ಚಾಲೆಂಜಿಂಗ್ ಸ್ಟಾರ್ ದರ್ಶನ್ ಮಾಡುವ ಸಮಾಜಸೇವೆಗೆ ಸಾತ್ ಕೊಟ್ಟ ಚಿಕ್ಕಣ್ಣ..! ಮಾಡಿದ ಸಹಾಯವೇನು ಗೊತ್ತಾ.?

0
122

ಚಾಲೆಂಜಿಂಗ್ ಸ್ಟಾರ್ ದರ್ಶನ್ ಪ್ರಾಣಿ ಪಕ್ಷಿಗಳೆಂದರೆ ಅಪಾರವಾದ ಪ್ರೇಮ, ಇದು ಎಲ್ಲರಿಗೂ ಗೊತ್ತಿರುವ ವಿಚಾರ ಆದರೆ ಪ್ರಾಣಿ ಸಂರಕ್ಷಣೆ ಗಾಗಿ ಅರಣ್ಯ ಇಲಾಖೆ ನೆರವಿಗೆ ಚಾಲೆಂಜಿಂಗ್ ಸ್ಟಾರ್ ಮುಂದಾಗಿದ್ದಾರೆ, ಅದೇ ಕಾರಣಕ್ಕಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಖುದ್ದಾಗಿ ಆನೆ ಫೋಟೋವನ್ನು ತಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿದು ಮಾರಾಟಕ್ಕೆ ಇಟ್ಟಿದ್ದರು.

ದರ್ಶನ್ ಸೆರೆಹಿಡಿದಿದ್ದಾನೆ ಫೋಟೋಗೆ ಒಂದು ಲಕ್ಷ ರೂಪಾಯಿ ನೀಡಿ ಚಿಕ್ಕಣ್ಣ ಖರೀದಿ ಮಾಡಿದ್ದಾರೆ, ಒಂದು ಲಕ್ಷ ರೂಪಾಯಿ ಸಂಪೂರ್ಣವಾಗಿ ಅರಣ್ಯ ಇಲಾಖೆಯ ನೆರವಿಗೆ ಹೋಗಲಿದೆ, ಈ ವಿಚಾರವನ್ನು ಕುದ್ದು ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ದರ್ಶನ ಮಾಡಿದ ಟ್ವೀಟ್ ನಲ್ಲಿ ಏನಿದೆ : ನಮ್ಮ ಚಿಕ್ಕಣ್ಣ ನಾನು ಸೆರೆಹಿಡಿದಿದ್ದ ಆನೆಯ ಫೋಟೋವನ್ನು ಅರಣ್ಯ ಇಲಾಖೆಯ ನೆರವಿಗಾಗಿ ಒಂದು ಲಕ್ಷ ರೂಪಾಯಿಗಳನ್ನು ನೀಡಿ ಖರೀದಿ ಮಾಡಿರುವುದು ಶ್ಲಾಘನೀಯ, ಅವರ ಸಾಮಾಜಿಕ ಕಳಕಳಿಯ ಕಾರ್ಯಕ್ಕೆ ನನ್ನ ಕೃತಜ್ಞತೆಗಳು.

ಸಿನಿಮಾ ಕೆಲಸಗಳಲ್ಲಿ ಯಾವಾಗಲೂ ಬಿಸಿ ಇರುವ ದರ್ಶನ್, ತಮಗೆ ಸಮಯ ಸಿಕ್ಕಾಗಲೆಲ್ಲ ಕಾಡಿನಲ್ಲಿ ಸಮಯ ಕಳೆಯುತ್ತಾರೆ, ಫೋಟೋಗ್ರಾಫಿ ಮೇಲೆ ಎಲ್ಲಿಲ್ಲದ ಆಸಕ್ತಿ ದರ್ಶನ ಗೆ ಇರುವುದರಿಂದ ಕಾಡಿನಲ್ಲಿ ಪ್ರಾಣಿ-ಪಕ್ಷಿಗಳ ಫೋಟೋಗಳನ್ನು ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿಯುತ್ತಾರೆ, ಹಿಂದೆ ಕೂಡ ತಾವು ಸೆರೆಹಿಡಿದ ಅದ್ಭುತ ಪ್ರಕೃತಿಯ ಫೋಟೋವನ್ನು ಹರಾಜಿಗೆ ಇಟ್ಟಿದ್ದರು, ಹರಾಜಿನಲ್ಲಿ 3.75 ಲಕ್ಷ ರೂಪಾಯಿಗಳನ್ನು ಸಂಗ್ರಹಿಸಿದರು ಹಾಗೂ ಈ ಹಣವನ್ನು ಅರಣ್ಯ ಸಂರಕ್ಷಣೆಗೆ ಕರ್ಚು ಮಾಡುತ್ತೇನೆ ಎಂದು ತಿಳಿಸಿದ್ದರು.

ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಮರೆಯದೆ ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ.

LEAVE A REPLY

Please enter your comment!
Please enter your name here