ಎಲೆಕೋಸಿನಿಂದ ಮಾನವನ ದೇಹಕ್ಕೆ ಆಗುವ ಅದ್ಭುತ ಲಾಭಗಳ ಬಗ್ಗೆ ನಿಮಗೆ ಗೊತ್ತಾ

0
15999

ಎಲೆಕೋಸು ಎಂದರೆ ಸಾಮಾನ್ಯವಾಗಿ ಕೆಲವರಿಗೆ ಇದು ಅಷ್ಟು ಇಷ್ಟವಾಗುವುದಿಲ್ಲ, ಮೂಗು ಮುರಿಯುವಂತಹ ತರಕಾರಿಗಳ ಸಾಲಿನಲ್ಲಿ ಎಲೆಕೋಸನ್ನು ಇಟ್ಟುಕೊಂಡಿದ್ದಾರೆ, ತುಂಬಾ ಅಡಿಗೆಗಳನ್ನು ಇದರಿಂದ ತಯಾರು ಮಾಡಲು ಸಾಧ್ಯವಾಗುವುದಿಲ್ಲ, ಆದ್ದರಿಂದಲೇ ಬಹುತೇಕ ಜನರು ಇದರ ಬಳಕೆಯನ್ನು ಮಾಡುವುದಿಲ್ಲ, ಇನ್ನು ಕೆಲವರು ಇದರ ವಾಸನೆಯನ್ನು ಇಷ್ಟಪಡುವುದಿಲ್ಲ, ಎಲೆಕೋಸಿನಿಂದ ಪಲ್ಯ, ಸಾಂಬಾರ್, ಕೋಸಂಬರಿ ಮತ್ತು ಸ್ನಾಕ್ಸ್, ಮಂಚೂರಿ, ಬರ್ಗರ್ ಗಳಂತಹ ತಿಂಡಿಗಳನ್ನು ತಯಾರಿಸಲು ಇದರ ಬಳಕೆ ಮಾಡಲಾಗುತ್ತದೆ.

ಆದರೆ ಎಲೆಕೋಸಿನ ರಸವನ್ನು ತೆಗೆದು ಸೇವನೆ ಮಾಡುವ ಪದ್ಧತಿ ಹಲವರಿಗೆ ತಿಳಿದಿರುವುದಿಲ್ಲ, ಅಂತಹ ಎಲೆಕೋಸಿನ ಅತ್ಯಮೂಲ್ಯವಾದ ಆರೋಗ್ಯ ಲಾಭಗಳ ಬಗ್ಗೆ ತಿಳಿಸುವ ವಿಡಿಯೋ ಕೆಳಗೆ ನೀಡಲಾಗಿದ್ದು ಒಮ್ಮೆ ಸಂಪೂರ್ಣವಾಗಿ ಈ ವಿಡಿಯೋ ನೋಡಿ, ಹಾಗೂ ಆರೋಗ್ಯ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಮರೆಯದೆ ನಮ್ಮ ಕಾಮೆಂಟ್ಸ್ ನಲ್ಲಿ ಬರೆದು ತಿಳಿಸಿ.

ಎಲೆಕೋಸು ಒಂದು ತರಕಾರಿಸಸ್ಯ (ಕ್ಯಾಬೇಜ್). ಇದು ಒಂದು ಜನಪ್ರಿಯ ತರಕಾರಿ, ಆಹಾರವನ್ನು ಸಂಗ್ರಹಿಸಿಕೊಂಡಿರುವ ಇದರ ಬಿಳಿಯ ಎಲೆಗಳು ಒಂದರ ಮೇಲೊಂದು ಕವುಚಿಕೊಂಡು ಗೆಡ್ಡೆಯ ರೂಪವನ್ನು ತಾಳಿರುತ್ತವೆ. ಈ ಗೆಡ್ಡೆಯೇ ಹುಳಿ, ಪಲ್ಯ ಇತ್ಯಾದಿ ಅಡಿಗೆಗಳಿಗೆ ಬಳಸುವ ತರಕಾರಿ. ವಿಶೇಷವಾಗಿ ಯುರೋಪ್ ಮತ್ತು ಏಷ್ಯ ಖಂಡಗಳ ತೀರ ಪ್ರದೇಶಗಳಲ್ಲಿ ಬಹು ಹಿಂದಿನಿಂದಲೂ ವ್ಯವಸಾಯದಲ್ಲಿದೆ. ಹಸಿಯ ಕೋಸಿನಲ್ಲಿ ಎ, ಬಿ ಮತ್ತು ಬಿ2 ಜೀವಾತು ಗಳಿವೆ. ಸಿ ಜೀವಾತುವಂತೂ ಅತಿ ಹೆಚ್ಚಾ ಗಿದೆ. ಕೋಸನ್ನು ಬೇಯಿಸಿದರೆ ಬಿ ಮತ್ತು ಬಿ2 ಅಂಶಗಳು ನಾಶವಾಗಿ ಎ ಮತ್ತು ಸಿ ಗಳು ಅತ್ಯಲ್ಪ ಪ್ರಮಾಣದಲ್ಲಿ ಉಳಿಯುತ್ತವೆ. ಆದ್ದರಿಂದ ಕೋಸನ್ನು ಹಸಿಯಾಗಿ ಅಥವಾ ಅರೆಬೇಯಿಸಿ ಉಪಯೋಗಿಸಬೇಕು. ಪಾಶ್ಚಾತ್ಯರಲ್ಲಿ ಬೇಯಿಸದೆ ತಿನ್ನುವ ಪದ್ದತಿ ಹೆಚ್ಚು. ಹೊರಭಾಗದ ಹಸಿರು ಎಲೆಗಳಲ್ಲಿ ಇರುವಷ್ಟು ಎ ಅಂಶ ಒಳಭಾಗದ ಎಲೆಗಳಲ್ಲಿ ಇಲ್ಲ.

LEAVE A REPLY

Please enter your comment!
Please enter your name here