ಇಲ್ಲಿ ಶಿವ ಲಿಂಗದ ಮೇಲೆ ತುಪ್ಪವನ್ನು ಹಾಕಿದರೆ ಪವಾಡ ಸದ್ರುಷದಂತೆ ಬೆಣ್ಣೆಯಾಗಿ ಪರಿವರ್ತನೆ ಆಗುತ್ತದೆ..!! ಹರ ಹರ ಮಹಾದೇವ್.. ವೀಡಿಯೊ ನೋಡಿ..!!

0
15360

ದಕ್ಷಿಣದ ಕಾಶಿ ಎಂದೆ ಪ್ರಸಿದ್ದವಾಗಿರುವ ಈ ಪುಣ್ಯ ಕ್ಷೇತ್ರ ಬೆಂಗಳೂರು ನಗರದಿಂದ 54 ಕಿಮೀ ದೂರದಲ್ಲಿದೆ.

ಶಿವಗಂಗೆ ಬೆಟ್ಟದ ಮೇಲೆ ಗಂಗಾಧರೇಶ್ವರ ದೇವಾಲಯವಿದೆ. ಬೆಟ್ಟದ ಪ್ರಾರಂಭದಲ್ಲಿ ಶಿವನ ದೇವಾಲಯವಿದೆ, ಇಲ್ಲಿ ಶಿವ ಲಿಂಗದ ಮೇಲೆ ತುಪ್ಪವನ್ನು ಹಾಕಿದರೆ ಬೆಣ್ಣೆಯಾಗಿ ಪರಿವರ್ತನೆ ಆಗುತ್ತದೆ ಎಂದು ಪ್ರತೀತಿ, ವೀಡಿಯೊ ಕೊನೆಯಲ್ಲಿ ನೋಡಬಹುದಾಗಿದೆ.

ಹಾಗೆಯೆ ಇಲ್ಲಿ ಒಂದು ಸಣ್ಣ ಸುರಂಗವಿದೆ, ಈ ಸುರಂಗದಲ್ಲಿ ಮುಂದುವರೆದರೆ ಶ್ರೀರಂಗಪಟ್ಟಣ ತಲುಪಬಹುದು ಎಂಬ ನಂಬಿಕೆ, ಬೆಟ್ಟದಲ್ಲಿ ಸ್ವಲ್ಪ ಮೇಲೆ ಏರಿದರೆ ಒಳಕಲ್ಲು ತೀರ್ಥ ಎನ್ನುವ ಮತ್ತೊಂದು ಸ್ಥಳವಿದೆ, ಇಲ್ಲಿರುವ ಒಳಕಲ್ಲಿನಲ್ಲಿ ವರ್ಷದ ೩೬೫ ದಿನಗಳೂ ನೀರು ದೊರೆಯುತ್ತದೆ ಹಾಗೆ ಕಡಿದಾದ ಬೆಟ್ಟವನ್ನು ಏರುತ್ತಾ ಹೋದರೆ ಒಂದು ಎತ್ತರವಾದ ಬಂಡೆಯ ಮೇಲೆ ನಂದಿ ವಿಗ್ರಹವಿದೆ.

ಇದನ್ನು ಪ್ರದಕ್ಷಿಣೆ ಹಾಕುವುದೆ ಒಂದು ಸಾಹಸದ ಕೆಲಸ, ಕಾಲು ಇಡಲು ಕೂಡ ಜಾಗ ಚಿಕ್ಕದು ಹಾಗು ಮತ್ತೊಂದು ಕಡೆ ಆಳವಾದ ಪ್ರಪಾತ, ನಂತರ ಮುಂದುವರೆದರೆ ಬೆಟ್ಟದ ಮೇಲೆ ಗಂಗಾಧರೇಶ್ವರ ದೇವಾಲಯ ನೋಡಬಹುದು, ಇಲ್ಲಿರುವ ಮತ್ತೊಂದು ಆಕರ್ಷಣೆ ಎಂದರೆ ಬೆಟ್ಟದ ತುದಿಯಲ್ಲಿ ಕಟ್ಟಿರುವ ಬೆಳ್ಳೀ ಗಂಟೆಗಳು, ಈ ಗಂಟೆಗಳನ್ನು ಕಟ್ಟಿದವರು ಎಂಟೆದೆಯ ಭಂಟರೇ ಇರಬೇಕು, ಇಲ್ಲಿ ನೋಡಬೇಕಾದ ಮತ್ತೊಂದು ಜಾಗ ನಾತ್ಯ ರಾಣಿ ಶಾಂತಲೆಯು ಕೆಳಗೆ ಬಿದ್ದ ಜಾಗ.

ಇಲ್ಲಿ ಶ್ರೀ ಹೊನ್ನಾದೇವಿ ದೇವಸ್ಥಾನವೂ ಅಷ್ಟೇ ಪ್ರಮುಖವಾದ ದೇವಸ್ಥಾನವಾಗಿದೆ, ಶ್ರೀ ಗಂಗಾಧರೇಶ್ವರ ಮತ್ತು ಶ್ರೀ ಹೊನ್ನಾದೇವಿ ದೇವಸ್ಥಾನಗಳು ಗವಿಗಳಲ್ಲಿವೆ, ಪ್ರತಿ ವರ್ಷ ಜನವರಿ ತಿಂಗಳಿನ ಸಂಕ್ರಾಂತಿ ಹಬ್ಬದ ದಿನ ಎರಡೂ ದೇವರುಗಳಿಗೆ ವಿವಾಹ ಮಹೋತ್ಸವವನ್ನು ಮಾಡಲಾಗುತ್ತದೆ ಆ ದಿನ ಮುಂಜಾನೆ, ಬೆಟ್ಟದ ಮೇಲಿನ ಕಲ್ಲಿನಿಂದ ಗಂಗಾ ಜಲ ಹೊರ ಹೊಮ್ಮುತ್ತದೆ, ಆದೇ ಜಲವನ್ನು ವಾದ್ಯಗೋಷ್ಠಿಗಳ ಸಹಿತದೊಂದಿಗೆ ತಂದು ಅದೇ ಪವಿತ್ರವಾದ ನೀರಿನಿಂದ ಶ್ರೀ ಹೊನ್ನಾದೇವಿಯನ್ನು ಶ್ರೀ ಗಂಗಾಧರೇಶ್ವರನಿಗೆ ಧಾರೆ ಎರೆದು ಕೊಡಲಾಗುತ್ತದೆ.

LEAVE A REPLY

Please enter your comment!
Please enter your name here