ಹೆರಿಗೆ ನೋವು ಕಡಿಮೆಯಾಗಲು ಗಾಯತ್ರಿ ಮಂತ್ರ ಪ್ಲೇ ಮಾಡುತ್ತಿದ್ದ ಆಸ್ಪತ್ರೆಯಲ್ಲಿ ಮುಸ್ಲಿಮರಿಂದ ಮಂತ್ರ ನಿಲ್ಲಿಸುವಂತೆ ಪ್ರತಿಭಟನೆ..!!

0
381

ರಾಜಸ್ಥಾನದಲ್ಲಿರುವ ಸರ್ಕಾರಿ ಆಸ್ಪತ್ರೆ ಯೊಂದರಲ್ಲಿ ಗರ್ಭಿಣಿಯರಿಗೆ ಹೆರಿಗೆ ನೋವು ಕಡಿಮೆಯಾಗಲು ಗಾಯತ್ರಿ ಮಂತ್ರ ಆಡಿಯೋ ಪ್ಲೇ ಮಾಡುತ್ತಿದ್ದರು, ಆದರೆ ಈ ವಿಚಾರ ಈಗ ಬಹಳಷ್ಟು ಚರ್ಚೆಗೆ ಗ್ರಾಸವಾಗಿದೆ, ಗಾಯತ್ರಿ ಮಂತ್ರ ನೀಡುವುದರಿಂದ ಗರ್ಭಿಣಿಯರಿಗೆ ಹೊಟ್ಟೆ ನೋವು ಕಡಿಮೆಯಾಗುವುದು ಎನ್ನುವುದು ಆಸ್ಪತ್ರೆ ಸಿಬ್ಬಂದಿಗಳ ನಂಬಿಕೆ, ಕಳೆದ ಒಂದು ವರ್ಷದಿಂದ ಹೆರಿಗೆ ಕೋಣೆಯಲ್ಲಿ ಗಾಯತ್ರಿ ಮಂತ್ರ ಪ್ಲೇ ಮಾಡಲಾಗುತ್ತಿದೆ.

ಇತ್ತೀಚಿಗೆ ಮುಸ್ಲಿಮರಿಂದ ಇದಕ್ಕೆ ಅಪೇಕ್ಷ ವ್ಯಕ್ತವಾಗಿದ್ದು ಸರ್ಕಾರಿ ಆಸ್ಪತ್ರೆಗೆ ಕೇವಲ ಹಿಂದೂ ಕವಿಗಳು ಮಾತ್ರ ಬರುವುದಿಲ್ಲ, ಬದಲಿಗೆ ಮುಸ್ಲಿಂ ಹಾಗೂ ಇತರ ಧರ್ಮದವರು ಕೂಡ ಬರುತ್ತಾರೆ, ಆದ್ದರಿಂದ ಆಸ್ಪತ್ರೆಯಲ್ಲಿ ಕೇವಲ ಗಾಯತ್ರಿ ಮಂತ್ರ ಪ್ಲೇ ಮಾಡುವುದು ಸರಿಯಲ್ಲ ಎಂದಿದ್ದಾರೆ.

ಹಾಗೂ ಮುಸ್ಲಿಂ ಸಮುದಾಯದ ಕೆಲವು ಜನರು ಆಸ್ಪತ್ರೆಯ ನಿರ್ಧಾರದ ವಿರುದ್ಧ ಪ್ರತಿಭಟನೆ ಮಾಡಲು ಶುರು ಮಾಡಿದ್ದಾರೆ, ಇಸ್ಲಾಂ ಧರ್ಮದ ಪ್ರಕಾರ ಮಗು ಹುಟ್ಟಿದ ಕೂಡಲೇ ಆಜಾನ್ ಎಂಬ ಪದವನ್ನು ಮೊದಲು ಕೇಳಬೇಕು ಎಂದು ಪ್ರತಿಭಟನೆ ಮಾಡುತ್ತಿರುವ ಅಶ್ವಖ್ ಕಾಯಂ ಖಾನೀ ಹೇಳಿಕೆ ನೀಡಿದ್ದಾರೆ.

ಆದರೆ ಸಾವಾಯಿ ಮಾಧೋಪುರ್ ಅದ ಮುಖ್ಯ ವೈದ್ಯಾಧಿಕಾರಿ ಡಾಕ್ಟರ್ ತೇಜರಂ ಮೀನಾ ಅವರು ಮಾಧ್ಯಮಗಳೊಂದಿಗೆ ಮಾತನಾಡಿ, ಜಿಲ್ಲಾಸ್ಪತ್ರೆಗಳ ಹೆರಿಗೆ ಕೊಠಡಿಯಲ್ಲಿ ನಾವು ಗಾಯಿತ್ರಿ ಮಂತ್ರವನ್ನು ಪ್ಲೇ ಮಾಡಿ ಮಾಡುತ್ತೇವೆ, ಜಿಲ್ಲೆಯ ಇತರ 20 ಆರೋಗ್ಯ ಕೇಂದ್ರಗಳ ಹೆರಿಗೆ ಕೊಠಡಿಗಳಲ್ಲಿ ಈ ವ್ಯವಸ್ಥೆ ವಿಸ್ತರಿಸುತ್ತವೆ.

ಈ ರೀತಿಯ ಗಾಯತ್ರಿಮಂತ್ರ ಪ್ಲೇ ಮಾಡಲು ಜಿಲ್ಲಾ ವೈದ್ಯಾಧಿಕಾರಿಗಳಿಗೆ ಯಾವುದೇ ಸೂಚನೆ ನೀಡಿಲ್ಲ ಎಂದು ರಾಜ್ಯ ಆರೋಗ್ಯ ಇಲಾಖೆ ಅಧಿಕಾರಿಗಳು ಪ್ರತಿಕ್ರಿಯಿಸಿದ್ದಾರೆ, ಆದರೆ ಹೆರಿಗೆ ಕೊಠಡಿಯಲ್ಲಿ ನೋವು ಕಡಿಮೆ ಮಾಡುವ ಸಂಗೀತವನ್ನು ಪ್ಲೇ ಮಾಡಲು ರಾಜ್ಯ ಸರ್ಕಾರ ಸೂಚಿಸಿರುವುದಾಗಿ ಆರೋಗ್ಯ ಇಲಾಖೆ ವಿಶೇಷ ಕಾರ್ಯದರ್ಶಿ ಡಾಕ್ಟರ್ ಸುಮಿತ್ ಶರ್ಮಾ ತಿಳಿಸಿದ್ದಾರೆ.

ಅಷ್ಟೇ ಅಲ್ಲದೆ ಇದಕ್ಕೆ ಪೂರಕವಾಗುವಂತೆ ನಾವೇ ಕೆಲವೊಂದು ಸಂಗೀತದ ಆಡಿಯೋವನ್ನು ಕಳಿಸಿಕೊಟ್ಟಿದ್ದೇನೆ, ಆ ಸಂಗೀತವನ್ನು ಪ್ಲೇ ಮಾಡುವುದು ಅಥವಾ ಬಿಡುವುದು ಆಸ್ಪತ್ರೆ ಸಿಬ್ಬಂದಿಗಳಿಗೆ ಸಂಬಂಧಪಟ್ಟಿದ್ದು, ಇನ್ನು ಗಾಯತ್ರಿ ಮಂತ್ರ ಪ್ಲೇ ಮಾಡಿರುವ ವಿಚಾರ ಕುರಿತು ತನಿಖೆ ಮಾಡಲಾಗುವುದು ಎಂದಿದ್ದಾರೆ.

ಈ ಮಾಹಿತಿಯ ಕುರಿತು ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಮರೆಯದೆ ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ.

LEAVE A REPLY

Please enter your comment!
Please enter your name here