ಪ್ರೀತಿ ಮಾಡಿದ್ದೆ ತಪ್ಪಾ.? ಯುವಕನನ್ನು ಬರ್ಬರವಾಗಿ ಕೊಲೆ ಮಾಡಿದ್ದಾರ ಹುಡುಗಿ ಮನೆಯವರು.?

0
2654

ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಗುಡೆಮಾರನಹಳ್ಳಿ ರಸ್ತೆಯ ಆನೆ ಹಣ್ಣ ಬಲಿ ಯುವಕನೊಬ್ಬ ಶವವಾಗಿ ದೊರಕಿದ್ದಾನೆ.

27 ವರ್ಷದ ರವಿ ಎನ್ನುವ ಯುವಕ ಕೊಲೆಯಾಗಿರುವ ದುರ್ದೈವಿ, ದುರ್ದೈವಿ ರವಿ ಹಾನಗಲ್ ನಿವಾಸಿಯಾಗಿದ್ದಾನೆ, ಹಾಗೂ ಈತನ ಸಣ್ಣ ಮಟ್ಟದ ಕಾಮಗಾರಿಗಳ ಗುತ್ತಿಗೆದಾರ ನಾಗಿದ್ದನು, ರವಿ ಬಹಳ ವರ್ಷಗಳಿಂದ ತನ್ನ ಸಂಬಂಧಿ ಯುವತಿಯೊಬ್ಬಳನ್ನು ಪ್ರೀತಿ ಮಾಡುತ್ತಿದ್ದನು ಆದರೆ ಈ ಪ್ರೀತಿ ವಿಚಾರವಾಗಿ ಯುವತಿಯ ಕುಟುಂಬದವರಿಂದ ವಿರೋಧ ವ್ಯಕ್ತವಾಗಿತ್ತು, ಎಷ್ಟೇ ವಿರೋಧ ವ್ಯಕ್ತವಾದರೂ ಇವರಿಬ್ಬರೂ ತಮ್ಮ ಪ್ರೀತಿಯನ್ನು ಮುಂದುವರಿಸಿದ್ದರು.

ಆದರೆ ಇದನ್ನು ಸಹಿಸದ ಯುವತಿಯ ಸಂಬಂಧಿಕರು ಭಾನುವಾರ ರಾತ್ರಿ ರವಿಯನ್ನು ಕೊಲೆಮಾಡಿ ರಸ್ತೆಯಲ್ಲಿ ಬಿಸಾಕಿದ್ದಾರೆ ಎನ್ನುವ ಶಂಕೆ ವ್ಯಕ್ತವಾಗಿದೆ, ಇಂದು ರಸ್ತೆಯಲ್ಲಿ ರವಿ ಶವವಾಗಿ ಊರಿನ ಸಾರ್ವಜನಿಕರಿಗೆ ಕಾಣಿಸಿದ್ದಾನೆ, ತಕ್ಷಣ ಗ್ರಾಮದವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಮಾಗಡಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದ್ದು ಸ್ಥಳಕ್ಕೆ ಆಗಮಿಸಿದ ಮಾಗಡಿ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ, ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಮರೆಯದೆ ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ಬರೆದು ತಿಳಿಸಿ.

LEAVE A REPLY

Please enter your comment!
Please enter your name here