ಬೆನ್ನುನೋವಿಗೆ ತಲೆಕೆಡಿಸಿಕೊಳ್ಳದೆ ಈ ರೀತಿ ಮಾಡಿ ಸಾಕು..!!

0
4408

ಬೆನ್ನು ನೋವು ಮನುಷ್ಯನು ಅನುಭವಿಸುತ್ತಿರುವ ಯಾತನೆಯಾಗಿದೆ ಬೆನ್ನು ನೋವಿಗೆ ಏನು ಕಾರಣವೆಂಬುದು ಕೆಲವು ವರ್ಷಗಳಿಂದ ವೈಜ್ಞಾನಿಕ ಕಾರ್ಯ ನಡೆದು ಬೆನ್ನು ನೋವಿಗೆ ಏನು ಕಾರಣ ಎಂಬುದರ ಬಗ್ಗೆ ವಿಶ್ಲೇಷಿಸಿ ಸ್ಪಷ್ಟ ಕಾರಣಗಳನ್ನು ಗುರುತಿಸಿದ್ದಾರೆ ಒಂದು ಅಂದಾಜಿನ ಪ್ರಕಾರ ಮನುಷ್ಯನ ಜೀವಿತ ಕಾಲದಲ್ಲಿ ಪ್ರತಿ 10 ಜನಗಳಲ್ಲಿ ಎಂಟು ಜನ ಬೆನ್ನು ನೋವಿನಿಂದ ನರಳುತ್ತಾರೆ ಎಂಬುದು ತಿಳಿದುಬಂದಿದೆ ಬೆನ್ನು ನೋವು ತಾತ್ಕಾಲಿಕವಾಗಿ ಯಾತನೆಯನ್ನು ಅನುಭವಿಸುವಂತೆ ಮಾಡುತ್ತದೆ.

ಬೆನ್ನುನೋವಿಗೆ ಅನೇಕ ಕಾರಣಗಳಿವೆ ಬೆನ್ನು ಹುರಿಯ ಕೆಳಭಾಗ ಸೊಂಟಾ ಪಾವನಿಯ ಭಾಗಗಳು ಅನೇಕರಲ್ಲಿ ನೋವನ್ನುಂಟು ಮಾಡುತ್ತದೆ ಇದಕ್ಕೆ ಅತಿಯಾಗಿ ಕೆಲಸ ಅಥವಾ ವ್ಯಾಯಾಮವಿಲ್ಲದ ಮಾಂಸಖಂಡಗಳೆ ಕಾರಣವಾಗಿದೆ, ಆಯಾಸಗೊಂಡ ಮಾಂಸಖಂಡಗಳು ಇದ್ದಕ್ಕಿದ್ದಹಾಗೆ ಸಂಭಾಳಿಗೆ ಸಂಕೇತವನ್ನು ವ್ಯಕ್ತಗೊಳಿಸುತ್ತದೆ.

ಬೆನ್ನು ನೋವು ಇದ್ದಾಗ ವೈದ್ಯರನ್ನು ಸಂಪರ್ಕಿಸಿದಾಗ ಅನೇಕ ಪ್ರಶ್ನೆಗಳನ್ನು ಕೇಳಬಹುದು?

ಬೆನ್ನು ನೋವು ಹೇಗೆ ಪ್ರಾರಂಭವಾಯಿತು?

ಕೆಮ್ಮುವಾಗ ಸೀನುವಾಗ ಕುಳಿತಾಗ ಹೆಚ್ಚಾಗುತ್ತದೆಯೇ?

ನೋವು ಬೆನ್ನಿನ ಭಾಗದಲ್ಲಿ ಅಲ್ಲದೆ ಕಾಲುಗಳಲ್ಲಿ ಇರುತ್ತದೆಯೇ?

ಹಾಸಿಗೆಯಲ್ಲಿ ಮಲಗಿದ್ದಾಗ ಅಕ್ಕಪಕ್ಕ ತಿರುಗಲು ಕಷ್ಟವಾಗುತ್ತದೆಯೇ?

ಮೂತ್ರ ಮಾಡುವಾಗ ಅಥವಾ ಮೂತ್ರ ವಿಸರ್ಜನೆ ಮಾಡುವಾಗ ಕಷ್ಟ ಉಂಟಾಗುತ್ತದೆಯೇ?

ವೈದರು ಕೇಳುವ ಪ್ರಶ್ನೆಗಳಿಗೆ ರೋಗಿಯು ಸಮಂಜವಾದ ಉತ್ತರ ನೀಡಿ ಸರಿಯಾದ ಚಿಕಿತ್ಸೆಯನ್ನು ಪಡೆಯಬೇಕು ಅಲ್ಲದೆ ಬೇರೆ ಕಾಯಿಲೆಗಳಿಂದ ಏನಾದರೂ ನರಳುತ್ತಿದ್ದರೆ ಆ ಬಗೆಯ ವೈದ್ಯರಿಗೆ ತಿಳಿಸುವುದನ್ನು ಮರೆಯಬಾರದು ಬೇನೆಗೆ ಸ್ಪಷ್ಟವಾದ ಕಾರಣವು ಗೊತ್ತಾದ ನಂತರ ಬೆನ್ನು ನೋವಿಗೆ ಏನು ಚಿಕಿತ್ಸೆಯನ್ನು ಮಾಡಬೇಕೆಂಬುದನ್ನು ತಿಳಿಸುತ್ತಾರೆ ಅದಲ್ಲದೆ ಮನೆಯಲ್ಲಿಯೇ ನಡೆಸುವ ಸರಳವಾದ ಚಿಕಿತ್ಸೆಯು ಪರಿಣಾಮಕಾರಿ ಪರಿಹಾರ ನೀಡಬಹುದು.

ಹಾಸಿಗೆಯ ಮೇಲೆ ವಿಶ್ರಾಂತಿ ಪಡೆಯಬೇಕು.

ಅಮೃತಾಂಜನವನ್ನು ನೋವಿರುವ ಭಾಗದಲ್ಲಿ ಹಚ್ಚಿ ಮೆತ್ತಗೆ ಮಸಾಜ್ ಮಾಡಬೇಕು.

ಬೆನ್ನುನೋವಿನ ಭಾಗದಲ್ಲಿ ಬಿಸಿನೀರು ಚೀಲದಿಂದ ಕಾವು ಕೊಡಬೇಕು.

ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿ ಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.

LEAVE A REPLY

Please enter your comment!
Please enter your name here