ನಾವು ಏಕೆ ಓಂ ಕಾರವನ್ನು ಜಪ್ಪಿಸುತ್ತೇವೆ..?

0
1108

ಓಂ ಇದು ಪರಮಾತ್ಮನ ಒಂದು ನಾಮ ಅ ಉ ಮ ಎಂಬ ಮೂರು ಅಕ್ಷರಗಳ ಸಂಗಮವೇ ಆಗಿದೆ, ಆ ಕಾರಣದಿಂದಲೇ ಶಬ್ದವು ಗಂಟಲಿನ ಮೂಲಕ ಸುಗಮವಾಗುವುದು ಮಧ್ಯ ಭಾಗದ ಅಕ್ಷರವು ಇರುವುದೇ ಉ ಕಾರದಲ್ಲಿ ಹಾಗೂ ಬಾಯಿಯನ್ನು ಮುಚ್ಚಿದಾಗ ಹೊರಬರುವ ಶಬ್ದವೇ ಮುಕ್ತಾಯವಾಗುವ ಮ್ ಕಾರ, ಈ ಮೂಲಕ್ಷರಗಳು ಟ್ ಈ ತ್ರಿಪುಟಗಳನ್ನು ಸೂಚಿಸುತ್ತವೆ, ಉದಾಹರಣೆ ಅವಸ್ಥೆಗಳು ಜಗ್ರತ್, ಸ್ವಪ್ನ ಮತ್ತು ಸುಷುಪ್ತಿ, ತ್ರಿಮೂರ್ತಿ ದೇವತೆಗಳು ಬ್ರಹ್ಮ ವಿಷ್ಣು ಮತ್ತು ಮಹೇಶ್ವರ, ಮೂರು ವೇದಗಳು ಋಗ್ ಯಜುರ್ ಮತ್ತು ಸಮ, ಶಿವನು ಇವೆಲ್ಲವೂ ಹಾಗೂ ಇವುಗಳಿಗಿಂತಲೂ ಅಧಿಕ ಅತೀತವಾಗಿ ಇರುತ್ತಾನೆ, ರೂಪ ತಿತ, ಗುಣಾತೀತನಾಗಿರುವ ಪರಮಾತ್ಮನನ್ನು ಎಂದು ಓಂಕಾರದ ಜಪದ ಮಧ್ಯದಲ್ಲಿ ಉಂಟಾಗುವ ಮೌನದಲ್ಲಿ ಗುರುತಿಸಬೇಕು ಓಂಕಾರವನ್ನು ಪ್ರಾಣವವೆಂದು ಕರೆಯುವುದುಂಟು ಅಂದರೆ ಯಾವ ಶಬ್ದದ ಮೂಲಕ ಪರಮಾತ್ಮನನ್ನು ಸೂಚಿಸಲ್ಪಡುವುದೋ ಅದು ಪ್ರಣವವೇದದ ಸಮಗ್ರ ಜ್ಞಾನ ಸಾರವು ಪ್ರತಿಷ್ಠಿತವಾಗಿದೆ.

ಓಂ ಮತ್ತು ಅಥ ಎಂಬ ಪದಗಳನ್ನು ಉಚ್ಚರಿಸಿಯೇ ದೇವನು ಈ ಪ್ರಪಂಚವನ್ನು ಸೃಷ್ಟಿಸಿದನೆಂದು ಶಾಸ್ತ್ರಗಳು ಅಭಿಮತವಾಗಿದೆ ಆದ ಕಾರಣ ಯಾವುದೇ ಕೆಲಸವನ್ನು ಆರಂಭಿಸುವ ಮುನ್ನ ಓಂಕಾರವನ್ನು ಜಪಿಸಿದರೆ ಅ ನಾದವು ನಮ್ಮ ಅಂತರಾಳದಲ್ಲಿ ಹೊಕ್ಕು ಶುಭ ಹಾಗೂ ಉತ್ತಮ ಫಲಗಳನ್ನು ನೀಡಬಲ್ಲದು.

ಓಂಕಾರದ ಜಪವು ಘಂಟಾನಾದದ ಧ್ವನಿಯನ್ನು ಹೋಗುವಂತಿರಬೇಕಲ್ಲದೆ, ಬೇರೆ ರೀತಿಯಗಬಾರದು, ಇದು ಮನಸ್ಸಿಗೆ ಆಹ್ಲಾದಕಾರವಾದ ಪ್ರಶಾಂತತೆಯ ಅನುಭವ ವನ್ನು ಮಾಡುತ್ತದೆ ಅಲ್ಲದೆ ಇಡೀ ವಿಶ್ವವನ್ನು ಏಕತೆಯಲ್ಲಿ ಬೆಸೆಯುತ್ತದೆ, ಭಕ್ತರು ಓಂಕಾರದಲ್ಲಿ ಜ್ಞಾನಮಗ್ನರಾಗಿ ಉಪಾಸನೆಯನ್ನು ಜೀವನ್ಮುಕ್ತಿಯನ್ನು ಪ್ರಾಪ್ತಿ ಮಾಡಿಕೊಳ್ಳ ಬೇಕು ಇಂತಹ ಮಹಾ ಮೂಲ ಬಿಂದುಯುಕ್ತ ಅಕ್ಷರ ಓಂ ಅನ್ನು ಬೇರೆ ಬೇರೆ ತೆರನಾಗಿ ಬರೆಯುತ್ತಾರೆ ಗಣಪತಿಯನ್ನು ಪ್ರತಿಬಿಂಬಿಸುವ ಬರಹ ಮಾತ್ರ ಹೆಚ್ಚು ಬಳಕೆಯಲ್ಲಿದೆ, ಮೇಲಿನ ಅರ್ಧ ವೃತ್ತಾಕಾರವು ಶಿರವನ್ನು ಕೆಳಗಿನ ದೊಡ್ಡದಾದ ಅರ್ಧ ವೃತ್ತವು ಉದರವನು ಪಕ್ಕದಲ್ಲಿರುವ ಬಾಲವು ಸೊಂಡಿಲನ್ನು ಮೇಲಿನ ಅರ್ಧ ಚಂದ್ರಾಕಾರದ ಮತ್ತು ಅದರೊಳಗಿರುವ ಬೊಟ್ಟು ಗಣಪತಿಯ ಕೈಯಲ್ಲಿರುವ ಮೋದಕವನ್ನು ಸೂಚಿಸುತ್ತದೆ.

ಹೀಗೆ ಓಂಕಾರವು ಸಾಧನ ಮತ್ತು ಸಾಧ್ಯ, ಜಗತ್ತು ಮತ್ತು ಈಶ್ವರ, ತಾಕಿತ ಮತ್ತು ಪರಮಾರ್ಥಕ, ಸುಗುಣ ಮತ್ತು ನಿರ್ಗುಣ ಇವೆಲ್ಲವುಗಳನ್ನು ಸಮರ್ಥವಾಗಿ ಬಿಂಬಿಸುತ್ತದೆ, ಈ ಬೀಜ ಮಂತ್ರ ಜಪಿಸಲು ಹಾಗೂ ಚಿಯಾಗಿ ಬಳಸಲು ಬಹಳ ಉಪಯುಕ್ತವಾಗಿದೆ ಎಂದರೆ ಅತಿಶಯೋಕ್ತಿಯಾಗಲಾರದು, ಜಗತ್ತನ್ನು ವ್ಯಾಪಿಸಿದ ಓಂಕಾರ ಈ ಜಗತ್ತೇ ಆಗಿದೆ ಎಂಬುದು ಮನುಕುಲದ ಪ್ರಮಾಣವಾಗಿರುವುದರಿಂದ ಎಲ್ಲೆಡೆ ಇಷ್ಟೊಂದು ಶಾಂತಿ ನೆಲೆಸಿದೆ ಅದಕ್ಕಾಗಿ ಸರ್ವರೂ ಈ ಸೂತ್ರವನ್ನು ಪಠಿಸಿದರೆ ಜೀವನ ಸಾರ್ಥಕವಾಗುವುದು.

LEAVE A REPLY

Please enter your comment!
Please enter your name here