ದಾಸವಾಳದ ಪ್ರಮುಖ 5 ಅರೋಗ್ಯ ಉಪಯೋಗಗಳು..!!

0
3032
Loading...

ದಾಸವಾಳವು ದೇವರ ಅಲಂಕಾರಕ್ಕೆ ಸೀಮಿತವಲ್ಲದೆ ಆರೋಗ್ಯಕ್ಕೂ ಬಹಷ್ಟು ಉಪಕಾರಿ, ದಾಸವಾಳ ಉರಿಮೂತ್ರ, ಅಧಿಕ ರಕ್ತಸ್ರಾವ, ಬಾಯಾರಿಕೆ ಹಾಗು ಧಣಿವು ಹೀಗೆ ಹಲವು ರೀತಿಯ ಸಮಸ್ಯೆಗಳಿಗೆ ಈ ಒಂದು ಹೂ ರಾಮ ಬಾಣ ಎಂದರೆ ತಪ್ಪಾಗಲಾರದು, ಹೇಗೆ ಎಂದು ತಿಳಿಸಿದ್ದೇವೆ ಈ ಕೆಳಗೆ ಓದಿ.

ಬಿಳಿದಾಸವಾಳದ ಹೂವಿನ ರಸಕ್ಕೆ ಕಲ್ಲುಸಕ್ಕರೆ ಮತ್ತು ಹಾಲು ಬೆರಸಿ ಕುಡಿಯುವುದರಿಂದ ಉರಿಮೂತ್ರ ನಿವಾರಣೆಯಾಗುತ್ತದೆ, ಹಾಗು ದೇಹದಲ್ಲಿ ಉಷ್ಣದ ಪ್ರಮಾಣ ಹೆಚ್ಚಿದ್ದರೆ ಕಡಿಮೆ ಮಾಡುತ್ತದೆ.

ಋತು ಸಮಯದಲ್ಲಿ ಸ್ತ್ರಿಯರು ದಾಸವಾಳದ ಹೂವಿನ ರಸವನ್ನು ಹಾಲಿನೊಡನೆ ಸೇವಿಸಿದರೆ ಅಧಿಕ ರಕ್ತಸ್ರಾವದಿಂದ ಬಳಲುವುದು ಕಡಿಮೆಯಾಗುತ್ತದೆ.

ಮಕ್ಕಳು ಸಂಜೆ ಆಟವಾಡಿ ಮನೆಗೆ ಬಂದಾಗ ಅವರಿಗೆ ದಾಸವಾಳದ ಹೂವಿನ ರಸ ಅಥವಾ ದಾಸವಾಳದ ಗುಲ್ಕಂನ್ ತಿನ್ನಿಸುವುದರಿಂದ ಅವರಿಗೆ ಬಾಯಾರಿಕೆ, ದಣಿವು ತಕ್ಷಣ ಕಡಿಮೆಯಾಗುತ್ತದೆ.

ಪ್ರತಿದಿನ 2 ರಿಂದ 3 ದಾಸವಾಳದ ಹೂಗಳನ್ನು ಹಸಿಯಾಗಿ ಜಗಿದು ನುಂಗಿದರೆ ರಕ್ತ ಮೂಲವ್ಯಾಧಿ ರೋಗಕ್ಕೆ ಒಳ್ಳೆಯದು.

ಕೊಬ್ಬರಿ ಎಣ್ಣೆ ಅಥವಾ ಎಳ್ಳೆಣ್ಣೆಗೆ ಬಿಳಿ ದಾಸವಾಳದ ಹೂ ಮತ್ತು ಗರಿಕೆ ಹುಲ್ಲಿನ ರಸವನ್ನು ಸೇರಿಸಿ ಕುದಿಸಿ ಆರಿಸಿಟ್ಟುಕೊಂಡು ಸುಟ್ಟಗಾಯಗಳಿಗೆ ಲೇಪಿಸಿದರೆ ಗಾಯ ಬೇಗನೆ ಗುಣವಾಗುತ್ತದೆ.

ಬಿಳಿದಾಸವಾಳದ ಹೂ ಅಥವಾ ಎಲೆಯನ್ನು ಜಜ್ಜಿ ಆ ರಸವನ್ನು ಕೂದಲಿನ ಬುಡಕ್ಕೆ ಹಚ್ಚಿ ಅರ್ಧಗಂಟೆ ಬಿಟ್ಟು ಸ್ನಾನ ಮಾಡಿದರೆ ಕೂದಲು ಉದುರುವುದು ನಿಂತು ಕೂದಲು ಸೊಂಪಾಗಿ ಬೆಳೆಯುತ್ತದೆ.

ಬಿಳಿದಾಸವಾದ ಹೂವಿನ ರಸವನ್ನು ಸೇವಿಸಿದರೆ ಚರ್ಮರೋಗದಿಂದ ಬಳಲುವವರಿಗೆ ಒಳ್ಳೆಯದು.

ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿ ಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.

LEAVE A REPLY

Please enter your comment!
Please enter your name here