ಬಹುನಿರೀಕ್ಷಿತ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಗೀತಾ ಚಿತ್ರದ ಟೀಸರ್ ಬಿಡುಗಡೆ..!

0
4477

ಗೋಲ್ಡನ್ ಸ್ಟಾರ್ 39ನೇ ಹುಟ್ಟುಹಬ್ಬದ ಅಂಗವಾಗಿ ಇಂದು ಅವರ ಅಭಿನಯದ ಗೀತ ಚಿತ್ರದ ಟೀಸರ್ ಬಿಡುಗಡೆ ಮಾಡಲಾಗಿದೆ.

ಇನ್ನು ಗೋಲ್ಡನ್ ಸ್ಟಾರ್ ಗಣೇಶ್ ಈ ವರ್ಷ ತಮ್ಮ ಹುಟ್ಟುಹಬ್ಬ ಆಚರಿಸುವುದಿಲ್ಲ ಎಂದು ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದರು ಹಾಗೂ ಈ ಬಾರಿ ಹಾರಗಳು ಹಾಗೂ ಕೇಕ್ ಗಳಿಗೆ ಖರ್ಚುಮಾಡುವ ದುಡ್ಡನ್ನು ಯಾವುದಾದರೂ ಅನಾಥಾಶ್ರಮಗಳಿಗೆ ಕೊಟ್ಟುಬಿಡಿ ಎಂದು ತಮ್ಮ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದರು.

ಆದರೆ ಅಭಿಮಾನಿಗಳಿಗೆ ಬೇಸರ ಮೂಡಿಸಲಿಲ್ಲ ಇಂದು ಗಣೇಶ್ ಅಭಿನಯದ ಬಹುನಿರೀಕ್ಷಿತ ಗೀತಾ ಚಿತ್ರದ ಟೀಸರ್ ಬಿಡುಗಡೆ ಮಾಡಲಾಗಿದೆ, ಟೀಸರ್ ನಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಪರಭಾಷಿಗರ ಅಭಿವೃದ್ಧಿ ಕರ್ನಾಟಕದಲ್ಲಿ ಕನ್ನಡ ಭಾಷೆಗಾಗಿ ಹೋರಾಟ ಮಾಡುತ್ತಿರುವ ಪಾತ್ರದಲ್ಲಿ ನಟಿಸಿದ್ದಾರೆ.

ಕರ್ನಾಟಕದಲ್ಲಿ ಕನ್ನಡಿಗನೆ ಯಜಮಾನ ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ ಎನ್ನುವ ಪಂಚಿಂಗ್ ಡೈಲಾಗ್ ಬಹಳ ಚೆನ್ನಾಗಿದೆ, ಚಿತ್ರದಲ್ಲಿ ನಾಯಕಿಯರಾಗಿ ಸಾನ್ವಿ ಹಾಗೂ ಪಾರ್ವತಿ ಅವರು ನಟಿಸಿದ್ದರು ಚಿತ್ರದ ಟೀಸರ್ ನಲ್ಲಿ ಇಬ್ಬರು ಕಾಣಲು ಸಿಗುವುದಿಲ್ಲ ಇನ್ನು ಈ ಚಿತ್ರ ಮನಾಲಿ, ಕೊಲ್ಕತ್ತಾ, ಮೈಸೂರು, ಹೈದರಾಬಾದ್ ಹಾಗೂ ಬೆಂಗಳೂರು ಸೇರಿದಂತೆ ಇನ್ನಿತರ ಸ್ಥಳಗಳಲ್ಲಿ ಚಿತ್ರೀಕರಣ ನಡೆಸಲಾಗಿದ್ದು ಸುಧಾರಾಣಿ, ದೇವರಾಜ್, ಅಚ್ಯುತ್ ಕುಮಾರ್ ಹಾಗೂ ರಂಗಾಯಣ ರಘು ಸೇರಿದಂತೆ ಹಲವು ಕಲಾವಿದರ ದಂಡೇ ಇದೆ.

LEAVE A REPLY

Please enter your comment!
Please enter your name here