ಅಮೆಜಾನ್ ಸಂಸ್ಥಾಪಕ ತನ್ನ ಪತ್ನಿಗೆ ನೀಡಿರುವುದು ವಿಶ್ವದಲ್ಲೇ ಅತಿ ಹೆಚ್ಚಿನ ವಿಚ್ಛೇದನ ಜೀವನಾಂಶ..! ಎಷ್ಟು ಗೊತ್ತಾ.?

0
7672

ಪ್ರಪಂಚದ ನಂಬರ್1 ಶ್ರೀಮಂತ ಹಾಗೂ ಅಮೆಜಾನ್ ಕಂಪನಿಯ ಸಂಸ್ಥಾಪಕ ಮತ್ತು CEO ಜೆಫ್ ಬೆಜೊಸ್ ಅವರ 26 ವರ್ಷದ ದಾಂಪತ್ಯ ಜೀವನ ಅಂತ್ಯ ಕಂಡಿದೆ, ಜೆಫ್ ಬೆಜೊಸ್ ಅವರ ಪತ್ನಿಗೆ 38 ಬಿಲಿಯನ್ ಅಂದರೆ 38 ಶತಕೋಟಿ ಡಾಲರ್ ನೀಡುವ ಮೂಲಕ ವಿಶ್ವದಲ್ಲೇ ಅತಿ ಹೆಚ್ಚು ವಿಚ್ಛೇದನ ಜೀವನಾಂಶವನ್ನು ನೀಡಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.

ಹಾಗಾದರೆ ಇಷ್ಟು ದೊಡ್ಡ ಮೊತ್ತದ ಪರಿಹಾರ ಧನವನ್ನು ನೀಡಿ ಜೆಫ್ ಬೆಜೊಸ್ ಅವರ ಜಗತ್ತಿನ ನಂಬರ್ ಒನ್ ಶ್ರೀಮಂತ ಸ್ಥಾನದಿಂದ ಕೆಳಗಿಳಿದ ಬಿಟ್ಟರೆ, ಖಂಡಿತ ಇಲ್ಲ ತಮ್ಮ ಆಸ್ತಿಯ 25ರಷ್ಟು ಅಂದರೆ 38 ಬಿಲಿಯನ್ ಯುಎಸ್ ಡಾಲರ್ ತಮ್ಮ ಹೆಂಡತಿಗೆ ನೀಡಿದರೂ ಅವರು ಈಗಲೂ ನಂಬರ್ ಒನ್ ಸ್ಥಾನದಲ್ಲಿ ಕುಳಿತಿದ್ದಾರೆ, ಇವರ ಒಟ್ಟು ಆಸ್ತಿಯ ಮೊತ್ತ ಸುಮಾರು 118 ಬಿಲಿಯನ್ ಯುಎಸ್ ಡಾಲರ್ ಆಗಿದೆ.

ಆದರೆ ವಿಚ್ಛೇದನ ಜೀವನಾಂಶ ಪಡೆದ ಬಳಿಕ ಅವರ ಪತ್ನಿ ವಿಶ್ವದ ನಾಲ್ಕನೇ ಶ್ರೀಮಂತ ಮಹಿಳೆಯ ಸ್ಥಾನವನ್ನು ಅಲಂಕರಿಸಿದ್ದಾರೆ, ಈ ದಂಪತಿಗಳಿಗೆ ಒಟ್ಟು ನಾಲ್ಕು ಜನ ಮಕ್ಕಳಿದ್ದಾರೆ, ಶೀಘ್ರದಲ್ಲಿ ಮಾಜಿ ಪತ್ನಿ ಅಮೆಜಾನ್ನಲ್ಲಿ ಶೇಕಡಾ 4 ರಷ್ಟು ಪಾಲು ಪಡೆಯಲಿದ್ದಾರೆ.

ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಮರೆಯದೆ ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ಬರೆದು ತಿಳಿಸಿ.

LEAVE A REPLY

Please enter your comment!
Please enter your name here