ಕಾಂಗ್ರೆಸ್ಗೆ ಮತ ಹಾಕಿದ್ದಕ್ಕೆ ಸ್ವಂತ ಸಹೋದರನಿಗೆ ಗುಂಡಿಟ್ಟ ಭೂಪ..!!

0
119

ಈ ಘಟನೆ ನಡೆದಿರುವುದು ಹರಿಯಾಣದ ಝಾಜ್ಜರ್ ನಲ್ಲಿ ಈ ಬಾರಿಯ ಲೋಕಸಭಾ ಚುನಾವಣೆ ನಿಮಿತ್ತ ನಡೆದ ಮತದಾನ ಪ್ರಕ್ರಿಯೆಯಲ್ಲಿ ಸ್ವಂತ ಸಹೋದರ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿದ್ದಕ್ಕೆ ಕೋಪಗೊಂಡು ಗುಂಡು ಹಾರಿಸಿ ಸಾಯಿಸಲು ಮುಂದಾದ ಘಟನೆ ನಡೆದಿದೆ.

ಇದೇ ತಿಂಗಳ 12ನೇ ತಾರೀಖಿನಂದು ನಡೆದ ಆರನೇ ಹಂತದ ಮತದಾನ ವೇಳೆಯಲ್ಲಿ, ಸ್ಥಳೀಯ ಬಿಜೆಪಿ ಕಾರ್ಯಕರ್ತ ಧರ್ಮೇಂದ್ರ ಈ ಕೃತ್ಯವನ್ನು ಎಸಗಿದ್ದು, ಅಷ್ಟೇ ಅಲ್ಲದೆ ಅಡ್ಡ ಬಂದ ತಾಯಿಗೂ ಗುಂಡು ತಗುಲಿದೆ, ಇಬ್ಬರನ್ನು ಸದ್ಯ ಸಮೀಪದ PGI ಆಸ್ಪತ್ರೆಗೆ ಸೇರಿಸಲಾಗಿದೆ, ಪ್ರಸ್ತುತ ಇಬ್ಬರು ಅಪಾಯದಿಂದ ಪಾರಾಗಿದ್ದಾರೆ.

ನಡೆದಿದ್ದೇನು : 6ನೇ ಹಂತದ ಲೋಕಸಭಾ ಮತದಾನದ ವೇಳೆ ಬಿಜೆಪಿ ಕಾರ್ಯಕರ್ತನಾಗಿದ್ದ ಧರ್ಮೇಂದ್ರ ಕುಟುಂಬಸ್ಥರಿಗೆ ಬಿಜೆಪಿಗೆ ಮತ ಹಾಕುವಂತೆ ಹೇಳಿದ್ದೇನು, ಆದರೆ ಈತನ ಸಹೋದರ ಇದಕ್ಕೆ ಒಪ್ಪದೇ ಜಗಳವಾಡಿದ, ಮತದಾನದ ಬಳಿಕ ಮತ್ತೊಮ್ಮೆ ಸಹೋದರನ ಜೊತೆ ಮಾತಿನ ಚಕಮಕಿ ನಡೆದಿದೆ, ಈ ಸಮಯದಲ್ಲಿ ಸಹೋದರನಾದ ರಾಜ ತಾನು ಕಾಂಗ್ರೆಸ್ಗೆ ಮತ ಹಾಕಿದ್ದೇನೆ ಏನು ಮಾಡ್ತಿ ಎಂದು ಹೇಳಿದ್ದಾನೆ, ಇದರಿಂದ ಕೋಪಗೊಂಡ ಧರ್ಮೇಂದ್ರ ನಾಡ ಪಿಸ್ತೂಲು ತಂದು ಆತನ ಮೇಲೆ ಗುಂಡು ಹಾರಿಸಿದ್ದಾನೆ, ತಡೆಯಲು ಬಂದ ತಾಯಿಗೂ ಗುಂಡು ತಗಲಿ ಗಾಯಗಳಾಗಿವೆ.

ನಂತರ ಪ್ರಕರಣ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದು ಜಗಳ ಹಾಗೂ ಫೈರಿಂಗ್ ಬಗೆಗಿನ ಮಾಹಿತಿ ಬಂದ ಕೂಡಲೇ ಸ್ಥಳಕ್ಕೆ ಪೊಲೀಸರು ಆಗಮಿಸಿದರು, ಆದರೆ ಆರೋಪಿ ಧರ್ಮೇಂದ್ರ ಪರಾರಿಯಾಗಿದ್ದನು, ಈತನ ಬಳಿ ಇದ್ದ ಪಿಸ್ತೂಲಿಗೆ ಯಾವುದೇ ದಾಖಲೆಗಳಿಲ್ಲ ಮನೆಯಲ್ಲಿ ಅಕ್ರಮವಾಗಿ ಬಂದೂಕು ಇಟ್ಟುಕೊಂಡಿದ್ದನ್ನು, ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

LEAVE A REPLY

Please enter your comment!
Please enter your name here