ಹೆಂಡತಿ ಹೊಡೆದ ಕಪಾಳಮೋಕ್ಷಕ್ಕೆ ಗಂಡ ಸ್ಥಳದಲ್ಲೇ ಸಾವು..!!

0
7956

ಚಾಮರಾಜನಗರ ತಾಲೂಕಿನ ಉಟ್ಟುವಲ್ಲಿ ಗ್ರಾಮದಲ್ಲಿ ಪತಿ ಕುಡಿದು ಬಂದಿದ್ದಕ್ಕೆ ಕೋಪಗೊಂಡ ಪತ್ನಿ ಗಂಡನಿಗೆ ಕಪಾಳಮೋಕ್ಷ ಮಾಡಿದ್ದಾರೆ, ಇದರ ಪರಿಣಾಮ ಗಂಡ ಸ್ಥಳದಲ್ಲಿಯೇ ಮೃತ ಪಟ್ಟಿರುವ ಘಟನೆ ನಡೆದಿದೆ.

ಕಪಾಳಮೋಕ್ಷ ಮಾಡಿಸಿಕೊಂಡ ದುರ್ದೈವಿ ಗಂಡನನ್ನು ಪ್ರಭುಸ್ವಾಮಿ ಎಂದು ಗುರುತಿಸಲಾಗಿದೆ, ಈತ ಹಲವು ಬಾರಿ ಪಾನಮತ್ತನಾಗಿ ಮನೆಗೆ ಬಂದು ಹೆಂಡತಿಯೊಡನೆ ಜಗಳವಾಡುತ್ತಿದ್ದ ನಂತೆ, ಶನಿವಾರ ಸಹ ಇದೇ ರೀತಿ ಕುಡಿದು ಮನೆಗೆ ಬಂದಿದ್ದಾನೆ ಹಾಗೂ ಹೆಂಡತಿಯೊಡನೆ ಜಗಳವಾಡಲು ಶುರುಮಾಡಿದ್ದಾನೆ, ಕೋಪ ತಡಿಯಲಾರದೆ ಹೆಂಡತಿ ಪ್ರಭುಸ್ವಾಮಿ ಗೆ ಕಪಾಳಮೋಕ್ಷ ಮಾಡಿದ್ದಾರೆ, ಹೊಡೆತದ ರಭಸಕ್ಕೆ ನಿಂತಲ್ಲಿಯೇ ಕುಸಿದುಬಿದ್ದ ಪ್ರಭುಸ್ವಾಮಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.

ತನ್ನ ಕಣ್ಣಮುಂದೆಯೆ ಗಂಡ ಪ್ರಾಣ ಬಿಟ್ಟಿದ್ದನ್ನು ನೋಡಿ ಭಯಗೊಂಡ ಹೆಂಡತಿ ಎಲ್ಲಿ ತನ್ನ ಮೇಲೆ ಕೊಲೆ ಆರೋಪ ಬರುವುದು ಎಂದು ಗಂಡನ ದೇಹವನ್ನು ನೇಣು ಬಿಗಿದು ಆತ್ಮಹತ್ಯೆ ಎಂದು ಬಿಂಬಿಸಲು ಪ್ರಯತ್ನಪಟ್ಟಿದ್ದಾಳೆ, ಆದರೆ ಪ್ರಭು ಸ್ವಾಮಿಯ ಸಹೋದರಿ ಅನುಮಾನಪಟ್ಟು ಇದು ಆತ್ಮಹತ್ಯೆಯಲ್ಲ ಕೊಲೆ ಎಂದು ಪೊಲೀಸರಿಗೆ ದೂರು ನೀಡಿದ್ದಾಳೆ.

ಚಾಮರಾಜನಗರದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಅಂಬಿಕಾಳನ್ನು ಬಂಧಿಸಿ ನಂತರ ಪ್ರಭುಸ್ವಾಮಿ ಅವರ ಮರಣೋತ್ತರ ಪರೀಕ್ಷೆ ನಡೆಸಿದಾಗ ಸತ್ಯ ಬಯಲಾಗಿದೆ, ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಮರೆಯದೆ ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ಬರೆದು ತಿಳಿಸಿ.

LEAVE A REPLY

Please enter your comment!
Please enter your name here