ಹಿಂದೂ ಸಂಪ್ರದಾಯದ ಕೆಲವು ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ..!! ತಪ್ಪದೆ ಓದಿ.

0
6698

ಹಿಂದೂ ಸಂಪ್ರದಾಯದಲ್ಲಿ ಹತ್ತು ಹಲವು ರೀತಿಯ ಆಚರಣೆಗಳು ಇವೆ, ಕೆಲವು ಆಚರಣೆಗಳ ಹಿಂದಿನ ಮಹತ್ವ ನಮಗೆ ತಿಳಿದಿರುವುದಿಲ್ಲ ಹಾಗಾಗಿ ಅದರ ಆಚರಣೆಗೆ ನಾವು ಅಷ್ಟು ಪ್ರಾಮುಖ್ಯತೆಯನ್ನು ನೀಡುವುದಿಲ್ಲ, ಆದರೂ ಅರ್ಧ ಮನಸ್ಸಿಂದ ಕೆಲವು ಆಚರಣೆಗಳನ್ನು ಮಾಡುತ್ತಿರುತ್ತೇವೆ, ಅಂತಹ ಕೆಲವು ಆಚರಣೆಗಳಿಗೆ ಇರುವ ಧಾರ್ಮಿಕ ವಿಶ್ಲೇಷಣೆಯನ್ನು ಇಂದು ನಾವು ನಿಮಗೆ ನೀಡಲು ಬಯಸುತ್ತೇವೆ.

ಮನೆಯ ಮುಂದೆ ತುಳಸಿ ಗಿಡವನ್ನು ಇಟ್ಟು ಏಕೆ ಪೂಜಿಸಬೇಕು : ವೇದ ಕಾಲದಲ್ಲಿನ ಋಷಿಮುನಿಗಳು ತುಳಸಿ ಗಿಡದ ಪ್ರಯೋಜನವನ್ನು ಚೆನ್ನಾಗಿ ಅರಿತಿದ್ದರು, ಅದೇ ಕಾರಣಕ್ಕಾಗಿಯೇ ಅವರು ತುಳಸಿ ಗಿಡಕ್ಕೆ ಮಾತೃಸ್ಥಾನ ನೀಡುವುದಲ್ಲದೇ ಪ್ರತೀ ಮನೆಯಲ್ಲೂ ತುಳಸಿ ಗಿಡವನ್ನು ಬೆಳೆಸಬೇಕು ಎಂಬ ಸಂದೇಶವನ್ನು ರವಾನೆ ಮಾಡಿದರು, ತುಳಸಿ ಗಿಡ ಉತ್ತಮ ರೋಗ ನಿರೋಧಕ ಆಯುರ್ವೇದ ಔಷಧ, ಪ್ರತಿದಿನ ನೀವು ಕುಡಿಯುವ ಟೀ ಅಥವಾ ಕಾಫಿ ಯಲ್ಲಿ ಒಂದು ತುಳಸಿ ಎಲೆಯನ್ನು ಹಾಕಿ ಕುಡಿದರೆ ನಿಮ್ಮ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ, ಜೊತೆಯಲ್ಲಿ ಆರೋಗ್ಯ ಸ್ಥಿತಿ ಸಮತೋಲನದಲ್ಲಿರುತ್ತದೆ, ವಯಸ್ಸು ಸಹ ಹೆಚ್ಚಾಗುತ್ತದೆ, ಈ ಸಸ್ಯವು ಮನೆ ಮುಂದೆ ಇರುವುದರಿಂದ ಸೊಳ್ಳೆಗಳು ಇತರ ಕೀಟಗಳು ಬರುವುದಿಲ್ಲ ಕೆಲವು ನಂಬಿಕೆಗಳ ಪ್ರಕಾರ ತುಳಸಿ ಗಿಡ ಇದ್ದಲ್ಲಿ ತಾವುಗಳು ಸಹ ಬರುವುದಿಲ್ಲ.

ಹಿರಿಯರ ಕಾಲಿಗೆ ಏಕೆ ನಮಸ್ಕರಿಸಬೇಕು : ನಿಮ್ಮ ಮೆದುಳು ಗಳಿಂದ ಆರಂಭವಾದ ನರಗಳು ನಿಮ್ಮ ಇಡೀ ದೇಹದಲ್ಲಿ ಹರಡಿಕೊಂಡಿರುತ್ತದೆ, ಹಾಗೂ ಆ ನರಗಳು ನಿಮ್ಮ ಕಾಲ್ಬೆರಳು ಮತ್ತೆ ಕೈ ಬೆರಳುಗಳಲ್ಲಿ ಅಂತ್ಯ ವಾಗಿರುತ್ತದೆ, ನಿಮ್ಮ ಕೈ ಬೆರಳುಗಳಿಂದ ಯಾವಾಗ ಹಿರಿಯರ ಅಥವಾ ಬೇರೆಯವರ ಕಾಲ್ಬೆರಳುಗಳನ್ನು ಸ್ಪರ್ಶ ಮಾಡುತ್ತಿರುವ ಆಗ ಎರಡು ದೇಹದ ನಡುವೆ ಒಂದು ಬಗೆಯ ವಿದ್ಯುತ್ ಪ್ರವಾಹವು ಹರಿಯುತ್ತದೆ, ಹಾಗೂ ಇದೇ ಶಕ್ತಿಯು ಧಾರಕಗಳಲ್ಲಿ ಕಾರ್ಯನಿರ್ವಹಿಸುತ್ತವೆ, ಒಬ್ಬರ ಪಾದಕ್ಕೆ ಬಗ್ಗೆ ನಮಸ್ಕರಿಸಬೇಕು ಆದರೆ ಮೊದಲು ನೀವು ನಿಮ್ಮ ಅಹಂ ಅನ್ನು ದಾಟಿರಬೇಕು ಇದನ್ನು ಶ್ರದ್ಧೆಯಂದು ಕರೆಯುತ್ತಾರೆ, ಹಾಗೂ ನಿಮ್ಮ ಚರಣ ಸ್ಪರ್ಷವನ್ನು ಸ್ವೀಕರಿಸುವ ಅವರ ಹೃದಯ ಧನಾತ್ಮಕ ಆಲೋಚನೆಗಳಿಂದ ಮತ್ತು ಶಕ್ತಿಯಿಂದ ನಿಮ್ಮನ್ನು ಹರಿಸುತ್ತವೆ ಎಂದು ಕರೆಯುತ್ತಾರೆ.

LEAVE A REPLY

Please enter your comment!
Please enter your name here