ಮಹಾರಾಷ್ಟ್ರದಲ್ಲಿ ಭಾರಿ ಮಳೆಗೆ ಒಡೆದ ಅಣೆಕಟ್ಟು, 9 ಮಂದಿ ಸಾವು, ವಿಡಿಯೋ..!

0
4260
Loading...
Loading...
Loading...

ನಿರಂತರವಾಗಿ ಮಹಾರಾಷ್ಟ್ರದಲ್ಲಿ ಮಳೆ ಸುರಿಯುತ್ತಲೇ ಇದೆ ಇದರಿಂದ ಇಡೀ ರಾಜ್ಯವೇ ತತ್ತರಿಸಿದೆ, ರತ್ನಗಿರಿ ಜಿಲ್ಲೆಯ ತಹಸಿಲ್ ನಲ್ಲಿರುವ ಇಬ್ರೇ ಕಿಂಡಿ ಅಣೆಕಟ್ಟು ಮಳೆರಾಯನ ಅಬ್ಬರದ ರಭಸಕ್ಕೆ ಹೊಡೆದಿದೆ ಹಾಗೂ ಈ ಘಟನೆಯಿಂದ 9 ಮಂದಿ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ.

ಅಣೆಕಟ್ಟು ಹೊಡೆದ ಪರಿಣಾಮ ಅಣೆಕಟ್ಟಿನ ಸುತ್ತಲೂ ಇದ್ದ ಪ್ರದೇಶಗಳಿಗೆ ಅಂದರೆ ಒಟ್ಟು ಏಳು ಹಳ್ಳಿಗಳಿಗೆ ಪ್ರವಾಹ ವಾಗಿದೆ, 7 ಹಳ್ಳಿಗಳಿಂದ ಸದ್ಯ 9 ಮಂದಿ ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ಲಭಿಸಿದ್ದು ಸರಿ ಸುಮಾರು 18ರಿಂದ 20 ಜನರು ಕಣ್ಮರೆಯಾಗಿರುವ ಬಗ್ಗೆಯೂ ವರದಿಗಳಾಗಿವೆ, ಈ ದುರಂತವು ರತ್ನಗಿರಿ ಪ್ರದೇಶದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದ ನಡೆದಿದೆ ಎಂದು ಊಹಿಸಲಾಗಿದೆ.

ಪ್ರವಾಹ ಉಂಟಾಗಿರುವ 7 ಹಳ್ಳಿಗಳಲ್ಲಿ ಭಾರಿ ಪ್ರಮಾಣದ ನೀರು ನುಗ್ಗಿದೆ, 9 ದೇಹಗಳನ್ನು ಸತ್ಯ ಹುಡುಕಲಾಗಿದೆ ಇನ್ನು ಅನೇಕರು ಪ್ರವಾಹಕ್ಕೆ ಸಿಲುಕಿ ದ್ದಾರೆ ಎಂಬ ಸಂಶಯವಿದೆ, ರಾಷ್ಟ್ರೀಯ ವಿಪತ್ತು ಪಡೆ ಸ್ಥಳೀಯ ಆಡಳಿತ ಪೊಲೀಸ್ ಸಹಾಯದೊಂದಿಗೆ ಕಾರ್ಯಾಚರಣೆ ಭರದಿಂದ ಸಾಗಿದೆ, ಒಟ್ಟು 12 ಮನೆಗಳು ನೀರಿನಲ್ಲಿ ಕೊಚ್ಚಿ ಹೋಗಿವೆ, ಉಳಿದ ಗ್ರಾಮಸ್ಥರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ ಎಂದು ಅಲ್ಲಿನ ಪೊಲೀಸ್ ವಲಯ ತಿಳಿಸಿದೆ.

ಬಹಳ ಹಿಂದೆಯೇ ಅಣೆಕಟ್ಟು ಬಿರುಕು ಬಿಟ್ಟಿರುವ ಬಗ್ಗೆ ಅಲ್ಲಿನ ಗ್ರಾಮಸ್ಥರು ಸಂಬಂಧಪಟ್ಟ ಇಲಾಖೆಗೆ ಪತ್ರ ಬರೆದಿದ್ದರು, ಆದರೆ ಗ್ರಾಮಸ್ಥರ ಈ ಪತ್ರಕ್ಕೆ ಯಾವುದೇ ಉತ್ತರ ಸಿಕ್ಕಿರಲಿಲ್ಲ ಅಂದೆ ಅಣೆಕಟ್ಟಿನ ದುರಸ್ತಿ ಕೆಲಸ ಮಾಡಿದ್ದರೆ ಇಂದು ಹಲವು ಪ್ರಾಣಗಳನ್ನು ಕಳೆದುಕೊಳ್ಳುವ ಅವಶ್ಯಕತೆ ಇರಲಿಲ್ಲ ಎಂದು ಅಲ್ಲಿನ ಜನ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

Loading...

LEAVE A REPLY

Please enter your comment!
Please enter your name here