ಒಂದೇ ಒಂದು ಲೋಟ ನೀರು ನಿಮ್ಮ ಜಾತಕ ವನ್ನೇ ಬದಲಾಯಿಸುತ್ತದೆ. ಎಲ್ಲರಿಗೂ ಜಾತಕ ದೋಷ ಇದ್ದೇ ಇರುತ್ತೆ. ಅದನ್ನು ಪ್ರಾರಂಭದಲ್ಲಿಯೇ ಸರಿ ಮಾಡಿಕೊಳ್ಳಬೇಕು. ಜಾತಕ ದೊಷದಿಂದ ನಾವು ಏನು ಕೆಲಸ ಮಾಡಿದರೂ ಸಕ್ಸಸ್ ಕಾಣುವುದಿಲ್ಲ. ವಿದ್ಯೆ ತಲೆಗೆ ಹತ್ತುವುದಿಲ್ಲ , ಮನೆಯಲ್ಲಿ ನೆಮ್ಮದಿ ಇರುವುದಿಲ್ಲ.
ಆದರೆ ನಮ್ಮ ಗ್ರಂಥಗಳಲ್ಲಿ ಯಾವುದೋ ಪರಿಷ್ಕಾರವನ್ನು ಸೂಚಿಸಿದ್ದಾರೆ ಶಾಸ್ತ್ರಜ್ಞರು. ಜಾತಕ ದೋಷವನ್ನು ಬಹು ಉಪಾಯದಿಂದ ಕಡಿಮೆ ಮಾಡಬಹುದಾಗಿದೆ. ಇನ್ನ ಶಿವ ಪುರಾಣದ ಪ್ರಕಾರ ಒಂದೇ ಒಂದು ಲೋಟ ನೀರನ್ನು ಶಿವಲಿಂಗಕ್ಕೆ ಅರ್ಪಣೆ ಮಾಡಬೇಕು. ಹೀಗೆ ಮಾಡಿದರೆ ಶಿವ ಪ್ರಸನ್ನನಾಗಿ ಒಲಿಯುತ್ತಾನೆ ಎಂದು ಹೇಳುತ್ತಾರೆ. ಇದರಿಂದ ನಮ್ಮ ಇಚ್ಚೆಗಳು ಈಡೇರುತ್ತದೆ.
ಪ್ರತಿ ದಿನ ಬೆಳಿಗ್ಗೆ ಬೇಗ ಎದ್ದು ಸ್ನಾನ ಮಾಡಿ ಒಂದು ತಾಮ್ರದ ಲೋಟದ ನೀರನ್ನು ತೆಗೆದುಕೊಂಡು ಹೋಗಿ ಶಿವಲಿಂಗಕ್ಕೆ ಅಭಿಷೇಕ ಮಾಡಬೇಕು. ಹಾಗೆಯೇ ಅಭಿಷೇಕ ಮಾಡುವಾಗ ಓಂ ನಮಃ ಶಿವಾಯ ಎಂಬ ಪಂಚಾಕ್ಷರಿ ಮಂತ್ರವನ್ನು ಪಠಿಸಬೇಕು.
ಹಾಗೆಯೇ ಒಂದು ತಾಮ್ರದ ಲೋಟದ ನೀರನ್ನು ರಾತ್ರಿ ಮಲಗುವಾಗ ತಲೆಯ ಹತ್ತಿರ ಇಟ್ಟು ಮಲಗಬೇಕು. ಬೆಳಿಗ್ಗೆ ಎದ್ದ ತಕ್ಷಣ ಆ ಲೋಟದ ನೀರನ್ನು ಏಳು ಬಾರಿ ಸುಳಿದು ಆ ನೀರನ್ನು ಮುಳ್ಳಿನ ಗಿಡದ ಬುಡಕ್ಕೆ ಹಾಕಿ. ನಿಮ್ಮ ಮನೆಯ ಬಳಿ ಮುಳ್ಳಿನ ಗಿಡ ಇಲ್ಲವಾದರೆ ಬೇರೆ ಗಿಡದ ಬುಡಕ್ಕೆ ಹಾಕಬಹುದು.
ಒಂದು ತಾಮ್ರದ ಲೊಟದ ನೀರಿಗೆ ಕೆಂಪು ಹೂ, ಅಕ್ಕಿ ,ಕುಂಕುಮವನ್ನು ಹಾಕಿ ಅದನ್ನು ಸೂರ್ಯನಿಗೆ ಅರ್ಪಿಸಬೇಕು. ಆಗ ಓಂ ಸೂರ್ಯ ದೇವಾಯ ನಮಃ ಎಂದು ಹೇಳಬೇಕು. ಪ್ರತಿ ದಿನ ಹೀಗೆ ಮಾಡಿದರೆ ಸಮಾಜದಲ್ಲಿ ಪ್ರತಿಷ್ಠೆ ,ಗೌರವ ಲಭಿಸುತ್ತದೆ.
ಇನ್ನು ಅಶ್ವಥ್ ಮರದಲ್ಲಿ ಮುಕ್ಕೋಟಿ ದೇವಾನುದೇವತೆಗಳು ಇರುತ್ತಾರೆ ಎಂದು ನಂಬಿಕೆ ಇದೆ. ಶುಭ ಮುಹೂರ್ತದಲ್ಲಿ ನೀರನ್ನು ಅಶ್ವಥ್ ಮರಕ್ಕೆ ಹಾಕಿ ಬೇಡಿದಾಗ ಸುಖ ,ಶಾಂತಿ, ನೆಮ್ಮದಿ, ಐಶ್ವರ್ಯ ಲಭಿಸುತ್ತದೆ.
ಹೀಗೆ ಒಂದೇ ಒಂದು ಲೋಟ ನೀರು ನಿಮ್ಮ ಜಾತಕವನ್ನೇ ಲಭಿಸುತ್ತದೆ. ನಮಗೆ ನೆಮ್ಮದಿ ಜೀವನ ನಡೆಸಲು ನಮ್ಮ ಜಾತಕ ದೋಷವನ್ನು ನಿವಾರಿಸಿಕೊಂಡು ದೇವರ ಅನುಗ್ರಹದಿಂದ ನಮ್ಮ ಜೀವನವನ್ನು ಸುಧಾರಿಸಿಕೊಳ್ಳಬೇಕಿದೆ.