ಪುರುಷರ ಲೈಂಗಿಕ ಸಮಸ್ಯೆ ಇದ್ದರೆ ಪರಿಹಾರ ಇಲ್ಲಿದೆ ಒಮ್ಮೆ ಓದಿ..!!

1
21888
Loading...
Loading...
Loading...

ಕೆಲವು ಪುರುಷರು ಒಂದು ವಿಧವಾದ ಲೈಂಗಿಕ ವ್ಯತ್ಯಯವನ್ನು ಅನುಭವಿಸುತ್ತಾರೆ ಇದರಲ್ಲಿ ಶಿಶ್ನ ನಿಮಿರುವಿಕೆಯನ್ನು  ಹೊಂದಲು ಅಶಕ್ತವಾಗಿರುತ್ತಾರೆ ಅಥವಾ ಒಮ್ಮೆ ಉದ್ರೇಕಗೊಂಡ ಶಿಶ್ನದ ನಿಗುರುವಿಕೆಯು ಹಾಗೆ ಇರುವುದಿಲ್ಲ ಇದು ವಿರಾಮವಾಗಿ ಉಂಟಾಗುತ್ತದೆ ಆದರೆ ಇದು ತೀವ್ರ ತರಹದ ಸಮಸ್ಯೆ ಉಂಟು ಮಾಡಿದ್ದರೆ ಅಥವಾ ದೀರ್ಘಕಾಲದ ಸಮಸ್ಯೆಯಾಗಿದ್ದರೆ  ತಜ್ಞ ವೈದ್ಯರ ಸಹಾಯ ಪಡೆಯುವುದು ಅತ್ಯಗತ್ಯ.

ನಿಮಿರುವಿಕೆಯ ಸಮಸ್ಯೆಗಳು  ಅತಿಯಾಗಿ ಮದ್ಯಪಾನ ಮಾಡುವುದರಿಂದ ಅಥವಾ ಅತಿಯಾದ ಆಯಾಸ ದಿಂದ ಉಂಟಾಗುತ್ತದೆ ಇದು ಯಾವುದೇ ಪುರುಷನಿಗೆ ಯಾವುದೇ ಸಮಯದಲ್ಲಾದರೂ ಉಂಟಾಗಬಹುದು ಆದರೆ ಕೆಲವು ಪುರುಷರು ಈ ಅನುಭವದ ಸಮಸ್ಯೆಯನ್ನು ಹೊಂದುವುದೇ ಇಲ್ಲ.

ಮಾನಸಿಕ ಕಾರಣದಿಂದಾಗಿ ಅನಿಯಮಿತವಾದ ನಿಮಿರುವಿಕೆ ಸಮಸ್ಯೆಗಳುಂಟಾಗಬಹುದು ಶಿಷ್ಣ ನಿಮಿರು ಸಮಸ್ಯೆಯಿಂದ ನರಳುವವರು ಈ ಕೆಳಕಂಡ ಪ್ರಶ್ನೆಗಳನ್ನು ತಮಗೆ ತಾವೇ ಕೇಳಿಕೊಳ್ಳಬೇಕು.

ನಾನು ಲೈಂಗಿಕತೆಯ ಬಗ್ಗೆ ಅಪರಾಧಿ ಮನೋಭಾವನೆಯನ್ನು ಹೊಂದಿದ್ದಾನೆಯೇ?

ನನ್ನ ಸಂಬಂಧದಲ್ಲಿ ನನಗೆ ಬೇಸರ ಮೂಡಿದೆಯೆ?

ನಾನು ನನ್ನ ಸಂಗಾತಿಗೆ ಆಕರ್ಷಕವಾಗಿ ಕಾಣುತ್ತಿಲ್ಲವೇ?

ನನ್ನಲ್ಲಿ ಆತಂಕ ಮನೋಭಾವನೆ ಇದೆಯೇ?

ನನ್ನ ಲೈಂಗಿಕ ನಿರ್ವಹಣೆಯ ಬಗ್ಗೆ ನನ್ನಲ್ಲಿ ಚಿಂತೆ ಉಂಟಾಗಿದೆಯೇ?

ಯಾವ ಪುರುಷ ಮೇಲ್ಕಂಡ ಯಾವುದೇ ಪ್ರಶ್ನೆಗೆ ಹೌದು ಎಂದು ಉತ್ತರಿಸಿದರೆ ಆತನು ತನ್ನ ಸಮಸ್ಯೆಯನ್ನು ಕಂಡುಕೊಂಡು ನಿವಾರಿಸಿಕೊಳ್ಳುವ ಮಾರ್ಗಗಳನ್ನು ಕಂಡುಕೊಳ್ಳಬಹುದು, ನಿವಿರುವಿಕೆಯ ಸಮಸ್ಯೆಯನ್ನು ಪುರುಷ ಸ್ವಯಂ ತಾನೇ ಸ್ವಯಂ ಸಹಾಯದಿಂದ ಪರಿಹರಿಸಿಕೊಳ್ಳಬಹುದು ಆತನು ಸರಿಯಾದ ಸಮಯದಲ್ಲಿ ಸರಿಯಾದ ಸ್ಥಿತಿಯಲ್ಲಿ ಲೈಂಗಿಕತೆಯನ್ನು ಹೊಂದದಿರಬಹುದ.

ಕೆಳಕಂಡ ಸ್ವಸಹಾಯದ ಕ್ರಮಗಳನ್ನು ಅನುಸರಿಸುವುದರ ಮೂಲಕ ನಿವಿುರುವಿಕೆಯ ಸೋಲನ್ನು ಪರಿಹಾರಿಸಿಕೊಳ್ಳಬಹುದು.

ನಿಮಗೆ ಲೈಂಗಿಕತೆಯ ಬಗ್ಗೆ ನಿಜವಾಗಿ ಯಾವಾಗ ಇಷ್ಟದ ಭಾವನೆ ಮೂಡುತ್ತದೆಯೋ ಆಗ ಸಂಗಾತಿ ಜೊತೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿ, ಲೈಂಗಿಕ ವಿಶ್ವಾಸ ಮೂಡುವ ತನಕ ಸಾಂದರ್ಭಿಕವಾಗಿ ಹೊಂದುವುದನ್ನು ತಡೆಗಟ್ಟಿರಿ.

ಅತಿಯಾಗಿ ಆತಂಕವನ್ನು ಹೊಂದಬೇಡಿ ಸನ್ನಿವೇಶ ಸುಗಮವಾಗಿ ಸಾಗುವಂತೆ ಸಾಧ್ಯವಾದಷ್ಟು ಪ್ರಯತ್ನಿಸಿರಿ, ನೆನಪಿನಲ್ಲಿಡಿ ನೀವೊಬ್ಬ ಮನುಷ್ಯನೇ ಹೊರತು ಯಂತ್ರವಲ್ಲ ನೀವು ಸೆಕ್ಸನ್ನು ಹೊಂದುವಾಗ ಲೆಲ್ಲ ಗಡಿಯಾರದಂತೆ ಪ್ರತಿಯೊಂದು ಜರುಗಬೇಕೆಂದು ನಿರೀಕ್ಷಿಸಬೇಡಿ,  ಶಿಶ್ನ ನಿಮಿರುವಿಕೆಯ ಕೊರತೆಯ ಸಮಸ್ಯೆ ನಿರಂತರವಾಗಿದ್ದರೆ ಮೆಡಿಕಲ್ ಡಾಕ್ಟರರನ್ನು ಸಂಪರ್ಕಿಸಬೇಕು ಹಾಗೂ ವೈದ್ಯಕೀಯ ಕಾರಣಗಳನ್ನು ಪರೀಕ್ಷೆಗಳ ಮೂಲಕ ಕಂಡುಕೊಳ್ಳಬೇಕು ಉದಾಹರಣೆ ಡಯಾಬಿಟಿಸ್ ಇದೆಯೇ ಇಲ್ಲವೇ ಎಂಬುದನ್ನು ತಿಳಿದುಕೊಳ್ಳಲು ರಕ್ತ-ಮೂತ್ರ ಪರೀಕ್ಷೆಯನ್ನು ಮಾಡಿಸಬೇಕು ಹಾರ್ಮೋನ್ಗಳ ಸಮಸ್ಯೆಗಳು ಮತ್ತು ನರಗಳ ಕಾಯಿಲೆ ಅಥವಾ ರಕ್ತನಾಳಗಳ ಕಾಯಿಲೆ ಇದೆಯೇ ತಿಳಿದುಕೊಂಡು ಸಮಸ್ಯೆ ಇದ್ದರೆ ಸೂಕ್ತ ಸಲಹೆ ಸೂಚನೆಯನ್ನು ವೈದ್ಯರಿಂದ ಪಡೆಯುವುದು ಅತ್ಯಗತ್ಯ ಕೆಲವು ಔಷಧಿಗಳ ಸೇವನೆ ಅಂದರೆ ಅಧಿಕ ರಕ್ತದೊತ್ತಡಕ್ಕೆ ಸೇವಿಸುವ ಔಷಧಿ ಗಳಿಂದಲೂ ಕೆಲವೊಮ್ಮೆ ತಾತ್ಕಾಲಿಕವಾಗಿ ನಿಮಿರುವಿಕೆ ಉಂಟಾಗದಿರಬಹುದು.

Loading...

1 COMMENT

LEAVE A REPLY

Please enter your comment!
Please enter your name here