ಎಚ್ಚರ ಪ್ರತಿ ದಿನ ನಿಮಗೆ ಬ್ರೆಡ್ ತಿನ್ನುವ ಅಭ್ಯಾಸವಿದ್ದರೆ ಮೊದಲು ಇಲ್ಲಿ ಓದಿ..!!

0
23
Loading...
Loading...
Loading...

ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಬೆಳಗ್ಗೆ ಹಾಲಿನೊಂದಿಗೆ ಬ್ರೆಡ್ಡನ್ನು ತಿನ್ನುವ ಅಭ್ಯಾಸ ಬಹುತೇಕ ಜನರು ಹೊಂದಿರುತ್ತಾರೆ, ಇನ್ನು ಕೆಲವರು ಆರೋಗ್ಯ ಸ್ಥಿತಿ ಕೆಟ್ಟಾಗ ಅಂದರೆ ಉಷಾರು ತಪ್ಪಿದಾಗ ಯಾವುದೇ ಆಹಾರ ಸೇವಿಸಲು ಆಗದಿದ್ದಾಗ ಬ್ರೆಡ್ಡನ್ನು ತಿನ್ನುತ್ತಾರೆ, ಈ ಬ್ರೆಡ್ ಅನ್ನು ತಯಾರಿಸುವ ಬಗ್ಗೆ ನಿಮಗೆ ಸಂಪೂರ್ಣವಾಗಿ ಗೊತ್ತಿಲ್ಲ ಆದ್ದರಿಂದ ಹಲವು ಮಂದಿ ಹಲವು ರೀತಿಯ ಅಭಿಪ್ರಾಯಗಳನ್ನು ಹೊಂದಿರುತ್ತಾರೆ, ಹಾಗೂ ಈ ಬ್ರೆಡ್ ನಮ್ಮ ಆರೋಗ್ಯದ ಮೇಲೆ ಎಷ್ಟು ಪರಿಣಾಮ ಬೀಳುತ್ತದೆ ಎನ್ನುವುದು ಬಗ್ಗೆ ತಿಳಿಯೋಣ.

ಬಹುತೇಕ ಬ್ರೆಡ್ ತಯಾರಕರು ಬ್ರೆಡ್ ಹಿತವಾಗಿ ಅಂದರೆ ಸ್ಮೂತ್ ಆಗಿರಲಿ ಎಂದು ಪೊಟ್ಯಾಶಿಯಂ ಬ್ರೋ ಮೈಡ್ ಎಂಬ ರಾಸಾಯನಿಕವನ್ನು ಬಳಸುತ್ತಾರೆ, ಈ ಅಂಶ ಆರೋಗ್ಯಕ್ಕೆ ಬಲು ಹಾನಿಕಾರಕ ಎಂದು ವಿಜ್ಞಾನ ಮತ್ತು ಪರಿಸರ ಅಧ್ಯಯನ ಕೇಂದ್ರ ಸ್ಪಷ್ಟಪಡಿಸಿದೆ.

ನಾವು ಚಿಕ್ಕ ಮಕ್ಕಳಿಗೆ ಬ್ರೆಡ್ಡನ್ನು ತಿನ್ನಿಸುವುದರಿಂದ ಅವರ ಜೀರ್ಣಕ್ರಿಯೆಯಲ್ಲಿ ಬಹಳಷ್ಟು ಸಮಸ್ಯೆಗಳು ಆಗಬಹುದು ಕಾರಣ ಬೇಗನೆ ಜೀರ್ಣವಾಗುವುದಿಲ್ಲ, ಜೀರ್ಣಕ್ರಿಯೆಗೆ ತೊಂದರೆಯಾಗಿ ಮಲಬದ್ಧತೆ ಸಮಸ್ಯೆ ಸಹ ಇದರಿಂದ ಕಾಣುತ್ತದೆ.

ಬ್ರೆಡ್ ಅನ್ನು ಮಾಡುವುದು ಮೈದಾ ಹಿಟ್ಟಿನಿಂದ, ಆದ್ದರಿಂದ ಬ್ರೆಡ್ ಮೈ ತೂಕವನ್ನು ಹೆಚ್ಚಿಸುತ್ತದೆ, ತೂಕವನ್ನು ಕಡಿಮೆ ಮಾಡಲು ಬಯಸುವವರು ಈ ಬ್ರೆಡ್ ನಿಂದ ಆದಷ್ಟು ದೂರವಿದ್ದರೆ ಒಳಿತು.

ಬ್ರೆಡ್ ನಿಂದ ನಿಮಗೆ ಹೊಟ್ಟೆ ತುಂಬುತ್ತದೆಯೇ ಹೊರತು ಯಾವುದೇ ಪೋಷಕಾಂಶಗಳು ಇದರಿಂದ ನಿಮಗೆ ಸಿಗುವುದಿಲ್ಲ, ಸಾಲದಕ್ಕೆ ಈ ಬ್ರೆಡ್ ನಲ್ಲಿ ಶುಗರ್ ಅಂಶ ಹೆಚ್ಚಾಗಿರುವುದರಿಂದ ಡಯಾಬಿಟಿಸ್ ಇರುವವರು ಇದನ್ನು ತಿನ್ನಬಾರದು, ಇದು ದೇಹದಲ್ಲಿ ಸಕ್ಕರೆ ಅಂಶವನ್ನು ಹೆಚ್ಚಿಸುತ್ತದೆ, ಇದರಿಂದ ಕೊಬ್ಬು ಹಾಗೂ ಕೊಲೆಸ್ಟ್ರಾಲ್ ನಿಮ್ಮ ದೇಹದಲ್ಲಿ ವೃದ್ಧಿಯಾಗುತ್ತದೆ.

Loading...

LEAVE A REPLY

Please enter your comment!
Please enter your name here