ಹಂಪೆಯ ಉಗ್ರನರಸಿಂಹ ಸ್ವಾಮಿಯ ಬಚ್ಚಿಟ್ಟಿರುವ ಕಥೆಯು ಇಲ್ಲಿದೆ.

0
2244

ಗಣತಂತ್ರ ದಿನದ ಟ್ಯಾಬ್ಲೋ ಸವಾರಿ | ಹಿಂದೂ ಸಂಸ್ಕೃತಿಯ ಔನ್ನತ್ಯದ ಧ್ಯೋತಕ. ಸಿದ್ದರಾಮಯ್ಯ ಸರಕಾರದ ಕಾಲದಲ್ಲಿ ಗಣತಂsತ್ರ ದಿನದ ಪೆರೇಡಿನಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ ಟ್ಯಾಬ್ಲೋ ಟಿಪ್ಪುಸುಲ್ತಾನನದು. ಈಗಿನ ಭಾರತೀಯ ಜನತಾ ಪಕ್ಷದ ಸರಕಾರದ ಅವಧಿಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸುತ್ತಿರುವ ಟ್ಯಾಬ್ಲೋ ಕನ್ನಡಿಗರ ಆತ್ಮಾಭಿಮಾನವನ್ನು ಬಡಿದೆಬ್ಬಿಸಿದ; ದಕ್ಷಿಣ ಭಾರತದಲ್ಲಿ ಮೊದಲ ಅಖಂಡ ಹಿಂದೂ ಸಾಮ್ರಾಜ್ಯವನ್ನು ಸ್ಥಾಪಿಸಿದ ವಿಜಯನಗರದ ರಾಜಮನೆತನವನ್ನು ನೆನಪಿಸುವಂಥದ್ದು. ಟ್ಯಾಬ್ಲೋದ ಮುಂದಿನ ಭಾಗದಲ್ಲಿ ಹಂಪೆಯ ಲಕ್ಷ್ಮೀನರಸಿಂಹ ದೇವರ ಪ್ರತಿಮೆಯ ಪ್ರತಿಕೃತಿಯನ್ನು ಕೂರಿಸಲಾಗಿದೆ.

ಈ ಸಂದರ್ಭದಲ್ಲಿ ಒಂದಷ್ಟು ಸಂಗತಿಗಳನ್ನು ಹಂಚಿಕೊಳ್ಳಬೇಕು. ಹಂಪಿಯಲ್ಲಿರುವ ಲಕ್ಷ್ಮೀನರಸಿಂಹ ದೇವರ ಪ್ರತಿಮೆಯು ವಿಜಯನಗರ ವಾಸ್ತುಶಿಲ್ಪ ವೈಭವಕ್ಕೆ ಹಿಡಿದ ಕೈಗನ್ನಡಿ ಎನ್ನಬಹುದು. ಶಿಲ್ಪಶಾಸ್ತ್ರದ ನಿಯಮಾನುಸಾರ ಈ ಏಕಶಿಲಾ ವಿಗ್ರಹವನ್ನು ಕೆತ್ತಿದವರು ಕೃಷ್ಣಭಟ್ಟರೆಂಬ ಶಿಲ್ಪಿ. ಕೆತ್ತನೆಕಾರ್ಯ ಪೂರ್ಣಗೊಂಡದ್ದು ಕ್ರಿಶ 1528 ರಲ್ಲಿ. ಮೂಲದಲ್ಲಿ ನರಸಿಂಹ ದೇವರ ಎಡ ತೊಡೆಯ ಮೇಲೆ ಕೂತ ಸುಂದರವಾದ ಲಕ್ಷ್ಮೀಯ ವಿಗ್ರಹವಿತ್ತು. ನರಸಿಂಹ ದೇವರಿಗೆ ನಾಲ್ಕು ಕೈಗಳಿದ್ದವು.

ಆದರೆ ಕ್ರಿಶ 1565ರ ಯುದ್ಧದಲ್ಲಿ ಮುಸ್ಲಿಂ ಮತಾಂ’ಧ ದಾ’ಳಿಕೋ’ರರ ಆಕ್ರಮ’ಣಕ್ಕೆ ಹಂಪಿ ತುತ್ತಾದಾಗ ದಾ’ಳಿಕೋ’ರ ಮತಾಂ’ಧರು ಈ ವಿಗ್ರಹದ ಭಂ’ಜನೆ ಮಾಡಿದರು. ಕಲ್ಲಿನ ಕೈಗಳನ್ನು ಕತ್ತರಿ’ಸಿದರು. ಲಕ್ಷ್ಮೀಯ ವಿಗ್ರಹವನ್ನು ಧ್ವಂ’ಸಮಾಡಿದರು. ಅಂದಿನಿಂದ ಇಂದಿನವರೆಗೂ ಈ ವಿಗ್ರಹವು ಮೈಕೈಯಲ್ಲೆಲ್ಲ ಇತಿಹಾಸದ ಮಾಯದ ಗಾಯಗಳನ್ನು ಹೊತ್ತು, ಗುಡಿಯ ಛಾವಣಿಯಿಲ್ಲದೆ ಬಯಲಲ್ಲಿ ಬಿಮ್ಮನೆ ನಿಂತಿದೆ.

ದುರಂತವೆಂದರೆ ಈ ವಿಗ್ರಹದ ಮುಂದೆ ಹಾಕಿರುವ ಸೂಚನಾಫಲಕದಲ್ಲಿ ದಾ’ಳಿಯ ಯಾವ ವಿವರಗಳೂ ಇಲ್ಲ. “ಈ ವಿಗ್ರಹವು ಸುಮಾರು 6.7 ಮೀಟರ್‍ಗಳಷ್ಟು ಎತ್ತರವಿದೆ, ವಿಜಯನಗರ ಮೂರ್ತಿಶಿಲ್ಪಕಲೆಯ ಅದ್ವಿತೀಯ ಏಕಶಿಲಾ ವಿಗ್ರಹಗಳಲ್ಲಿ ಒಂದಾಗಿದೆ. ಮೂರ್ತಿಯನ್ನು ಬೃಹದಾಕಾರದ ಆದಿಶೇಷನ ತಲ್ಪದಲ್ಲಿ ಕೂಡಿಸಲಾಗಿದ್ದು ಒಂದು ಕೀರ್ತಿಮುಖ ತೋರಣದಿಂದ ಅಲಂಕರಿಸಲಾಗಿದೆ” ಎಂದು ಹೇಳಿದ್ದರೂ ವಿಗ್ರಹದ ವಿವಿಧ ಚಿಹ್ನೆಗಳನ್ನು ಹೊತ್ತಕೈಗಳು ಭಗ್ನಗೊಂಡಿವೆ ಎಂದಷ್ಟೇ ಹೇಳಿ ದಾ’ಳಿಯ ವಿವರಗಳಷ್ಟನ್ನೂ ಮರೆಸಲಾಗಿದೆ.

ಫಲಕದಲ್ಲಿರುವ ಹಿಂದಿ ಮತ್ತು ಇಂಗ್ಲೀಷ್ ಭಾಷೆಯ ವಿವರಗಳಲ್ಲಿ ಕೂಡ ದಾಳಿಯ ಬಗ್ಗೆ ಒಂದಕ್ಷರ ಮಾಹಿತಿಯೂ ಇಲ್ಲ. ಇಲ್ಲೆಲ್ಲೂ ದಾ’ಳಿಗೊಳಗಾದ, ಭ’ಗ್ನಗೊಳಿಸಿದ, ಕತ್ತ’ರಿಸಿದ ಎಂಬ ಅರ್ಥದ ಶಬ್ದಗಳೇ ಇಲ್ಲ. ಇತಿಹಾಸವನ್ನು ಬಚ್ಚಿಡುವುದರಿಂದ ಇತಿಹಾಸದ ತಪ್ಪುಗಳನ್ನು ಸರಿಪಡಿಸಿದಂತೆ ಆಗುವುದಿಲ್ಲ.

ಕರ್ನಾಟಕ ಸರಕಾರವು ಮುಂದಿನ ದಿನಗಳಲ್ಲಿ ಹಂಪಿಯ ಎಲ್ಲಾ ಸ್ಮಾರಕ ಗಳ ಮುಂದಿರುವ ಸೂಚನಾ ಫಲಕಗಳನ್ನೂ ಬದಲಿಸಿ ನಿಜ ಇತಿಹಾಸವನ್ನು ತಿಳಿಸುವ ಬರಹಗಳನ್ನು ಪ್ರವಾಸಿಗಳಿಗೆ ಮುಕ್ತವಾಗಿಸಬೇಕು. ಲೇಖನದ ಕೃಪೆ ಖ್ಯಾತ ಕನ್ನಡ ಬರಹಗಾರ ರೋಹಿತ್ ಚಕ್ರತೀರ್ಥ. ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.

LEAVE A REPLY

Please enter your comment!
Please enter your name here