ಮೈಸೂರಿನಲ್ಲಿ ಗ್ಯಾಂಗ್ ರೇಪ್ ಹಾಗು ಯುವತಿಯ ಗುಪ್ತಾಂಗವನ್ನು ಬ್ಲೇಡ್ ನಲ್ಲಿ ಕೊಯ್ದು ಅಟ್ಟಹಾಸ..!!

0
5490

ಮೈಸೂರು ಜನತೆ ಬೆಚ್ಚಿ ಬೀಳುವ ಘಟನೆಯಂದು ಮೈಸೂರಿನ ನಜರ್ ಬಾದ್ ಠಾಣೆಯಲ್ಲಿ ಧಾಖಲಾಗಿದೆ, ಡ್ರಾಪ್ ಕೊಡುವ ನೆಪದಲ್ಲಿ ಕೊಳ್ಳೇಗಾಲದ ರಸ್ತೆಯ ನಿರ್ಜನಿತ ಪ್ರದೇಶಕ್ಕೆ ಕರೆದುಕೊಂಡು ಹೋಗಿ ನಾಲ್ವರಿಂದ ಗ್ಯಾಂಗ್ ರೇಪ್ ಮಾಡಲಾಗಿದ್ದು ಸಾಲದಕ್ಕೆ ಕುಡಿತದ ಅಮಲಿನಲ್ಲಿ ಯುವತಿಯ ಗುಪ್ತಾಂಗವನ್ನು ಕೊಯ್ದು ಚಿತ್ರಹಿಂಸೆ ನೀಡಿದ್ದಾರೆ, ವಿಚಿತ್ರ ಎಂದರೆ ಆಕೆ ನಂಬಿ ಸಹಾಯಕ್ಕೆ ಕರೆದ ಸ್ನೇಹಿತನೇ ಅವಳನ್ನು ಸ್ನೇಹಿತರೊಂದಿಗೆ ಸೇರಿ ಅತ್ಯಾಚಾರ ಮಾಡಿರೋದು.

ದೂರಿನಲ್ಲಿ ಏನಿದೆ : ದಿನಾಂಕ ಫೆಬ್ರವರಿ 3 ರಂದು ರಾತ್ರಿ ಸುಮಾರು 7 ಗಂಟೆಗೆ ಮನೆಯಿಂದ ಡಿನ್ನರ್ ಗೆಂದು ಆಟೋದಲ್ಲಿ ಲಲಿತ್ ಮಹಲ್ ಪ್ಯಾಲೇಸ್ ರಸ್ತೆಯಲ್ಲಿರುವ ಚಾಟ್ ಸೆಂಟರ್ ಗೆ ಹೋಗಿದ್ದೆ. ಅಲ್ಲಿ ನನ್ನ ಸ್ನೇಹಿತೆ ಜೊತೆ ಚಾಟ್ಸ್ ತಿಂದು ಬಳಿಕ ಮನೆಗೆ ಹಿಂದಿರುಗಲು ನನ್ನ ಸ್ನೇಹಿತನಾದ ಚಿರಾಗ್‍ ಗೆ ಕರೆ ಮಾಡಿ ಬರುವಂತೆ ಹೇಳಿದ್ದೆ. ಆತ ಕಾರಿನಲ್ಲಿ ಬಂದು ನನ್ನನ್ನು ಕರೆದುಕೊಂಡು ಕೊಳ್ಳೇಗಾಲದ ಕಡೆಗೆ ಹೋಗುವ ರಸ್ತೆಯಲ್ಲಿ ಹೋಗುತ್ತಿದ್ದನು. ದಾರಿಯಲ್ಲಿ ಮೂವರು ಅಪರಿಚಿತರು ಕಾರಿನಲ್ಲಿ ಕುಳಿತುಕೊಂಡರು. ಅವರೆಲ್ಲರೂ ಕುಡಿದಿದ್ದು, ನಾನು ಮೈಸೂರಿಗೆ ಇತ್ತೀಚೆಗೆ ಬಂದಿದ್ದರಿಂದ ನನಗೆ ಮಾರ್ಗ ತಿಳಿದಿರಲಿಲ್ಲ.

ಸುಮಾರು 30 ನಿಮಿಷದ ನಂತರ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿದ್ದರು. ಅಲ್ಲಿ ನಾಲ್ವರು ನನ್ನ ಮೇಲೆ ಸಾಮೂಹಿಕವಾಗಿ ಅತ್ಯಾಚಾರ ಎಸಗಿದರು. ಬಳಿಕ ಬ್ಲೇಡ್ ತೆಗೆದುಕೊಂಡು ಗುಪ್ತಾಂಗವನ್ನು ಕೊಯ್ದು ಹಿಂಸೆ ಕೊಟ್ಟಿದ್ದಾರೆ. ನಂತರ ಅವರಿಂದ ಹೇಗೋ ತಪ್ಪಿಸಿಕೊಂಡು ಆಟೋದಲ್ಲಿ ಮನೆಗೆ ಬಂದೆ. ಈಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಸ್ನೇಹಿತೆಯ ಸಹಾಯದಿಂದ ದೂರು ನೀಡುತ್ತಿದ್ದೇನೆ. ಆರೋಪಿಗಳನ್ನು ಬಂಧಿಸಿ ಶಿಕ್ಷೆ ಕೊಡಬೇಕೆಂದು ಮನವಿ ಮಾಡುತ್ತಿದ್ದೇನೆ.

ಸ್ನೇಹಿತರೆ ಈ ರೀತಿಯಲ್ಲಿ ನಂಬಿಕೆ ಮೋಸ ಮಾಡುವ ಸ್ನೇಹಿತರ ಮುಖವಾಡ ಹೊತ್ತವರಿಗೆ ಯಾವ ಶಿಕ್ಷೆಸೂಕ್ತ ಹಾಗು ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಮರೆಯದೆ ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ಬರೆದು ತಿಳಿಸಿ.

ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿ ಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.

LEAVE A REPLY

Please enter your comment!
Please enter your name here