ಎಚ್ಚರ ತಪ್ಪಾಗಿ ದೇವರಿಗೆ ಆರತಿ ಮಾಡಿದರೆ ಏನಾಗುತ್ತೆ ಅಂತ ಒಮ್ಮೆ ಓದಿ ನೋಡಿ..!!

0
646

ದೇವರಿಗೆ ಆರತಿ ಮಾಡುವ ಪದ್ಧತಿ ಪುರಾತನ ಕಾಲದಿಂದ ಬಂದಿರುವುದು, ಆರತಿ ಎಂಬ ಕನ್ನಡ ಪದ ಬಂದಿರುವುದು ಆರತ್ರಿಕ ಎಂಬ ಸಂಸ್ಕೃತ ಶಬ್ದದಿಂದ, ದೇವರಿಗೆ ಆರತಿ ಬೆಳಗುವುದರಿಂದ ನಿಮ್ಮ ಮನೆಯಲ್ಲೇ ಧನಾತ್ಮಕ ಶಕ್ತಿ ತುಂಬುತ್ತದೆ, ಮನಸ್ಸು ಸ್ವಚ್ಛವಾಗುತ್ತದೆ, ಶಾಂತಿ ಸಿಗುತ್ತದೆ, ಇದರಿಂದ ಲಕ್ಷಿ ಪ್ರಸನ್ನಳಾಗಿ ನಿಮ್ಯ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ, ಅದೇ ಆರತಿಯನ್ನು ತಪ್ಪಾಗಿ ಬೆಳಗಿದರೆ ಆರ್ಥಿಕ ಸಮಸ್ಯೆಗಳು ಹೇದೂರಾಗುತ್ತದೆ, ಹಾಗಾದರೆ ಆರತಿ ಬೆಳಗುವುದು ಹೇಗೆ ಎಂಬುದನ್ನು ಇಂದು ತಿಳಿಸುತ್ತೇವೆ.

ದೀಪದಲ್ಲಿ ಆರತಿ ಬೆಳಗಳು ಇಚ್ಛಿಸುವರು ಸಾಮಾನ್ಯವಾಗಿ ತುಪ್ಪದ ದೀಪ ಅಥವಾ ಎಣ್ಣೆಯ ದೀಪವನ್ನು ಬಳಸುತ್ತಾರೆ, ಕರ್ಪೂರದಿಂದಲೂ ಆರತಿ ಬೆಳಗುವ ಪದ್ಧತಿ ಇದೆ, ಇದರ ಜೊತೆಯಲ್ಲಿ ಭಜನೆ, ಮಂತ್ರಘೋಷ ಕೂಡ ಇರಬೇಕು.

ಆರತಿ ಸಮಯದಲ್ಲಿ ಹೂವನ್ನು ಭೂಮಿಯ ಸೂಚಕವಾಗಿ ಹಾಗು ನೀರು, ತುಪ್ಪದ ದೀಪವನ್ನು ಆಕಾಶದ ಸೂಚಕವಾಗಿ, ಶಂಖ ನಾದವನ್ನು ಮನಸ್ಥಿತಿಯ ಸೂಚಕವಾಗಿ, ಭಜನೆ ಹಾಗು ಮಂತ್ರಘೋಷಗಳ ನಡುವೆ ಆರತಿಯನ್ನ ಮಾಡಬೇಕು.

ಸಾಂಪ್ರದಾಯಕವಾಗಿ ದೇವಸ್ಥಾನಗಳಲ್ಲಿ ರಾತ್ರಿಯೊತ್ತು ಪೂಜೆ ಮುಗಿಸುವ ಮುನ್ನ ಹಾಗು ಬೆಳಗ್ಗೆ ಆರಂಭದಂದು ಆರೈಯನ್ನು ದೇವರಿಗೆ ಅರ್ಪಿಸಲಾಗುವುದು, ಹಾಗು ಸಂಜೆ ಸಮಯದಲ್ಲಿ ಆರತಿಯನ್ನ ಮಾಡಲಾಗುವುದು, ನೀವ್ ಉಮನೆಯಲ್ಲಿ ಸಮಯವಲ್ಲದ ಸಮಯದಲ್ಲಿ ಆರತಿ ಮಾಡಬೇಡಿ.

ಹಾಗು ಹಿರಿಯರ ಪ್ರಕಾರ ಹಿಂದೆ ಎಲ್ಲಾ ದೇವಾಲಯಗಳಲ್ಲೂ ಗರ್ಭಗುಡಿಯು ಭಕ್ತರು ನಿಲ್ಲುವ ಸ್ಥಳದಿಂದ ಬಹುದೂರದಲ್ಲೇ ಇರುತ್ತಿದ್ದುವು ಮತ್ತು ಅದು ಕತ್ತಲಿಂದ ಕೂಡಿದ್ದು ಈಗಿನಂತೆ ವಿದ್ಯುದ್ದೀಪವನ್ನು ಗರ್ಭಗುಡಿಗಳಲ್ಲಿ ಉರಿಸುತ್ತಿರಲಿಲ್ಲ. ಸಣ್ಣದಾದ ದೀಪವೊಂದು ಸದಾ ಉರಿಯುತ್ತಿತ್ತು. ಆದರೆ ಆ ದೀಪದ ಬೆಳಕಿನಲ್ಲಿ ದೇವರ ಮುರ್ತಿಯ ದರ್ಶನವಾಗುತ್ತಿರಲಿಲ್ಲ. ಅಂತಹ ಸಂದರ್ಭದಲ್ಲಿ ದೇವರ ಮೂರ್ತಿಯನ್ನು ನೋಡುವ ಸಲುವಾಗಿಯೇ ಈ ಆರತಿ ಎಂಬುದು ಹುಟ್ಟಿಕೊಂಡಿತು.

LEAVE A REPLY

Please enter your comment!
Please enter your name here