Spy ಕ್ಯಾಮರಾ ಬಳಸಿ 800 ದಂಪತಿಗಳ ಸೆಕ್ಸ್ ಲೈವ್..!!

0
4286

ದಾಂಪತ್ಯ ಶುರು ಮಾಡಿದ ಹೊಸ ದಂಪತಿಗಳು, ಹನಿಮೂನ್ ಎಂದು ತಮ್ಮ ಅಮೂಲ್ಯ ಸಮಯಗಳನ್ನು ಕಳೆಯಲು ಬೇರೆ ಪ್ರದೇಶಗಳಿಗೆ ಟ್ರಿಪ್ ಮಾಡಿ, ದೊಡ್ಡ ಹೋಟೆಲ್ ಬುಕ್ ಮಾಡಿಕೊಂಡು ತಮ್ಮ ಸಂತಸದ ಸಮಯವನ್ನು ಕಳೆಯುತ್ತಾರೆ, ಆದರೆ ಈ ಪದ್ಧತಿ ಈಗಿನ ಕಾಲದಲ್ಲಿ ಎಷ್ಟು ಸುರಕ್ಷಿತ, ಒಮ್ಮೆ ಯೋಚನೆ ಮಾಡುವುದು ಒಳ್ಳೆಯದು, ಕಾರಣ ಜಗತ್ತೇ ಗಾಬರಿಯಾಗುವಂತೆ ಸರಿ ಸುಮಾರು 800 ದಂಪತಿಗಳ ಸೆಕ್ಸ್ ಅನ್ನು ಲೈವ್ ಮಾಡಿದ ಪ್ರಕರಣವನ್ನು ದಕ್ಷಿಣ ಕೊರಿಯಾದ ಸಿಯೋಲ್ ನಲ್ಲಿ ನಡೆದಿದೆ.

ಸಿಯೋಲ್ ಪೊಲೀಸರು ತಮ್ಮ ದೇಶದ ಕ್ಯಾಮರಾ ಪ್ರಕರಣಗಳಲ್ಲೇ ಅತಿ ದೊಡ್ಡ ಪ್ರಕರಣ ಇದಾಗಿದ್ದು spye ಕ್ಯಾಮರಾ ಬಳಸಿ ಬಟ್ಟೆ ಅಂಗಡಿ, ಮಾಲ್ ಗಳಲ್ಲಿ ಹುಡುಗಿಯರು ಬಟ್ಟೆ ಬದಲಿಸುವ ವಿಡಿಯೋ ಮಾಡುತ್ತಿದ್ದರು ಆದರೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಇದೆ ಮೊದಲು ಎಂದಿದ್ದಾರೆ.

ಹೋಟೆಲ್ ಗಳಲ್ಲಿ ತಂಗಿದ್ದ ಗ್ರಾಹಕರ ಗಮನಕ್ಕೆ ಬಾರದಂತೆ ಸ್ಪೈ ಕ್ಯಾಮೆರಾಗಳನ್ನು ಬಳಸಿ ಅವರ ವೈಯಕ್ತಿಕ ವಿಡಿಯೋ ಗಳನ್ನು ಹಿಡಿದು ಜಾಲತಾಣಗಳಲ್ಲಿ ರೋಡ್ ಮಾಡಲಾಗಿದೆ, ಸುಮಾರು ಮೂವತ್ತಕ್ಕೂ ಹೆಚ್ಚು ಹೋಟೆಲುಗಳ 42 ರೂಂಗಳಲ್ಲಿ ಹೇರ್ ಡ್ರೈಯರ್ ಗಳು, ಗೋಡೆ ಸಾಕೆಟ್ ಗಳು, ಮತ್ತು ಡಿಜಿಟಲ್ ಟಿವಿ ಬಾಕ್ಸ್ ಗಳಲ್ಲಿ ಸ್ಪೈ ಕ್ಯಾಮೆರಾ ಅಳವಡಿಸಲಾಗಿತ್ತು.

ವೆಬ್ ಸೈಟ್ ಒಂದರಲ್ಲಿ 42 ಗ್ರಾಮಗಳಲ್ಲಿ ನಡೆಯುವ ದೃಶ್ಯವನ್ನು 4000 ಗ್ರಾಹಕರಿಗೆ ದಿನದ 24 ಗಂಟೆಗಳ ಕಾಲ ಲೈವ್ ವಿಡಿಯೋ ಪ್ರಸಾರ ಮಾಡಿದ, ಈ ಲೈವ್ ವೀಡಿಯೋ ನೋಡಲು ಗ್ರಾಹಕರು ಪ್ರತಿ ತಿಂಗಳು 50,000 ವೊನ್ ಪಾವತಿಸುತ್ತಿದ್ದರು.

ಕಳೆದ ಮೂರು ತಿಂಗಳುಗಳಿಂದ ಸುಮಾರು 800ಕ್ಕೂ ಅಧಿಕ ದಂಪತಿಗಳನ್ನು ಈ ವೆಬ್ ಸೈಟ್ ಪ್ರಸಾರ ಮಾಡಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ ಈ ಈ ಸಂಬಂಧ ಇಬ್ಬರು ಶಂಕಿತರನ್ನು ಈಗ ಬಂಧಿಸಲಾಗಿದ್ದು ಮತ್ತಿಬ್ಬರ ವಿಚಾರಣೆಯನ್ನು ನಡೆಸಲಾಗುತ್ತದೆ ಎಂದರು.

ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಮರೆಯದೆ ನಮ್ಮ ಕಾಮೆಂಟ್ ಬಾಕ್ಸಲ್ಲಿ ಬರೆಯಿರಿ.

ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿ ಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.

LEAVE A REPLY

Please enter your comment!
Please enter your name here