ಕುಡಿದ ಮತ್ತಿನಲ್ಲಿ ಮಾಡಿದ ಭಯಾನಕ ತಪ್ಪಿಗೆ ಆತ್ಮಹತ್ಯೆ ಮಾಡಿಕೊಂಡ ತಂದೆ..!!

0
529

ರಾಜಸ್ಥಾನದ ಉದಯ್ಪುರ ನಲ್ಲಿ ಜೈಪುರದ ಪ್ರತಾಪ್ ಗಡ್ ಜಿಲ್ಲೆಯ ಧರಿಯವಾಡ್ ಮೂಲದ ತಂದೆಯೊಬ್ಬ ಕುಡಿದ ಮತ್ತಿನಲ್ಲಿ ತನ್ನ ಹದಿನಾಲ್ಕು ವರ್ಷದ ಮಗಳ ಮೇಲೆ ಅತ್ಯಾಚಾರ ಮಾಡಿ, ಒಂದು ವಾರದ ನಂತರ ಪೊಲೀಸರ ಭಯದಿಂದ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಯೊಂದು ನಡೆದಿದೆ.

ಅತಿಯಾಗಿ ಕುಡಿದ ನಶೆಯಲ್ಲಿ ಕಾಡಿಗೆ ಕಟ್ಟಿಗೆಯನ್ನು ತರಲು ಹೋಗುವಾಗ ತನ್ನ ಮಗಳನ್ನು ಕರೆದುಕೊಂಡು ಹೋಗಿದ್ದ ಈತ, ಕಾಡಿನಲ್ಲಿ ಕುಡಿತದ ನಿಶೆಯಲ್ಲಿ ತನ್ನ ಮಗಳ ಮೇಲೆ ಅತ್ಯಾಚಾರವೆಸಗಿ, ಯಾರಿಗೂ ಹೇಳದಂತೆ ಬೆದರಿಸಿ ಮನೆಗೆ ಕರೆದುಕೊಂಡು ಬಂದಿದ್ದ, ಆದರೆ ತನ್ನ ತಾಯಿಯ ಬಳಿ ಬಾಲಕಿ ಸಂಪೂರ್ಣ ವಿಚಾರವನ್ನು ವಿವರಿಸಿದ್ದಾಳೆ, ಈ ಬಗ್ಗೆ ಹೆಂಡತಿ ಪ್ರಶ್ನೆ ಮಾಡಿದಾಗ ಆಕೆಯನ್ನು ಬೆದರಿಸಿ ಎಲ್ಲಿಯೂ ಹೋಗದಂತೆ ಮನೆಯಲ್ಲಿ ಬೀಗಹಾಕಿ ಬಂದಿದ್ದಾನೆ.

ಆದರೆ ಮನೆಯ ಬೀಗವನ್ನು ಒಡೆದು ತಮ್ಮ ಸಹೋದರನ ಮನೆಗೆ ತೆರಳಿ ಹೆಂಡತಿ ನಡೆದ ಸಂಪೂರ್ಣ ವಿಚಾರವನ್ನು ವಿವರಿಸಿದ್ದಾಳೆ, ನಂತರ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ, ಮತ್ತು ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದೆ.

ಇತ್ತ ಪೊಲೀಸರು ಪೋಕ್ಸೋ ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಂಡು, ತಲೆಮರೆಸಿಕೊಂಡಿದ್ದ ಆರೋಪಿ ತಂದೆಯನ್ನು ಹುಡುಕುತ್ತಿದ್ದರು, ಎರಡು ದಿನಗಳಾದರೂ ಆರೋಪಿ ಸುಳಿವು ಸಿಗಲಿಲ್ಲ, ಆದರೆ ಎರಡು ದಿನಗಳ ಬಳಿಕ ಮನೆಗೆ ಹಿಂತಿರುಗಿದ ಆರೋಪಿ, ಪೊಲೀಸರು ನನ್ನನ್ನು ಬಂಧಿಸಿ ಶಿಕ್ಷೆಗೆ ಗುರಿ ಮಾಡುತ್ತಾರೆ ಎಂಬ ಭಯದಿಂದ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಇನ್ಸ್ಪೆಕ್ಟರ್ ಭವಾನಿ ಸಿಂಗ್ ಮನೆಯೊಳಗೆ ಪ್ರವೇಶ ಮಾಡಿದಾಗ ಆರೋಪಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ, ಆರೋಪಿಗೆ ತನ್ನ ಅಪರಾಧದ ಪ್ರಾಯಶ್ಚಿತ ವಾಗಿರಬೇಕು ಆದ ಕಾರಣ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

LEAVE A REPLY

Please enter your comment!
Please enter your name here