ತೊಳೆಯಬೇಕು ಹೀಗೆ ಮಾಡುವುದರಿಂದ ಕಣ್ಣಿನ ಕೆಳಗಿರುವ ಕಲೆ ಹಾಗೂ ಮುಖದ ಮೇಲಿರುವ ಯಾವುದೇ ಕಾರ್ಯಗಳಿದ್ದರೂ ವಾಸಿಯಾಗುತ್ತದೆ.

ಕಪ್ಪು ಕಲೆ ನಿವಾರಣೆ ಯಾಗುವ ಜೊತೆಗೆ ತ್ವಚೆಯ ಪೋಷಣೆಗೂ ನೀಡಲು ಒಂದು ಚಮಚ ಹಾಲು ಒಂದು ಚಮಚ ಸೌತೆಕಾಯಿ ರಸ 1 ಚಮಚ ನಿಂಬೆರಸವನ್ನು ಚೆನ್ನಾಗಿ ಮಿಶ್ರಣ ಮಾಡಿ ಹತ್ತಿಯ ಸಹಾಯದಿಂದ ನಿಮ್ಮ ಕಣ್ಣಿನ ಭಾಗಕ್ಕೆ ಹಚ್ಚಬೇಕು, ಇದರಿಂದ ಕಪ್ಪು ಕಲೆಗಳು ನಿವಾರಣೆಯಾಗುತ್ತವೆ.

LEAVE A REPLY

Please enter your comment!
Please enter your name here