ಚಿನ್ನದ ದೀಪವನ್ನು ಹಚ್ಚುವುದಕ್ಕಿಂತ ಮಣ್ಣಿನ ದೀಪ ಹಚ್ಚುವುದರಿಂದ ಸಿಗುವ ಲಾಭಗಳು ಎಷ್ಟಿದೆ ಗೊತ್ತಾ..?

0
923

ಭಾವನಾತ್ಮಕತೆ : ಮನುಷ್ಯ ಮೊದಲು ಭಾವನೆಗಳಲ್ಲಿ ಬಂದಿ, ಅನಂತರ ಮಾತ್ರ ಅವನು ವ್ಯವಹಾರ, ಬೇರೆ ವೃತ್ತಿ ಇಂತಹ ಸಂಗತಿಗಳನ್ನು ಆಲೋಚನೆ ಮಾಡ ಬಲ್ಲ, ಒಂದು ಮಾತು ಸತ್ಯ, ಅದೇನೆಂದರೆ ಮನುಷ್ಯನು ಮಣ್ಣಿನಿಂದ ಬಂದು ಕೊನೆಗೆ ಹೋಗುವುದು ಸಹ ಮಣ್ಣಿಗೆ ಅಲ್ಲವೇ? ಜೀವನ ಯಾವಾಗಲೂ ಇಂತಹ ಭಾವನೆಗಳ ತಳಹದಿಯ ಮೇಲೆ ನಿಂತಿರುತ್ತದೆ ಎನ್ನುವುದು ನಿಜ.

ಈ ರೀತಿ ನಾವು ಮಣ್ಣಿನ ಕಡೆಗೆ ಅನುಕ್ಷಣ ಸಾಗುತ್ತೇವೆ, ಮನಸ್ಸು ಮಣ್ಣಿನ ವಾಸನೆ, ಮಣ್ಣು ಕಾಣುತ್ತಿದ್ದಂತೆ ತಾಯಿ ಹಸು ಕಂಡ ಕರುವಿನಂತೆ ಜಿಗಿಯುತ್ತದೆ, ಅಂತಹ ದಿವ್ಯವಾದ ಸ್ಪಂದನೆ ಮನುಷ್ಯನಿಂದ ಮಣ್ಣು ಕಂಡ ಕೂಡಲೇ ಹರಿದಾಡುತ್ತದೆ, ಹೀಗೆ ಮಣ್ಣಿನ ಹಣತೆಯಲ್ಲಿ ದೀಪ ಹಚ್ಚುವುದು ಸರ್ವಶ್ರೇಷ್ಠ ಎಂದು ಸಾಬೀತು ಮಾಡಲು ಬೇರೆ ಮಾತು ಬೇಕಿಲ್ಲ ಅಲ್ಲವೇ ?

ವಾಸ್ತವಿಕತೆ : ಸ್ಟೀಲ್ ಹಾಗೂ ಬೇರೆ ಬೇರೆ ಲೋಹಗಳಿಂದ ಮಾಡಿರುವ ಹಣತೆಯಲ್ಲಿ ದೀಪ ಹಚ್ಚುವುದರಿಂದ ರಾಸಾಯನಿಕಗಳು ಬಿಡುಗಡೆಯಾಗಿ ಪ್ರಕೃತಿ ಕಲುಷಿತವಾಗುತ್ತದೆ, ಅದೇ ರೀತಿ ರಾಸಾಯನಿಕಗಳು ಹೊಗೆಯ ರೂಪದಲ್ಲಿ ಹೊರ ಹಾಕುವ ವಾಸನೆ ಸಹ ಚರ್ಮರೋಗ, ಅಲ್ಲರ್ಜಿ ತಂದುಕೊಡುತ್ತದೆ, ಹೀಗಾಗಿ ಮಣ್ಣಿನ ಹಣತೆ ಮಾತ್ರ ಉತ್ತಮ, ಮನುಷ್ಯನ ಪಾಲಿಗೆ ಮಣ್ಣು ಸಂಜೀವಿನಿ, ಮಣ್ಣು ಬದುಕು ಕಟ್ಟಿಕೊಡುತ್ತದೆ.

ವೈಚಾರಿಕತೆ : ಮಣ್ಣಿನ ಹಣತೆ ಬೆಳಕು ನೀಡುವಂತೆ, ಮಣ್ಣು ಬದುಕಿಗೆ ಆಸರೆ, ಆಹಾರ, ಅನ್ನ, ಸಂಪತ್ತು ಹಾಗೂ ಆತ್ಮವಿಶ್ವಾಸ ನೀಡುತ್ತದೆ, ಕೇವಲ ಮಣ್ಣು ಇದ್ದರೆ ಸಾಕು, ಮನುಷ್ಯ ಸಾವಿರಾರು ಜನರಿಗೆ ಬೇಕಾದರೂ ಆಹಾರ ಒದಗಿಸಿ ಕೊಡಬಲ್ಲ, ನೋಡಲು ಮಣ್ಣು ಎಂದು ಅನಿಸಿದರೂ ಸಕಲ ಸಂಪತ್ತು ನೀಡುವ ಶಕ್ತಿ ಮಣ್ಣಿಗೆ ಇದೆ.

LEAVE A REPLY

Please enter your comment!
Please enter your name here