ವಿಡಿಯೋ : ಶಿವಣ್ಣ ಅಭಿನಯದ ರುಸ್ತುಮ್ ಚಿತ್ರದ ಮೊಟ್ಟ ಮೊದಲ ಪೊಲೀಸ್ ಬೇಬಿ ಹಾಡು ಬಿಡುಗಡೆ.

0
1275

ತಮಿಳಿನ ಮಾರಿ 2 ಚಿತ್ರದ ರೌಡಿ ಬೇಬಿ ಹಾಡು ದೇಶದಲ್ಲಿ ಮಾತ್ರವಲ್ಲದೆ ವಿದೇಶದಲ್ಲಿ ಹೆಸರು ಮಾಡಿರುವುದು ಎಲ್ಲರಿಗೂ ಗೊತ್ತಿರುವ ವಿಚಾರವೇ, ಆದರೆ ಇಲ್ಲಿ ಶಿವಣ್ಣ ಪೊಲೀಸ್ ಬೇಬಿ ಯಾಗಿ ಕುಣಿಯಲು ಬಂದಿರುವುದು ಸ್ಯಾಂಡಲ್ವುಡ್ ಸಿನಿಪ್ರಿಯರ ಕಣ್ಣಿಗೆ ಹಬ್ಬವನ್ನುಂಟು ಮಾಡಲಿದೆ, ಇಂದು ಮಂಗಳವಾರ ರುಸ್ತುಮ್ ಚಿತ್ರದ ಪೊಲೀಸ್ ಬೇಬಿ ಹಾಡು ಬಿಡುಗಡೆಯಾಗಿದೆ.

ಇಷ್ಟು ದಿನ ಫೈಟ್ ಮಾಸ್ಟರ್ ಆಗಿದ್ದ ರವಿವರ್ಮ ಸಧ್ಯ ಬಾರಿಗೆ ಸಿನಿಮಾ ನಿರ್ದೇಶನ ಮಾಡುತ್ತಿದ್ದು ಇದೇ ಕಾರಣಕ್ಕಾಗಿಯೇ ರುಸ್ತುಮ್ ಪ್ರೇಕ್ಷಕರ ಆಸಕ್ತಿಯ ಕೇಂದ್ರಬಿಂದು ಆಗಿದೆ, ಈಗಾಗಲೇ ಚಿತ್ರದಲ್ಲಿ ಶಿವಣ್ಣನ ಖದರ್ರು ಲುಕ್ ಟಾಪ್ ಟ್ರೆಂಡಿಂಗ್ ನಲ್ಲಿ ಇದ್ದು ಅಭಿಮಾನಿಗಳ ಆಸಕ್ತಿ ಹೆಚ್ಚಿಸಿದೆ.

ಬಿಡುಗಡೆಗೆ ಸಿದ್ಧವಾಗುತ್ತಿರುವ ರುಸ್ತುಮ್ ಚಿತ್ರದ ಮೊಟ್ಟಮೊದಲ ಹಾಡನ್ನು ಇಂದು ಯು ಟ್ಯೂಬ್ ನಲ್ಲಿ ಬಿಡುಗಡೆ ಮಾಡಿದ್ದು, ಚಿತ್ರಕ್ಕೆ ಸಂಗೀತ ಅನುಪ್ ಸಿಲಿನ್ ರವರದ್ದು, ಈ ಹಾಡಿಗೆ ಧ್ವನಿ ಕೊಡಿಸುವುದು ರಘು ದೀಕ್ಷಿತ್ ಮತ್ತು ಅಪೂರ್ವ ಶ್ರಿಧರ್, ಸಾಹಿತ್ಯ ಎ ಪಿ ಅರ್ಜುನ್, ಇನ್ನು ಚಿತ್ರದ ತಾರಾಗಣದಲ್ಲಿ ಶಿವರಾಜ್ ಕುಮಾರ್, ಶ್ರದ್ಧಾ ಶ್ರೀನಾಥ್, ಮಯೂರಿ, ವಿಶೇಷವಾಗಿ ವಿವೇಕ್ ಒಬಿರಾಯ್ ಹಾಗೂ ಶಿವರಾಜ್ ಕೆ ಆರ್ ಪೇಟೆ ಮುಂತಾದವರು ಇದ್ದಾರೆ.

ನೀರಿನ್ನು ಚಿತ್ರದ ಹಾಡನ್ನು ಕೇಳಿ ಇಲ್ಲ ಎಂದರೆ ಆನಂದ ಆಡಿಯೋ ಯುಟ್ಯೂಬ್ ಚಾನೆಲ್ ಇನ್ ಆಫೀಸಲ್ ಲಿಂಕ್ ಈ ಕೆಳಗೆ ನೀಡಲಾಗಿದೆ ಈಗಲೇ ಶಿವಣ್ಣನ ಸ್ಪೆಷಲ್ ಹಾಡನ್ನು ನೋಡಿ ಬಿಡಿ.

LEAVE A REPLY

Please enter your comment!
Please enter your name here