ಸರ್ಕಾರ ಉಳಿಸಿಕೊಳ್ಳಲು ಕೊನೆಯ ಪ್ಲಾನ್..! ಸಿದ್ದರಾಮಯ್ಯ ಅವರಿಗೆ ಮುಖ್ಯಮಂತ್ರಿ ಪಟ್ಟ..?

0
3313

ಬೆಂಗಳೂರು : ದೋಸ್ತಿ ಸರ್ಕಾರ ಉಳಿಸಿಕೊಳ್ಳಲು ಹಲವು ರೀತಿಯ ಪ್ರಯತ್ನಗಳನ್ನು ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ವರಿಷ್ಠರು ಹಲವು ರೀತಿಯ ಪ್ರಯತ್ನಗಳನ್ನು ಮಾಡಿದ್ದರು ಅತೃಪ್ತ ಶಾಸಕರ ಮನವೊಲಿಸಲು ಸಾಧ್ಯವಾಗಲಿಲ್ಲ, ಆದ್ದರಿಂದ ಇಂದು ದೋಸ್ತಿ ಸರ್ಕಾರವನ್ನು ಉಳಿಸಿಕೊಳ್ಳಲು ಕೊನೆಯ ಪ್ರಯತ್ನ ಎಂಬಂತೆ ಮುಖ್ಯಮಂತ್ರಿ ಸ್ಥಾನವನ್ನು ಸಿದ್ದರಾಮಯ್ಯ ಅವರಿಗೆ ನೀಡುವ ಸಾಧ್ಯತೆಗಳು ಹೆಚ್ಚಿದೆ.

ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಮೇಲೆ ಅಸಮಾಧಾನಗೊಂಡಿರುವ ಅತೃಪ್ತ ಶಾಸಕರ ಮನವೊಲಿಸಿಕೊಳ್ಳಲು ಸಿದ್ದರಾಮಯ್ಯ ಅವರಿಗೆ ಮುಖ್ಯಮಂತ್ರಿ ಸ್ಥಾನ ನೀಡಿ ಕೊನೆಯ ಪ್ರಯತ್ನ ಮಾಡುವ ಆಲೋಚನೆಗಳನ್ನು ಮಾಡಲಾಗುತ್ತಿದೆ, ಹಾಗೂ ಜೆಡಿಎಸ್ ಪಕ್ಷವು ಕಾಂಗ್ರೆಸ್ ಸರ್ಕಾರಕ್ಕೆ ಬಾಹ್ಯ ಬೆಂಬಲವನ್ನು ನೀಡುತ್ತದೆ ಎಂಬುವ ಸುದ್ದಿ ಮಾಧ್ಯಮಗಳಲ್ಲಿ ಬಲು ಜೋರಾಗಿಯೇ ಹರಿದಾಡುತ್ತಿದೆ.

ಇತ್ತ ವಿಧಾನಸೌಧದ ಸುತ್ತಲೂ ಈ ತಿಂಗಳ 14 ನೇ ತಾರೀಖಿನವರೆಗೂ ಸೆಕ್ಷನ್ 144 ನಿಷೇಧಾಜ್ಞೆ ಹೇರಲಾಗಿದೆ, ಇತ್ತ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ರಾಜಿನಾಮೆ ನೀಡಿರುವ ಶಾಸಕರು ಮಾತ್ರವಲ್ಲ, ಕಾಂಗ್ರೆಸ್ನ ಎಲ್ಲ 78 ಶಾಸಕರು ನನಗೆ ಆಪ್ತರಾಗಿದ್ದಾರೆ, ಅವರು ನಮ್ಮ ಪಕ್ಷದ ಬಹಳಷ್ಟು ನಾಯಕರಿಗೂ ಆಪ್ತರು, ಮಾಧ್ಯಮದವರು ಅತೃಪ್ತ ಶಾಸಕರನ್ನು ನಿನ್ನ ಅರ್ಥವು ಎಂದು ಬಿಂಬಿಸುತ್ತಿದ್ದಾರೆ, ಇದು ಸರಿಯಿಲ್ಲ ಎಂದಿದ್ದಾರೆ.

ಕೊನೆ ಕ್ಷಣದಲ್ಲೂ ಸರ್ಕಾರವನ್ನು ಮಾಡುವ ನಿರೀಕ್ಷೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಬಳಿ ಇದ್ದು, ಪರಿಸ್ಥಿತಿ ಕೈ ಬಿಟ್ಟಿಲ್ಲ ಯಾವುದೇ ಸರ್ಕಾರಕ್ಕೆ ಸಮಸ್ಯೆಯಾಗಿಲ್ಲ, ಸರ್ಕಾರ ಉಳಿಯುತ್ತದೆ ಎಂಬುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ, ಹಾಗೂ ಇಂದು 11ಗಂಟೆಗೆ ಸಂಪುಟ ಸಭೆ ಇದ್ದು ಎಲ್ಲವೂ ಸರಿಯಾಗುತ್ತದೆ ಎಂದು ಎಲ್ಲರಿಗೂ ಆಹ್ವಾನ ನೀಡಿದ್ದಾರೆ.

LEAVE A REPLY

Please enter your comment!
Please enter your name here