ಈ ಮೂರು ರಾಶಿಯವರು ಯಾವುದೇ ಕಾರಣಕ್ಕೂ ಕಪ್ಪು ದಾರವನ್ನ ಕೈಗೆ ಕಟ್ಟಿಕೊಳ್ಳಬಾರದು.

0
1799

ಈ ಮೂರು ರಾಶಿಯವರು ಯಾವುದೇ ಕಾರಣಕ್ಕೂ ಕಪ್ಪು ದಾರವನ್ನ ಕೈಗೆ ಕಟ್ಟಿಕೊಳ್ಳಬಾರದು. ಹಾಗಿದ್ದರೆ ಆ ಮೂರು ರಾಶಿಗಳು ಯಾವು ಅಂತ ಸಂಪೂರ್ಣವಾಗಿ ತಿಳಿಸಿ ಕೊಡ್ತೀನಿ. ಹೌದು, ಈಗಿನ ಕಾಲದಲ್ಲಿ ಯುವಕ ಮತ್ತು ಯುವತಿಯರು ತಮ್ಮ ಕಾಲು ಮತ್ತು ಕೈಗಳಿಗೆ ಕಪ್ಪು ದಾರವನ್ನು ಧರಿಸುತ್ತಾರೆ. ಇನ್ನು ಕೆಲವರು ಈ ಕಪ್ಪು ದಾರವನ್ನ ಯಾವುದೇ ಒಂದು ಅನಿವಾರ್ಯ ಕಾರಣದಿಂದ ಕಟ್ಟಿಕೊಂಡರೆ ಇನ್ನು ಕೆಲವರು ಈ ಕಪ್ಪು ದಾರವನ್ನ ಹುಡುಗಾಟಿಕೆಗೆ ಕಟ್ಟಿಕೊಳ್ಳುತ್ತಾರೆ.

ಇನ್ನು ಇವರು ತಮ್ಮ ರಾಶಿಗಳಿಗೆ ಅನುಗುಣವಾಗಿ ಕಪ್ಪು ದಾರವನ್ನ ಕೈಗೆ ಅಥವಾ ಕಾಲಿಗೆ ಕಟ್ಟಿಕೊಳ್ಳುತ್ತಾರೆ ಮತ್ತು ಕೆಲವು ರಾಶಿಯವರಿಗೆ ಇದಾರ ಆಗಿ ಬರಲ್ಲ ಎಂದು ಹೇಳುತ್ತದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಇದರ ಬಗ್ಗೆ ಏನು ಹೇಳುತ್ತಾರೆ. ಇದು ನಿಜವೇ. ಹೌದು
ಈ ಕೆಲವು ರಾಶಿಯವರು ಕಪ್ಪು ದಾರವನ್ನು ಕಟ್ಟಿಕೊಂಡರೆ ಜೀವನದಲ್ಲಿ ತುಂಬಾ ಕಷ್ಟವನ್ನು ಅನುಭವಿಸುತ್ತಾರೆ ಮತ್ತು ಅವರ ಜೀವನದಲ್ಲಿ ಬೆಳಕು ಮೂಡುವುದಿಲ್ಲ ಎಂದು ಹೇಳಿದರೆ ತಪ್ಪಾಗಲ್ಲ.

ಇನ್ನು ಈ ಮೂರು ರಾಶಿಯವರು ಯಾವುದೇ ಕಾರಣಕ್ಕೂ ಕಪ್ಪು ದಾರವನ್ನ ಕೈಗೆ ಕಟ್ಟಿಕೊಳ್ಳಲೇಬಾರದು. ಹಾಗಾದರೆ ಆ ರಾಶಿಗಳು ಯಾವುದು ಅನ್ನೋದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ. ಪೂರ್ತಿಯಾಗಿ ನೋಡಿ ಮತ್ತು ಇದರಲ್ಲಿ ನಿಮ್ಮ ರಾಶಿಯಿದ್ದರೆ ಬೇಗ ಎಚ್ಚೆತ್ತುಕೊಳ್ಳಿ. ಮೊದಲನೆಯದಾಗಿ ಮೇಷ ರಾಶಿ. ಹೌದು, ಮೇಷ ರಾಶಿಯವರು ಯಾವುದೇ ಕಾರಣಕ್ಕೂ ಕಪ್ಪು ದಾರವನ್ನು ಕಟ್ಟಿಕೊಳ್ಳಬಾರದು. ಮೇಷ ರಾಶಿಯವರ ಅಧಿಪತಿ ಆಂಜನೇಯ ಸ್ವಾಮಿ.

ಇನ್ನು ಆಂಜನೇಸ್ವಾಮಿಗೆ ಕೆಂಪು ಬಣ್ಣ ಅಂದ್ರೆ ಬಹಳ ಇಷ್ಟ. ಆದ್ದರಿಂದ ನೀವು ಕಪ್ಪು ದಾರದ ಬದಲು ಕೆಂಪು ದಾರವನ್ನು ಕೈಗೆ ಕಟ್ಟಿಕೊಂಡರೆ ಸ್ವಾಮಿ ಅಂಜನೇಯ ಸಂಪೂರ್ಣ ಆಶೀರ್ವಾದ ನಿಮಗೆ ಸಿಗುತ್ತದೆ. ಇನ್ನು ಮಹಿಳೆಯರು ಕಪ್ಪು ದಾರವನ್ನು ಕಾಲಿಗೆ ಕಟ್ಟಿಕೊಳ್ಳುತ್ತಾರೆ. ಆದರೆ ಈ ರಾಶಿಯವರು ಮಹಿಳೆಯರು ಯಾವುದೇ ಕಾರಣಕ್ಕೂ ಕಪ್ಪು ದಾರವನ್ನ ನಿಮ್ಮ ಕಾಲಿಗೆ ಕಟ್ಟಿ ಕೊಳ್ಳಬೇಡಿ.

ಯಾಕೆಂದರೆ ಅದು ನಿಮಗೆ ಶುಭವನ್ನು ತಂದುಕೊಡುವುದಿಲ್ಲ. ಇನ್ನು ಎರಡನೆಯದಾಗಿ ವೃಶ್ಚಿಕ ರಾಶಿ ಈ ರಾಶಿಯವರು ಅಧಿಪತಿ ಕೂಡ ಆಂಜನೆಯ ಆಗಿರುವ ಕಾರಣ ಈ ರಾಶಿಯವರು ಕೂಡ ಕೆಂಪು ದಾರವನ್ನು ಕಟ್ಟಿಕೊಂಡರೆ ತುಂಬಾ ಒಳ್ಳೆಯದು. ಇನ್ನು ಕಪ್ಪು ದಾರವನ್ನ ಈ ರಾಶಿಯವರು ಕಟ್ಟಿಕೊಂಡರೆ ಮಾಡುವ ಕೆಲಸದಲ್ಲಿ ನೀವು ಅಂದುಕೊಂಡಷ್ಟು ಲಾಭ ನಿಮ್ಮದಾಗುವುದಿಲ್ಲ ಮತ್ತು ಕುಟುಂಬದಲ್ಲಿ ಸಂತಸ ಇರುವುದಿಲ್ಲ.

ಇನ್ನು ಮೂರನೆಯದಾಗಿ ಕಟಕ ರಾಶಿ. ಈ ರಾಶಿಯವರು ಯಾವುದನ್ನೂ ಯೋಚಿಸದೆ ಕಪ್ಪು ದಾರವನ್ನು ಧರಿಸಿದರೆ, ಇವರು ಭವಿಷ್ಯದಲ್ಲಿ ಕೆಟ್ಟ ಪರಿಣಾಮಗಳನ್ನು ಎದುರಿಸಬೇಕಾಗಬಹುದು, ಎಚ್ಚರವಹಿಸಿ. ಜ್ಯೋತಿಷ್ಯದ ಪ್ರಕಾರ, ಶನಿಯ ಸ್ಥಾನವು ಪ್ರಬಲವಾಗಿರುವ ಅಥವಾ ಯಾವ ರಾಶಿಯ ಅಧಿಪತಿ ಶನಿಯಾಗಿರುತ್ತಾನೋ, ಅಂತಹ ಎಲ್ಲಾ ರಾಶಿಚಕ್ರ ಚಿಹ್ನೆಯುಳ್ಳವರು ಕಪ್ಪು ದಾರವನ್ನು ಧರಿಸಬಹುದು.

ಆದರೆ ಕಪ್ಪು ದಾರವನ್ನು ಧರಿಸಲು ಕೆಲವು ನಿಯಮಗಳಿವೆ. ಈ ನಿಯಮಗಳನ್ನು ಅನುಸರಿಸಿ ನೀವು ಕಪ್ಪು ದಾರವನ್ನು ಧರಿಸಿದರೆ, ಅದು ನಿಮಗೆ ಪ್ರಯೋಜನವನ್ನು ನೀಡುತ್ತದೆ. ಈ ಮಾಹಿತಿ ಇಷ್ಟವಾಗಿದ್ದಾರೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಮತ್ತು ನಿಮ್ಮ ಅನಿಸಿಕೆ ಅಭಿಪ್ರಾಯ ತಿಳಿಸಿ. ಮತ್ತಷ್ಟು ಇಂತಹ ಉಪಯುಕ್ತ ಮಾಹಿತಿಗಳು ನಮ್ಮ ಪುಟದಲ್ಲಿ ಲಭ್ಯವಿದೆ ಅದನ್ನೂ ಕೂಡ ಒಮ್ಮೆ ಓದಿ ನೋಡಿ.

LEAVE A REPLY

Please enter your comment!
Please enter your name here