ಬೇರೆ ಜಾತಿ ಹುಡುಗನನ್ನು ಮದುವೆಯಾಗಿದ್ದಕ್ಕೆ ಮಗಳನ್ನೇ ಕಲ್ಲಿನಿಂದ ಜಜ್ಜಿ ಕೊಂದ ತಾಯಿ..!!

0
210

ಮಹಾರಾಷ್ಟ್ರದ ಪುಣೆಯಲ್ಲಿ ಮಂಗಳವಾರ ಬೇರೆ ಜಾತಿ ಹುಡುಗನನ್ನು ಮದುವೆಯಾಗಿದ್ದ 19 ವರ್ಷದ ಮಗಳನ್ನು ತಾಯಿ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿರುವ ಆಘಾತಕಾರಿ ಘಟನೆಯೊಂದು ನಡೆದಿದೆ, ಕೊಲೆ ಮಾಡಿದ ತಾಯಿಗೆ ಹೆಸರು ಸಂಜೀವಿನಿ (34), ಮಗಳು ಋತುಜ (19).

ಕಂಪ್ಲೀಟ್ ಸ್ಟೋರಿ : ಋತುಜ ಮನೆಯವರ ಒಪ್ಪಿಗೆಯಿಲ್ಲದೆ ಪ್ರೀತಿಸಿ ಬೇರೆ ಜಾತಿ ಹುಡುಗನನ್ನು ಮದುವೆಯಾಗಿದ್ದಳು, ಆದರೆ ಈ ಸಂಬಂಧ ಬಹಳ ದಿನ ಉಳಿಯಲಿಲ್ಲ ಗಂಡನೊಂದಿಗೆ ಜಗಳವಾಡಿಕೊಂಡು ಕೆಲವು ತಿಂಗಳ ಹಿಂದೆ ಇಬ್ಬರು ಬೇರೆಯಾಗಿದ್ದರು, ಪೋಷಕರ ಮನೆಗೆ ಮರಳಿದ ಋತುಜ ಅವರನ್ನು ಮನವೊಲಿಸಿ ಮತ್ತೆ ಗಂಡನ ಮನೆಗೆ ಕಳುಹಿಸಲು ತಾಯಿ ಸಂಜೀವಿನಿ ಪ್ರಯತ್ನಪಟ್ಟರು.

ಆದರೆ ಗಂಡ ಅವಳನ್ನು ಮತ್ತೆ ಮನೆಗೆ ಕರೆಸಿಕೊಳ್ಳಲು ಒಪ್ಪಿಗೆ ನೀಡಲಿಲ್ಲ ಇದರಿಂದ ಕೋಪಗೊಂಡ ತಾಯಿ ಸಂಜೀವಿನಿ ಅಳಿಯನ ಮೇಲೆ ಲೈಂಗಿಕ ಅತ್ಯಾಚಾರದ ಕೇಸ್ ದಾಖಲಿಸಿ ಜೈಲಿಗೆ ಕಳುಹಿಸಿ ಬಿಟ್ಟಳು, ಆದರೆ ಸ್ವಲ್ಪ ದಿನಗಳ ಬಳಿಕ ಮನೆಯಲ್ಲಿ ಋತುಜ ಅವಳ ಮನಸ್ಸು ಕರಗಿ ಮತ್ತೆ ಗಂಡನ ಮನಸ್ಸನ್ನು ಒಪ್ಪಿಸಿ, ಜೈಲಿನಿಂದ ಬಿಡಿಸಿ, ಎಂದು ಮನೆಯಲ್ಲಿ ಒತ್ತಾಯ ಮಾಡಿದ್ದಾಳೆ, ಆದರೆ ಗಂಡ ಇದಕ್ಕೂ ಒಪ್ಪಲಿಲ್ಲ.

ಇದೇ ಕಾರಣಕ್ಕಾಗಿ ಮನೆಯಲ್ಲಿ ಹಲವು ಬಾರಿ ಮಾತಿನ ಚಕಮಕಿ, ಹಾಗೂ ಜಗಳಗಳು ನಡೆಯುತ್ತಿದ್ದವು, ಆದರೆ ಮಂಗಳವಾರ ಮಾತಿನ ಚಕಮಕಿ ತೀವ್ರಗೊಂಡು ತಾಯಿ ತನ್ನ ಮಗಳಿಗೆ ದೊಡ್ಡ ಕಲ್ಲಿನಿಂದ ತಲೆಗೆ ಹೊಡೆದಿದ್ದಾಳೆ, ಕಾರಣ ಮಗಳು ಸ್ಥಳದಲ್ಲೇ ಮೃತಪಟ್ಟಿದ್ದಾಳೆ ಎಂದು ಪೊಲೀಸರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಐಪಿಸಿ ಸೆಕ್ಷನ್ ಅಡಿ ಪ್ರಕರಣ ದಾಖಲಾಗಿದ್ದು, ಈ ವಿಚಾರವಾಗಿ ಸಂಜೀವಿನಿ ಅವರನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

LEAVE A REPLY

Please enter your comment!
Please enter your name here