ನನ್ನ ಜೊತೆ ದೈಹಿಕ ಸಂಬಂಧ ಹೊಂದಿಲ್ಲ ಎಂದು ಬೆಂಗಳೂರಿನಲ್ಲಿ ಮಹಿಳೆ ಗಂಡನ ವಿರುದ್ಧ ದೂರು..!!

0
8568

ಬೆಂಗಳೂರಿನಲ್ಲಿ ಮಹಿಳೆಯೊಬ್ಬರು ತನ್ನ ಪತಿ ನನ್ನ ಜೊತೆ ಮದುವೆಯಾದಾಗಿನಿಂದಲೂ ಒಮ್ಮೆಯೂ ದೈಹಿಕ ಸಂಪರ್ಕ ಬೆಳೆಸಿಲ್ಲ ಎಂದು ಆರೋಪಿಸಿ ತನ್ನ ಪತಿ ಹಾಗೂ ಅತ್ತೆ ಮತ್ತು ಮಾವನ ಮೇಲೆ ಕೇಸ್ ದಾಖಲಿಸಿರುವ ಪ್ರಕರಣ ನಡೆದಿದೆ.

ಈ ಪ್ರಕರಣವು ಬೆಂಗಳೂರಿನ ಬಾಣಸವಾಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಇಲ್ಲಿನ ನಿವಾಸಿಯಾದ 37 ವರ್ಷದ ಈ ಮಹಿಳೆ ತನ್ನ ಗಂಡ ಹಾಗೂ ಆತನ ಪೋಷಕರ ವಿರುದ್ಧ 11ನೇ ಎಸಿಎಂಎಂ ಕೋರ್ಟಿನಲ್ಲಿ ಕೇಸು ದಾಖಲಿಸಿದ್ದಾರೆ, ದೂರಿನ ವಿರುದ್ಧ ವಿಚಾರಣೆ ನಡೆಸಿದ ಕೋರ್ಟ್ ಪೊಲೀಸರಿಗೆ ತನಿಖೆ ಮಾಡುವಂತೆ ಆದೇಶ ನೀಡಿದೆ.

ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಕೋರ್ಟ್ ನೀಡಿರುವ ಆದೇಶವನ್ನು ದಾಖಲಿಸಿಕೊಂಡು ತನಿಖೆ ಆರಂಭ ಮಾಡಿದ್ದಾರೆ.

ನಿಮ್ಮ ಹುಟ್ಟಿದ ಸಮಯ, ಜಾತಕ, ಮುಖಲಕ್ಷಣ ನೋಡಿ ಸಂಪೂರ್ಣ ಭವಿಷ್ಯ ನುಡಿಯುತ್ತಾರೆ, ನಿಮ್ಮ ಯಾವುದೇ ಘೋರ ನಿಗೂಢ ಮತ್ತು ಗುಪ್ತ ಸಮಸ್ಯೆಗಳಿಗೆ ಕೆಲವೇ ದಿನಗಳಲ್ಲಿ ಪರಿಹಾರ ಶತಸಿದ್ಧ ಮಾಡಿಕೊಡುತ್ತಾರೆ, ವಿಶೇಷ ಸೂಚನೆ : ( ವಶೀಕರಣ ಮಾಂತ್ರಿಕರು ) ಕರೆ ಮಾಡಿ : 9740202800

ದಂಪತಿಗಳ ಮದುವೆ 7 ವರ್ಷದ ಹಿಂದೆ ಅಂದರೆ 2012 ರಲ್ಲಿ ನಡೆದಿತ್ತು, ಅಂದಿನಿಂದಲೂ ನನ್ನ ಗಂಡ ನನ್ನ ಜೊತೆ ಲೈಂಗಿಕ ಸಂಪರ್ಕಕ್ಕೆ ಮುಂದಾಗಲಿಲ್ಲ ಹಾಗೂ ಲೈಂಗಿಕ ಸಂಪರ್ಕದ ಬಗ್ಗೆ ಮಾತು ಸಹ ಮಾಡಿಲ್ಲ, ಒಂದು ದಿನ ಮನೆಯ ಟೇಬಲ್ ನಲ್ಲಿ ಒಂದು ಮೆಡಿಕಲ್ ರಿಪೋರ್ಟ್ ನನ್ನ ಕೈಗೆ ಸಿಕ್ಕಿತು.

ಅದರ ಆಧಾರವಾಗಿ ನನ್ನ ಪತಿಗೆ ಎಚ್ ಬೀ ಅರ್ ಕಾಯಿಲೆ ಇಂದು ಈ ಕಾಯಿಲೆಯಿಂದ ಅವರಿಗೆ ಲೈಂಗಿಕ ಸಂಪರ್ಕ ಬೆಳೆಸುವುದು ಅಸಾಧ್ಯ ಎಂಬ ಸತ್ಯ ಆಗ ನನಗೆ ತಿಳಿಯಿತು, ಈ ವಿಚಾರವನ್ನು ನನ್ನ ಗಂಡ ಹಾಗೂ ಆತನ ಮನೆಯವರು ನನ್ನಿಂದ ಮುಚ್ಚಿಟ್ಟು ಮನೆ ತುಂಬಿಸಿಕೊಂಡಿದ್ದಾರೆ, ಇದರಿಂದ ನನಗೆ ವಂಚನೆಯಾಗಿದೆ, ಆದ್ದರಿಂದ ಕಾನೂನು ರೀತಿಯ ನ್ಯಾಯವನ್ನು ನನಗೆ ದೊರಕಿಸಿಕೊಡಬೇಕು ಎಂದು ಮಹಿಳೆ ತನ್ನ ದೂರಿನಲ್ಲಿ ಕೇಳಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here