ಬೆಳಗಾವಿಯಲ್ಲಿ ಬಾಯಿಬಿಟ್ಟ ಭೂಮಿ..!! ಸೆಲ್ಫಿ ಪಡೆಯಲು ಮುಗಿಬಿದ್ದ ಜನ.

0
2651

ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಕಲ್ಲೂರಿನಲ್ಲಿ 15 ದಿನಕ್ಕಿಂತ ಹಿಂದಿನಿಂದಲೂ ರಸ್ತೆಗಳು ಹಾಗೂ ಜಮೀನುಗಳಲ್ಲಿ ಇದ್ದಕ್ಕಿದ್ದಹಾಗೆ ಹಳ್ಳಗಳು ಬೀಳುತ್ತಿವೆ, ಭೂಮಿ ಕುಸಿಯುತ್ತಿದೆ, ಇದರಿಂದ ಗ್ರಾಮದ ಜನತೆಯ ಆತಂಕದಲ್ಲಿದ್ದರೆ, ಅಕ್ಕಪಕ್ಕದ ಊರಿನ ಜನರು ಮಾತ್ರ ಭೂಮಿ ಕುಸಿದಿರುವುದು ನೋಡಲು ಮುಗಿ ಬೀಳುತ್ತಿದ್ದಾರೆ, ಅಷ್ಟೇ ಅಲ್ಲದೆ ಅಪಾಯ ಎಂದು ತಿಳಿದಿದ್ದರೂ ಯುವಕರು ತಮ್ಮ ಸೆಲ್ಫಿ ಹುಚ್ಚು ತಾಗಿ ಭೂಮಿ ಕುಸಿದಿರುವ ಹಳ್ಳಕ್ಕೆ ಹೇಳಿದು ಸೆಲ್ಫಿ ತೆಗೆದುಕೊಳ್ಳುತ್ತಿದ್ದಾರೆ, ಇಷ್ಟೆಲ್ಲಾ ಅಚಾತುರ್ಯ ನಡೆಯುತ್ತಿದ್ದರೂ ತಮಗೇನೂ ತಿಳಿದಿಲ್ಲ ಎನ್ನುವ ರೀತಿಯಲ್ಲಿ ನೀರಿನ ತಾಲೂಕು ಅಧಿಕಾರಿಗಳು ಸುಮ್ಮನಿದ್ದಾರೆ.

ಅಮೆಜಾನ್ ಸಂಸ್ಥಾಪಕ ತನ್ನ ಪತ್ನಿಗೆ ನೀಡಿರುವುದು ವಿಶ್ವದಲ್ಲೇ ಅತಿ ಹೆಚ್ಚಿನ ವಿಚ್ಛೇದನ ಜೀವನಾಂಶ..! ಎಷ್ಟು ಗೊತ್ತಾ.?

ದೂರದಿಂದ ಜನರು ಕಾರು ಟಾಟಾ ಏಸ್ ಬಸ್ಸುಗಳನ್ನು ಮಾಡಿಕೊಂಡು ಹಳ್ಳ ನೋಡಲು ಇಲ್ಲಿಗೆ ಬರುತ್ತಿದ್ದರಂತೆ ಹಾಗೂ ಹಳ್ಳ ನೋಡಿ ಗಾಬರಿಯಿಂದ ವಾಪಸ್ ಹೋಗುತ್ತಿದ್ದಾರೆ ಎಂದು ಗ್ರಾಮಸ್ಥರು ಹೇಳಿದ್ದಾರೆ, ಇನ್ನು ಗ್ರಾಮಸ್ಥರು ಹೇಳಬೇಕು ಪ್ರಕಾರದಲ್ಲಿ ಒಮ್ಮೆ ಅಧಿಕಾರಿಗಳು ನೆಪಕ್ಕೆ ಬಂದು ಭೇಟಿ ನೀಡಿ ಹೋದರಂತೆ ಮತ್ತೆ ಈ ಕಡೆ ತಿರುಗಿಯೂ ನೋಡುತ್ತಿಲ್ಲ ವಂತೆ, ಕುಸಿದ ರಸ್ತೆಗಳನ್ನು ಸರಿಪಡಿಸಿ ಸಂಚಾರಕ್ಕೆ ಅನುಮತಿ ನೀಡುತ್ತಿಲ್ಲ ಇದರಿಂದ ಕೋಪಗೊಂಡ ಗ್ರಾಮಸ್ಥರು ಅಧಿಕಾರಿಗಳ ಮೇಲೆ ಹಿಡಿಶಾಪ ಹಾಕುತ್ತಿದ್ದಾರೆ.

LEAVE A REPLY

Please enter your comment!
Please enter your name here