88 ಕೋಟಿ ವೆಚ್ಚದಲ್ಲಿ ಮೋಡಬಿತ್ತನೆಗೆ ಮುಂದಾದ ರಾಜ್ಯ ಸರ್ಕಾರ..!!

0
440

ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರವಾಗಿ ಈ ಬಾರಿ ಮುಂಗಾರು ಕೈಕೊಡುವ ಎಲ್ಲಾ ಸೂಚನೆಗಳು ಕಾಣುತ್ತಿದೆ, ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರ ದಿಟ್ಟ ನಿರ್ಧಾರವನ್ನು ತೆಗೆದು ಕೊಂಡಿದ್ದು, ಮೋಡಬಿತ್ತನೆಗೆ ಮುಂದಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೃಷ್ಣಭೈರೇಗೌಡ ಅವರು ಇಂದು ಮಾಹಿತಿ ನೀಡಿದ್ದಾರೆ.

ಮಾಧ್ಯಮಗಳೊಂದಿಗೆ ಕೃಷ್ಣಭೈರೇಗೌಡ ಅವರು ತಮ್ಮ ಆಫೀಸಿನಲ್ಲಿ ಮಾತನಾಡುತ್ತಾ ಈ ಬಾರಿ ಮುಂಗಾರು ಮಳೆ ಕೈಕೊಟ್ಟು ಮುನ್ಸೂಚನೆ ಹವಾಮಾನ ಇಲಾಖೆಯಿಂದ ಸಿಕ್ಕಿದ್ದು ಆದಕಾರಣ ಮೊದಲೇ ಹೆಚ್ಚಿದ್ದು ಮೋಡಬಿತ್ತನೆ ಮಾಡುವುದಕ್ಕೆ ಸರ್ಕಾರ ನಿರ್ಧರಿಸಿದೆ, ಹಾಗೂ ಎರಡು ವರ್ಷಗಳ ದೀರ್ಘಾವಧಿ ಟೆಂಡರ್ ಕರೆಯಲು ಸರ್ಕಾರ ತೀರ್ಮಾನಿಸಿದೆ, ಜೂನ್ ಕೊನೆಯ ವಾರದಿಂದ ಈ ಬಾರಿ ಮಾಡಕತ್ತಿ ನಡೆಯಲಿದೆ, ಇದಕ್ಕಾಗಿ 88 ಕೋಟಿ ರೂ ವೆಚ್ಚ ಮಾಡಲಾಗುವುದು ಮತ್ತು ಆದಷ್ಟು ಬೇಗ ಟೆಂಡರ್ ಪ್ರಕ್ರಿಯೆ ಶುರುವಾಗುವುದು ಎಂದಿದ್ದಾರೆ.

ಮೋಡ ಬಿತ್ತನೆ ಮಾಡಲು ಕೇಂದ್ರಗಳನ್ನಾಗಿ ಬೆಂಗಳೂರು ಮತ್ತು ಹುಬ್ಬಳ್ಳಿಯನ್ನು ಆಯ್ಕೆ ಮಾಡಲಾಗಿದೆ, ಎರಡು ವಿಮಾನಗಳನ್ನು ಬಳಸಿ ಈ ಬಾರಿ ಮಾಡತನೆ ಮಾಡಲಾಗುವುದು, ಮೋಡ ಬಿತ್ತನೆ ಕಾರ್ಯಕ್ಕೆ ಈ ಬಾರಿ ತಜ್ಞರು ಸಹ ಮೋಡ ಬಿತ್ತನೆಯ ಅವಶ್ಯಕತೆ ಬಹಳಷ್ಟಿದೆ ಎಂದು ಹೇಳಿದ್ದಾರೆ ಇದೇ ಕಾರಣಕ್ಕಾಗಿ ಸರ್ಕಾರ ಮೋಡ ಬಿತ್ತನೆ ಕಾರ್ಯಕ್ಕೆ ಮುಂದಾಗಿದೆ.

ಅಷ್ಟೇ ಅಲ್ಲದೆ ಬರಪರಿಹಾರಕ್ಕೆ ಅದು ಕ್ರಮಗಳನ್ನು ಕೈಗೊಂಡಿದ್ದು ಇಷ್ಟು ದಿನ ಚುನಾವಣಾ ನೀತಿಸಂಹಿತೆ ಜಾರಿಯಲ್ಲಿದ್ದ ಕಾರಣ, ಯಾವುದೇ ಸಭೆಗಳಿಗೆ ಅನುಮತಿ ಇರಲಿಲ್ಲ, ಆದರೆ ಇಂದು ಆಯೋಗದಿಂದ ಅನುಮತಿ ಪಡೆದು ಸಭೆ ನಡೆಸಲಾಗಿದೆ, ಎಲ್ಲ ತಾಲೂಕು, ಜಿಲ್ಲಾಧಿಕಾರಿಗಳಿಗೆ ಹಣಸಂದಾಯ ಮಾಡಿದ್ದು, ಅಗತ್ಯ ಕಡೆಗಳಲ್ಲಿ ಟ್ಯಾಂಕರ್ ನೀರು ಸರಬರಾಜು ಮಾಡಲಿದ್ದಾರೆ, ಹಲವು ಬಾಡಿಗೆ ಬೋರ್ ವೆಲ್ ಗಳನ್ನು ಪಡೆದು ನೀರಿನ ಪೂರೈಕೆ ಮಾಡಲಾಗುತ್ತಿದೆ, ಜಾನುವಾರುಗಳ ಮೇವಿನ ಬಗ್ಗೆ ಸೂಕ್ತ ಕ್ರಮವನ್ನು ಸೂಚನೆ ನೀಡಿದ್ದೇನೆ ಎಂದರು.

200 ಕೋಟಿಗಳಷ್ಟು ಗ್ರಾಮೀಣ ಅಭಿವೃದ್ಧಿ ಇಲಾಖೆ ಬಿಡುಗಡೆ ಮಾಡಿದ್ದು ಹಣ ಎಷ್ಟು ಖರ್ಚಾದರೂ ಖರ್ಚು ಮಾಡಲು ಸರ್ಕಾರ ಸಿದ್ಧವಿದೆ, 24 ಗಂಟೆಗಳೊಳಗೆ ಸಮಸ್ಯೆಗಳಿಗೆ ಪರಿಹಾರ ಸೂಚಿಸಲಾಗುವುದು, ಕುಡಿಯುವ ನೀರಿನ ಸಮಸ್ಯೆ ಏನಾದರೂ ಉಂಟಾದರೆ ಇಲಾಖೆ ಸ್ಥಾಪಿಸಿರುವ ಸಹಾಯವಾಣಿಗೆ ಕರೆ ಮಾಡಬಹುದು ಎಂದು ಕೃಷ್ಣ ಬೈರೇಗೌಡರು ಮಾಹಿತಿ ನೀಡಿದ್ದಾರೆ.

LEAVE A REPLY

Please enter your comment!
Please enter your name here