ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ಅವರ ಹುಟ್ಟುಹಬ್ಬಕ್ಕೆ ಅನಿಲ್ ಕುಂಬ್ಳೆ ಅವರಿಂದ ಸಿಕ್ತು ಸರ್ಪ್ರೈಸ್..!

0
1321

ಈ ವರ್ಷ ಶಿವರಾಜಕುಮಾರ್ ಅಭಿಮಾನಿಗಳೊಂದಿಗೆ ಹುಟ್ಟುಹಬ್ಬ ಆಚರಿಸಿಕೊಳ್ಳಲು ಸಾಧ್ಯವಾಗಲಿಲ್ಲ, ಕಾರಣ ಅವರು ಲಂಡನ್ ನಲ್ಲಿ ಇದ್ದರೂ ಆದರೂ ತಮ್ಮ ಅಭಿಮಾನಿಗಳೊಂದಿಗೆ ವಿಡಿಯೋ ಕಾಲ್ ಮುಖಾಂತರ ಅಲ್ಲಿಂದಲೇ ತಮ್ಮ ಅಭಿಮಾನಿಗಳ ಶುಭಾಶಯಗಳನ್ನು ಪಡೆದು ಸಂತಸಪಟ್ಟರು.

ಹಾಗೂ ಅದೇ ಶುಕ್ರವಾರ ಲಂಡನ್ನಲ್ಲಿ ಭಾರತದ ಹೆಮ್ಮೆಯ ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ ಅವರು ಸಹ ಶಿವಣ್ಣನಿಗೆ ಸರ್ವಿಸ್ ನೀಡಿದ್ದಾರೆ, ಅದೇನೆಂದರೆ ಅನಿಲ್ ಕುಂಬ್ಳೆ ಮತ್ತು ಅವರ ಕುಟುಂಬ ಶಿವಣ್ಣ ಮತ್ತು ಅವರ ಕುಟುಂಬ ಇದ್ದ ಹೋಟೆಲಿಗೆ ಭೇಟಿ ನೀಡಿ ಖುದ್ದಾಗಿ ಶಿವಣ್ಣನಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ, ಹಾಗೂ ಅವರ ಆರೋಗ್ಯವನ್ನು ಕೂಡ ವಿಚಾರಿಸಿಕೊಂಡಿದ್ದಾರೆ.

ನಿಮ್ಮ ಯಾವುದೇ ಘೋರ ನಿಗೂಢ ಮತ್ತು ಗುಪ್ತ ಸಮಸ್ಯೆಗಳಿಗೆ ಕೆಲವೇ ದಿನಗಳಲ್ಲಿ ಪರಿಹಾರ ಶತಸಿದ್ಧ ಮಾಡಿಕೊಡುತ್ತಾರೆ, ವಿಶೇಷ ಸೂಚನೆ : ( ವಶೀಕರಣ ಮಾಂತ್ರಿಕರು ) ಕರೆ ಮಾಡಿ : 9740202800

ಅಷ್ಟೇ ಅಲ್ಲದೆ ಅನಿಲ್ ಕುಂಬ್ಳೆ ಅವರು ಶಿವರಾಜಕುಮಾರ್ ಅವರ ಜೊತೆ ಕ್ಲಿಕ್ಕಿಸಿಕೊಂಡ ಫೋಟೋವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿ ಶಿವಣ್ಣನ ಹುಟ್ಟುಹಬ್ಬದ ದಿನದಂದೇ ಅವರನ್ನು ಭೇಟಿ ಮಾಡಿದ್ದು ನನಗೆ ಬಹಳ ಖುಷಿ ತಂದಿದೆ, ಶಿವಣ್ಣ ನಿಮಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು ಹಾಗೂ ನಿಮ್ಮ ಆರೋಗ್ಯ ಬೇಗ ಚೇತರಿಸಿಕೊಳ್ಳಲಿ ಎಂದು ಬರೆದುಕೊಂಡಿದ್ದಾರೆ.

ಶಿವರಾಜ್ ಕುಮಾರ್ ಅವರು ಕೂಡ ತಮ್ಮ ಟ್ವೀಟ್ ಖಾತೆಯಲ್ಲಿ ಅನಿಲ್ ಕುಂಬ್ಳೆ ಅವರ ಜೊತೆ ಕ್ಲಿಕ್ಕಿಸಿದ ಫೋಟೋ ಪೋಸ್ಟ್ ಮಾಡಿ ಕ್ರಿಕೆಟ್ ಅಂದ್ರೆ ನನಗೆ ಇಷ್ಟ ಅದರಲ್ಲೂ ನಮ್ಮ ಕನ್ನಡದ ಕ್ರಿಕೆಟ್ ಆಟಗಾರರು ಅಂದರೆ ನನಗೆ ಪ್ರೀತಿ ಜಾಸ್ತಿ, ನನ್ನ ಹುಟ್ಟುಹಬ್ಬಕ್ಕೆ ಸರ್ಪ್ರೈಸ್ ಆಗಿ ಸಿಕ್ಕ ನನ್ನ ನೆಚ್ಚಿನ ಆಟಗಾರ ಹಾಗೂ ಗೆಳೆಯನಾದ ಅನಿಲ್ ಕುಂಬ್ಳೆ ನಿಮ್ಮ ಭೇಟಿ ನನಗೆ ಖುಷಿ ಕೊಟ್ಟಿದೆ ಎಂದು ಬರೆದುಕೊಂಡಿದ್ದಾರೆ.

ಶಿವರಾಜಕುಮಾರ್ ಕಳೆದ ಆರು ತಿಂಗಳಿಂದ ತಮ್ಮ ಭುಜದ ನೋವಿನಿಂದ ಬಳಲುತ್ತಿದ್ದರು, ಇದೇ ಕಾರಣಕ್ಕಾಗಿಯೇ ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳಲು ಎಂದು ಲಂಡನ್ ಗೆ ತೆರಳಿದ್ದಾರೆ, ಇದೇ ಸಂದರ್ಭದಲ್ಲಿ ಅನಿಲ್ ಕುಂಬ್ಳೆ ಅವರು ಸಹ ಲಂಡನ್ ನಲ್ಲಿ ನಡೆಯುತ್ತಿದ್ದ ವಿಶ್ವಕಪ್ ಕ್ರಿಕೆಟ್ ನೋಡಲು ಬಂದಿದ್ದರು, ಇದೇ ಸಂದರ್ಭದಲ್ಲಿ ಡಾಕ್ಟರ್ ಶಿವರಾಜಕುಮಾರ್ ಅವರನ್ನು ಭೇಟಿ ಮಾಡಿ ಹುಟ್ಟುಹಬ್ಬದ ಶುಭಾಶಯಗಳು ಆರೋಗ್ಯ ಬೇಗ ಸುಧಾರಿಸಲಿ ಎಂದು ವಿಶ್ ಮಾಡಿದ್ದಾರೆ.

LEAVE A REPLY

Please enter your comment!
Please enter your name here