ಈಕೆಯ ಮಾತು ಕೇಳಿ ತನಿಖೆ ಮಾಡಿದ ಪೊಲೀಸರಿಗೆ ಕಾದಿತ್ತು ದೊಡ್ಡ ಶಾಕ್..!!

0
443

ಈ ಘಟನೆ ನಡೆದಿರುವುದು ಬೆಂಗಳೂರಿನ ಗಿರಿನಗರ ಪೊಲೀಸ್ ಠಾಣೆಯ ಲ್ಲಿ, ಈ ಪೊಲೀಸ್ ಠಾಣೆಗೆ 2017 ನೇ ಇಸವಿಯಲ್ಲಿ ಸುಶ್ಮಿತಾ ಅನ್ನುವ ಹುಡುಗಿ ಒಂದು ದಿನ ಬಂದು ದೂರನ್ನು ದಾಖಲಿಸಿದ್ದರು, ಈಕೆಯ ದೂರಿನ ಬೆನ್ನಟ್ಟಿದ ಪೊಲೀಸರಿಗೆ ಅದೆಂತಹ ಶಾಕ್ ಕಾದಿತ್ತು ಗೊತ್ತಾ?.

ಸುಶ್ಮಿತಾ ನೀಡಿರುವ ದೂರಿನಲ್ಲಿ ಹೀಗಿತ್ತು : ನಾನು ಒಂದು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಸಂಚರಿಸುವಾಗ ಪ್ರತಿ ದಿನ ನನ್ನನ್ನು ಯಾರೋ ಹಿಂಬಾಲಿಸುತ್ತಿದ್ದಾರೆ, ಬೇರೆ ಬೇರೆ ಫೋನ್ ನಂಬರ್ ನಿಂದ ಕರೆ ಮಾಡಿ ಕೊಲೆ ಬೆದರಿಕೆ ನೀಡಿದ್ದಾರೆ, ನಾನು ಮನೆಯಲ್ಲಿ ಇರುವಾಗ ನನ್ನ ಖಾಸಗಿ ವಿಡಿಯೋಗಳನ್ನು ನನ್ನ ಮತ್ತು ಮನೆಗೆ ಸದಸ್ಯರಿಗೆ ಕಳುಹಿಸುತ್ತಿದ್ದಾರೆ, ಕೆಲ ದಿನಗಳ ಹಿಂದೆ ಸಿಲ್ಕ್ ಬೋರ್ಡ್ ಬಳಿ ನನ್ನನ್ನು ಕಿಡ್ನಾಪ್ ಮಾಡಿ ಕೈ ಕಾಲು ಕಟ್ಟಿ ಹೊಸಕೋಟೆಯ ನಿರ್ಜನ ಪ್ರದೇಶದಲ್ಲಿ ಎಸೆದಿದ್ದರು.

ಯುವತಿ ಒಬ್ಬಳು ಬಂದು ಈ ರೀತಿಯ ದೂರನ್ನು ಕೊಟ್ಟರೆ ಖಂಡಿತವಾಗಿಯೂ ಪೊಲೀಸರು ಬಹಳ ಸೀರಿಯಸ್ಸಾಗಿ ತನಿಖೆ ಮಾಡಬೇಕಾಗುತ್ತದೆ, ಹೀಗೆ ತನಿಖೆ ಮಾಡುವಾಗ ಪೊಲೀಸರಿಗೆ ಯುವತಿಯ ಮೇಲೆ ಅನುಮಾನ ಬಂದು ಇವಳು ಕೆಲಸ ಮಾಡುತ್ತಿದ್ದ ಖಾಸಗಿ ಕಂಪನಿಯಲ್ಲಿ ಇವಳ ಸ್ನೇಹಿತ ಒಬ್ಬನನ್ನು ವಿಚಾರಣೆ ಮಾಡಿದ್ದಾರೆ.

ಆಗಲೇ ತಿಳಿದದ್ದು ಪೊಲೀಸರಿಗೆ ಈಕೆಯ ಆಟ, ಆತ ಹೇಳುವ ಪ್ರಕಾರದಲ್ಲಿ ಸುಶ್ಮಿತಾ ತನ್ನ ಕುಟುಂಬವನ್ನು ಭಯ ಪಡಿಸಲು, ತನ್ನ ಮೊಬೈಲ್ ಸೇರಿದಂತೆ ಕುಟುಂಬಸ್ಥರ ಎಲ್ಲಾ ನಂಬರ್ ಗಳಿಗೂ ಬೆದರಿಕೆಯ ಮೆಸೇಜುಗಳನ್ನು ಇವಳೇ ಕಳಿಸುತ್ತಿದ್ದಳು, ಮನೆಯಲ್ಲಿ ಕ್ಯಾಮೆರಾ ಇಟ್ಟು ಇವಳೇ ಶೂಟ್ ಮಾಡುತ್ತಿದ್ದಳು ಹಾಗೂ ಆ ವಿಡಿಯೋಗಳನ್ನು ಮನೆಯವರಿಗೆ ಕಳಿಸುತ್ತಿದ್ದಳು, ಇದಕ್ಕಾಗಿಯೇ ಸುಮಾರು 15ಕ್ಕೂ ಹೆಚ್ಚು ಸಿಮ್ ಕಾರ್ಡ್ ಗಳನ್ನು ಖರೀದಿ ಮಾಡಿದ್ದಾಳೆ.

ಈ ರೀತಿ ಮನೆಯವರನ್ನು ಹೆದರಿಸುತ್ತಾ, ಸೀನ್ ಕ್ರಿಯೇಟ್ ಮಾಡುತ್ತಿದ್ದಾರೆ ಎಂದು ಆಕೆಯ ಸ್ನೇಹಿತನಾದ ಆನಂದ್ ಪೊಲೀಸರ ಬಳಿ ಹೇಳಿದ್ದಾನೆ, ಈಕೆಯ ಹೈಡ್ರಾಮಾ ನೋಡಿ ಗಿರಿನಗರ ಪೊಲೀಸರಿಗೆ ಒಂದು ಕ್ಷಣ ಏನೂ ತೋಚದಂತಾಗಿತ್ತು, ಸುಶ್ಮಿತಾ ಪೋಷಕರಿಗೂ ಈ ನಾಟಕ ತಿಳಿದು ಶಾಕ್ ಆಗಿದೆ, ಆದರೆ ಈ ರೀತಿ ಏಕೆ ಮಾಡುತ್ತಿದ್ದಳು ಎಂಬುದರ ಬಗ್ಗೆ ಇನ್ನೂ ತಿಳಿದುಬಂದಿಲ್ಲ ಹೆಚ್ಚಿನ ತನಿಖೆಯನ್ನು ಪೊಲೀಸರು ಮಾಡುತ್ತಿದ್ದಾರೆ.

ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿ ಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.

LEAVE A REPLY

Please enter your comment!
Please enter your name here