ಪೈಲ್ಸ್ ಸಮಸ್ಯೆ ಇದ್ದವರು ಈ ಹಣ್ಣುಗಳ ಜ್ಯೂಸ್ ಹೆಚ್ಚು ಕುಡಿ ಬೇಕು..!!

0
18080

ಹೊಟ್ಟೆಯ ಸಮಸ್ಯೆಯನ್ನ ಯಾರು ಸಹ ಸಾಮಾನ್ಯವಾಗಿ ನಿರ್ಲಕ್ಷಿಸುವುದಿಲ್ಲ, ಏಕೆಂದರೆ ಇದರಿಂದ ಸಾಕಷ್ಟು ಸಮಸ್ಯೆಗಳಾಗುತ್ತವೆ. ಜನರು ಸಾಮಾನ್ಯವಾಗಿ ಎದುರಿಸುತ್ತಿರುವ ಹೊಟ್ಟೆಗಳ ಸಮಾಸ್ಯೆಯಲ್ಲಿ ಮಲಬದ್ಧತೆ ಒಂದು ದೊಡ್ಡ ಸಮಸ್ಯೆಯಾಗಿದೆ. ಇದು ಕರುಳಿನ ಜೀರ್ಣ ಕ್ರೀಯೆ ಸಮಸ್ಯೆ ಕೂಡ ಆಗಿದೆ. ಇದರಿಂದ ದೇಹದಲ್ಲಿ ಹೆಚ್ಚು ನಿಶಕ್ತಿಯಾಗುತ್ತದೆ. ಮಲಬದ್ಧತೆಯ ಸಾಮಾನ್ಯ ಲಕ್ಷಣಗಳೆಂದರೆ ಕಡಿಮೆ ಕರುಳಿನ ಚಲನೆ, ಮಲವು ಕರುಳಿನಲ್ಲಿ ಹಾದುಹೋಗುವಾಗ ತೊಂದರೆಯಾಗುವುದು ಅಥವಾ ಮಲ ವಿಸರ್ಜಿಸುವಾಗ ನೋವು ಕಾಣಿಸಬಹುದು, ಹೊಟ್ಟೆ ಊದಿಕೊಳ್ಳುವುದು, ಕಿಬ್ಬೊಟ್ಟೆಯ ನೋವು ಇತ್ಯಾದಿ. ಕೆಲುವು ಹಣ್ಣುಗಳ ಜ್ಯೂಸ್ ಕುಡಿಯುದರಿಂದ ಇದನ್ನು ಸುಲಭವಾಗಿ ನಿವಾರಿಸಿಕೊಳ್ಳಬಹುದು.

ನಿಂಬೆ ಜ್ಯೂಸ್ : ನಿಂಬೆ ಜ್ಯೂಸ್ ’ನಲ್ಲಿ ವಿಟಮಿನ್ ‘ಸಿ’ ಸಮೃದ್ಧವಾಗಿದೆ, ಇದು ಅಜೀರ್ಣವನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ. ನೀವು ಮಲಬದ್ಧತೆಯಾಗಿದೆ ಎಂದು ನಿಮಗೆ ಅನಿಸಿದರೆ ಕನಿಷ್ಠ ಎರಡು ಗ್ಲಾಸ್ ನಿಂಬೆ ರಸದ ನೀರಿಗೆ ಸ್ವಲ್ಪ ಉಪ್ಪು ಸೇರಿಸಿ ಕುಡಿಯಿರಿ. ಇದು ಸುಲಭವಾಗಿ ಸಾಗಲು ಮೃದುಗೊಳಿಸಲು ಸಹಾಯಮಾಡುತ್ತದೆ.

ಸೇಬಿನ ಜ್ಯೂಸ್ : ಮಲಬದ್ಧತೆಯನ್ನು ನಿವಾರಿಸಲು ತುಂಬಾ ಸಹಾಕಾರಿಯಾಗಿದೆ, ಇದರಲ್ಲಿ ಜೀರ್ಣಕ್ರಿಯೆಯನ್ನು ನಿಯಂತ್ರಿಸುವಲ್ಲಿ ಸಹಾಯ ಮಾಡುವ ಸೋರ್ಬಿಟೋಲ್’ನನ್ನು ಒಳಗೊಂಡಿದೆ. ಇದು ನಮ್ಮ ಆರೋಗ್ಯಕ್ಕೆ ಬೇಕಾದ ಉತ್ತಮವಾದ ಕಬ್ಬಿಣ ಅಂಶವನ್ನು ಕೂಡ ಹೊಂದಿದೆ.

ಕಿತ್ತಳೆ ಜ್ಯೂಸ್ : ಕಿತ್ತಳೆ ಜ್ಯೂಸ್’ನಲ್ಲಿ ವಿಟಮಿನ್ C ಅತ್ಯಧಿಕವಾಗಿದೆ. ಇದು ಫೈಬರ್ಗಳನ್ನು ಹೊಂದಿದು ಮಲವನ್ನು ಸುಲಭವಾಗಿಸುತ್ತದೆ. ನಿಮ್ಮ ಜೀರ್ಣಕಾರಿ ಚಕ್ರವನ್ನು ಸುಧಾರಿಸುಲು ವಿಟಮಿನ್ ಸಿ ಸಹಾಯ ಮಾಡುತ್ತದೆ.

ಕಲ್ಲಂಗಡಿ ಹಣ್ಣಿನ ಜ್ಯೂಸ್ : ಕಲ್ಲಂಗಡಿ ಹಣ್ಣು ಬಹಳ ಪ್ರಮುಖವಾಗಿದೆ, ಏಕೆಂದರೆ ಇದರಲ್ಲಿ ಬಹಳಷ್ಟು ನೀರು ಇರುವುದರಿಂದ ನಿಮ್ಮ ದೇಹ ಹೈಡ್ರೀಕರಿಸುವಂತೆ ಮಾಡುತ್ತದೆ ( ವಿಶೇಷವಾಗಿ ಬೇಸಿಗೆಯಲ್ಲಿ). ನಿಮ್ಮ ಜೀರ್ಣಾಂಗಗಳನ್ನು ತೆರವುಗೊಳಿಸಿ ಮತ್ತು ನಿಮ್ಮ ಕರುಳಿನ ಚಲನೆಯನ್ನು ನಿಯಂತ್ರಿಸುವಲ್ಲಿ ಸಹಾಯ ಮಾಡುತ್ತದೆ.

ಅನಾನಸ್ ಜ್ಯೂಸ್ : ಮಲಬದ್ಧತೆಗೆ ಅನಾನಸ್ ಜ್ಯೂಸ್ ತುಂಬಾ ಒಳ್ಳೆಯದು. ಅನಾನಸ್ ಬ್ರೋಮೆಲಿನ್ ಎಂಬ ಅಂಶವನ್ನು ಹೊಂದಿದೆ , ಇದು ಕರುಳಿನ ಕ್ರಿಯೆಯನ್ನು ಸುಧಾರಿಸಲು ಮತ್ತು ಮಲಬದ್ಧತೆಯನ್ನು ನಿಯಂತ್ರಿಸುವ್ದಕ್ಕೆ ಸಹಾಯ ಮಾಡುತ್ತದೆ.

ಮೊಸಂಬಿ ಜ್ಯೂಸ್ : ಮೊಸಂಬಿ ಜ್ಯೂಸ್ ಮಲಬದ್ಧತೆಗೆ ಉತ್ತಮ ಪರಿಹಾರವಾಗಿದೆ. ಇದು ಕರುಳಿನ ಪ್ರದೇಶಗಳಿಂದ ಜೀವಾಣು ತೆಗೆದುಹಾಕುವುದರಲ್ಲಿ ಸಹಾಯ ಮಾಡುವ ಆಮ್ಲಗಳನ್ನು ಹೊಂದಿದೆ, ಹಾಗೆ ಇದು ತಕ್ಷಣದ ಪರಿಹಾರವನ್ನು ನೀಡುತ್ತದೆ. ತ್ವರಿತ ಫಲಿತಾಂಶಕ್ಕಾಗಿ ಮೊಸಂಬಿ ಜ್ಯೂಸ್ ’ನಲ್ಲಿ ಸ್ವಲ್ಪ ಉಪ್ಪು ಸೇರಿಸಿ ಕುಡಿಯಿರಿ.

ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿ ಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.

LEAVE A REPLY

Please enter your comment!
Please enter your name here