ಆರೋಗ್ಯವೇ ಭಾಗ್ಯ ಎನ್ನುವ ಮಾತಿದೆ. ಆರೋಗ್ಯ ಚೆನ್ನಾಗಿರಬೇಕು. ಅನಾರೋಗ್ಯದಿಂದ ಬಳಲುತ್ತಿದ್ದರೆ ಎಷ್ಟು ಸಂಪತ್ತು, ಐಶ್ವರ್ಯ ಇದ್ದರೆ ಯಾವುದಕ್ಕೆ ಬಂತು ಅಲ್ವಾ. ಅತಿ ಹೆಚ್ಚು ಶಕ್ತಿವರ್ಧಕ ಆಹಾರಗಳನ್ನು ನಾವಿನ್ನೂ ಗುರಿತಿಸಿ, ಅದರ ಕುರಿತು ಬರೆದಿದ್ದೇವೆ. ಇವುಗಳು ಸಾಕಷ್ಟು ಪ್ರೋಟೀನ್ಸ್’ಗಳಿಂದ ತುಂಬಿರುತ್ತದೆ. ಈ ಆಹಾರ ಪದಾರ್ಥಗಳನ್ನು ಸೇವಿಸುವುದರಿಂದ ಆರೋಗ್ಯವು ಸದೃಢವಾಗಲು ಸಹಾಯವಾಗುತ್ತದೆ. ನಾವು ಪೌಷ್ಟಿಕ ಆಹಾರ ಸೇವನೆ ಮಾಡಬೇಕು. ಇದರಿಂದ ಗಟ್ಟಿ ಮುಟ್ಟಾಗಿ ಉತ್ತಮ ಆರೋಗ್ಯದಿಂದ ಇರಬಹುದು.
ಅತಿಹೆಚ್ಚು ಶಕ್ತಿವರ್ಧಕ ಆಹಾರ ಪದಾರ್ಥಗಳು ಈ ಕೆಳಕಂಡಂತೆ ವಿವರಿಸಿದೆ. 1) ಬಾದಾಮಿ : ಮುಂಜಾನೆ ಖಾಲಿ ಹೊಟ್ಟೆಯಲ್ಲಿ ಬಾದಾಮಿಯನ್ನು ಸೇವಿಸುವುದರಿಂದ ದೇಹಕ್ಕೆ ಸಾಕಷ್ಟು ಪ್ರಮಾಣದಲ್ಲಿ ಪ್ರೊಟೀನ್ಸ್ ಮತ್ತು ಪೌಷ್ಟಿಕತೆ ದೊರೆಯುತ್ತದೆ. ಇದರಿಂದ ದೇಹ ಸದೃಢವಾಗುತ್ತದೆ. ಈ ಕಾರಣದಿಂದಲೇ ಸಣ್ಣ ಮಕ್ಕಳಿಗೆ, ಹಿರಿಯರಿಗೆ ತಿನ್ನಿಸುತ್ತಾರೆ. ಇದು ಆರೋಗ್ಯದ ಪೂರಕವಾಗಿರುತ್ತದೆ.
2) ಕಡಲೆಕಾಯಿ : ಬಡವರ ಬಾದಾಮಿಯೆಂದೇ ಹೆಸರಾಗಿರುವ ಕಡಲೆಕಾಯಿ. ಇದು ಪ್ರೋಟೀನ್ಸ್’ಗಳಿಂದ ಸಮೃದ್ಧವಾಗಿದೆ. 100 ಕಡಲೆಕಾಯಿಗಳಲ್ಲಿ 24 ಗ್ರಾಂ ಪ್ರೊಟೀನ್ ಇರುತ್ತದೆ. ಇದನ್ನೇ ಒಂದು ವೇಳೆ ಚಿಕನ್’ಗೆ ಹೋಲಿಸಿದರೆ 100 ಗ್ರಾಂ ಚಿಕನ್ ನಲ್ಲಿ 15 ರಿಂದ 16 ಗ್ರಾಂ ಪ್ರೋಟೀನ್ ಇರುತ್ತದೆ. ಇದರಿಂದ ನೀವೇ ತಿಳಿದುಕೊಳ್ಳಿ ಯಾವುದು ಹೆಚ್ಚಿಗೆ ಶಕ್ತಿಶಾಲಿಯಾಗಿದೆ.
3) ಪನ್ನೀರ್ : ಪ್ರೋಟೀನ್ ನಿಂದ ಸಮೃದ್ಧವಾದ ಪದಾರ್ಥವೇಂದರೆ ಪನ್ನೀರ್. ಇದರಲ್ಲಿ ಫ್ಯಾಟ್ ಮತ್ತು ಕ್ಯಾಲರಿ ಅಂಶವು ಇರುತ್ತದೆ. ಇದರ ಹೊರತಾಗಿ ಕ್ಯಾಲ್ಸಿಯಂ, ಫೋಸ್ಪರಸ್, ಸೆಲೆನಿಯಂ, ವಿಟಮಿನ್ ಬಿ 12, ರೈಬೋಫ್ಲೇವಿನ್ ರೀತಿಯ ಅನೇಕ ಪೌಷ್ಟಿಕ ಪದಾರ್ಥಗಳನ್ನು ಒಳಗೊಂಡಿದೆ. 100 ಗ್ರಾಂ ಪನ್ನೀರ್ ನಲ್ಲಿ ಹತ್ತರಿಂದ ಹನ್ನೆರಡು ಗ್ರಾಮ ಪ್ರೋಟೀನ್ ಇದ್ದು 90 ರ ವರೆಗೆ ಕ್ಯಾಲರಿ ಇರುತ್ತದೆ.
4) ಬೀನ್ಸ್ : ಪ್ರೋಟೀನ್ ನಿಂದ ಸಮೃದ್ಧವಾದ ಇನ್ನೊಂದು ಆಹಾರ ಪದಾರ್ಥವೆಂದರೆ ರಾಜ್ಮ ಅಥವಾ ಬೀನ್ಸ್ ಎಂದೂ ಕರೆಯುತ್ತಾರೆ. ಇದರ ಪಲ್ಯ ಮತ್ತು ಸೂಪ್ ಕುಡಿಯುವುದರಿಂದ ದೇಹಕ್ಕೆ ಚಿಕನ್ ಆಹಾರಕ್ಕಿಂತಲೂ ಹೆಚ್ಚು ಪ್ರೊಟೀನ್ಸ್ ದೊರೆಯುತ್ತದೆ. ಆದ್ದರಿಂದ ಈ ಆಹಾರಗಳನ್ನು ನಮ್ಮ ದಿನನಿತ್ಯದ ಆಹಾರದಲ್ಲಿ ಸೇರ್ಪಡಿಸುವುದರಿಂದ ದೇಹವು ವೃದ್ಧಿಯಾಗುವುದು. ಇದನ್ನು ಹಸಿಯಾಗಿ ತಿನ್ನುವುದು ಸಹಾ ಒಳ್ಳೆಯದೆ.
5) ನೆನೆಯಿಸಿದ ಕಡಲೆ : 100 ಗ್ರಾಂ ನೆನೆಯುಸಿದ ಕಡಲೆಯನ್ನು ತಿನ್ನುವುದರಿಂದ ದೇಹಕ್ಕೆ 50 ಗ್ರಾಂ ಪ್ರೋಟೀನ್ಸ್ ದೊರೆಯುವುದು. ಇದು ಚಿಕನ್ ಗಿಂತಲೂ ಎರಡು ಪಟ್ಟಾಗಿದೆ. ಆದ್ದರಿಂದ ನೆನೆಸಿದ ಕಡಲೆಯನ್ನು ಮುಂಜಾನೆ ಖಾಲಿ ಹೊಟ್ಟೆಯಲ್ಲಿ ಸೇವಿಸುವುದು ಉತ್ತಮ. ಇದನ್ನು ಗ್ರಾಮೀಣ ಭಾಗಗಳಲ್ಲಿ ಸಹಜವಾಗಿಯೇ ತಿನ್ನುತ್ತಾರೆ.
6) ಮೊಟ್ಟೆ : ಮೊಟ್ಟೆಯು ಹೆಚ್ಚು ಶ’ಕ್ತಿವರ್ಧಕ ಆಹಾರವಾಗಿದೆ. ಇದು ದೇಹದಾ’ಡ್ಯತೆ ಹೆಚ್ಚಿಸಲು, ಮೂಳೆಗಳನ್ನು ಶ’ಕ್ತಿಯುತವಾಗಿಸಲು ಬಲು ಸಹಾಯಕಾರಿ. ಮೊಟ್ಟೆಗೆ ರೋ’ಗ ನಿರೋ’ಧಕ ಶಕ್ತಿಯು ಸಹಾ ಹೆಚ್ಚಿರುವುದನ್ನು ನಾವು ಕಾಣಬಹುದು. ವೈದ್ಯರು ಈ ಕಾರಣಕ್ಕಾಗಿಯೇ ಸಹಜವಾಗಿಯೇ ಸಣ್ಣ ಇರುವ, ಆರೋಗ್ಯ ಬೆಳವಣಿಗೆ ಇಲ್ಲದವರಿಗೆ ಮೊಟ್ಟೆ ಸೇವನೆಗೆ ಸಲಹೆಯನ್ನು ನೀಡುತ್ತಾರೆ. ಮೊಟ್ಟೆಯನ್ನು ಬೇಯಿಸಿ ತಿನ್ನುತ್ತಾರೆ, ಇನ್ನು ಕೆಲವರು ಆಮ್ಲೆಟ್, ಅಪ್ ಬೈಲ್, ಮೊಟ್ಟೆಬಜ್ಜಿ, ಮೊಟ್ಟೆ ಬುರ್ಜಿ ಮಾಡಿ ತಿನ್ನುತ್ತಾರೆ.
7) ಮಾಂ’ಸ : ಮಾಂ’ಸವೆಂದರೆ ಬಾಯಲ್ಲಿ ನೀರು ಸೋರಿಸುವ ದೊಡ್ಡ ವರ್ಗವೇ ಇದೆ. ಬಾಡು ಎಂದರೆ ಆ ಪರಿಯ ರುಚಿ ಇರುತ್ತದೆ ಎಂದು ಎಲ್ಲರಿಗೂ ಗೊತ್ತೇ ಇದೆ. ಎಷ್ಟೋ ಜನರಿಗೆ ಇದೆ ಅತೀ ಇಷ್ಟದ ಆಹಾರವಾಗಿರುತ್ತದೆ. ಇದು ಸಹಾ ದೇಹದ ಬಲ ಹೆಚ್ಚಿಸಲು, ಆರೋಗ್ಯವಂತರಾಗಲು ಸಹಾಯಕಾರಿಯಾಗಿದೆ. ಮಾಂ’ಸದಲ್ಲಿ ಒಳ್ಳೆಯ ಪ್ರೊಟೀನ್ ಅಂಶವು ಸಹಾ ಇರುವುದನ್ನು ನಾವು ಕಾಣಬಹುದು. ಮಾಂ’ಸ ಸೇವನೆಯಿಂದಲೂ ಸಹಾ ಶಕ್ತಿವರ್ಧಕ ಆರೋಗ್ಯ ಪದಾರ್ಥವಾಗಿದೆ.