ನಿಮ್ಮ ವಾಹನಗಳಿಗೆ ಈ ರೀತಿ ದೃಷ್ಟಿ ತೆಗೆದರೆ ಅಪಘಾತವಾಗುವುದಿಲ್ಲ..!!

0
1413

ನಿಮ್ಮ ವಾಹನಗಳನ್ನು ಮನೆಯಾಚೆಯೇ ನಿಲ್ಲಿಸಿರ ಬೇಕು, ಬಹಳವೆಂದರೆ ಮನೆಯ ಕಾಂಪೌಂಡಿನ ಒಳಗೆ ನಿಲ್ಲಿಸಿ ಕೊಳ್ಳಬಹುದು, ಆದರೆ ನಿಮ್ಮ ವಾಹನವು ದಿನದ 24 ಗಂಟೆಯೂ ಬೇರೆಯವರ ಕಣ್ಣಿನ ದೃಷ್ಟಿಗೆ ಬೀಳುತ್ತಲೇ ಇರುತ್ತದೆ, ಪ್ರತಿವರ್ಷ ಗಳಿಗೆ ಇಲ್ಲವಾದರೂ ಆಯುಧ ಪೂಜೆ ಬಂದಾಗ ನಿಮ್ಮ ಗಾಡಿಯನ್ನು ಸ್ವಚ್ಛಗೊಳಿಸಿ ಪೂಜೆ ಮಾಡುತ್ತಿರುತ್ತೀರಿ, ಅದು ಸಾಕೆ? ಒಮ್ಮೆ ಯೋಚಿಸಿ ನಿಮ್ಮ ವಾಹನವು ರಸ್ತೆಯಲ್ಲಿ ಸಾಗುವಾಗ ಎಲ್ಲ ತರದ ವಸ್ತುಗಳ ಮೇಲೆಯೂ ಚಲಿಸುತ್ತದೆ, ಅದರಂತೆ ಋಣಾತ್ಮಕ ವಸ್ತುಗಳ ಮೇಲೂ ಚಲಿಸಿರಬಹುದಲ್ಲವೇ.

ಈ ಕಾರಣಕ್ಕಾಗಿ ವಾಹನಗಳ ದೃಷ್ಟಿಯನ್ನು ನಾವು ಆಗಾಗ ತೆಗೆಯುತ್ತೇವೆ, ವಾಹನವನ್ನು ಸರಿಯಾದ ರೀತಿಯಲ್ಲಿ ದೃಷ್ಟಿ ತೆಗೆಯಬೇಕಾಗುತ್ತದೆ, ದೃಷ್ಟಿಯನ್ನು ತೆಗೆಯುವ ಸರಿಯಾದ ಪದ್ಧತಿಯನ್ನು ಅಥವಾ ಆಚರಣೆಯನ್ನು ಇಂದು ನಾವು ನಿಮಗೆ ತಿಳಿಸುತ್ತೇವೆ.

ವಾಹನಗಳಿಗೆ ದೃಷ್ಟಿ ತಗಲಿದರೆ, ಅದರಲ್ಲಿ ಪ್ರಯಾಣ ಮಾಡುವ ನಿಮಗೆ ಒಂದಲ್ಲಾ ಒಂದು ರೀತಿಯ ತೊಂದರೆಗಳು ನಿರ್ಮಾಣವಾಗುತ್ತದೆ ಉದಾಹರಣೆಗೆ ಅಪಘಾತದ ಪ್ರಸಂಗಗಳು, ವಾಹನದಲ್ಲಿ ಸವಾರಿ ಮಾಡಿದರೆ ತಲೆ ಭಾರವಾಗುವುದು, ವಾಹನ ಸವಾರಿ ನಂತರ ಸುಸ್ತಾಗುವುದು ಇತ್ಯಾದಿ ಲಕ್ಷಣಗಳು ಕಂಡುಬಂದರೆ ನಿಮ್ಮ ವಾಹನಗಳಿಗೆ ದೃಷ್ಟಿ ತಗಲಿದೆ ಎಂದು ಅರ್ಥ.

ವಾಹನಗಳ ದೃಷ್ಟಿಯನ್ನು ತೆಗೆಯಲು ಆಂಜನೇಯ ಸ್ವಾಮಿ ಅಥವಾ ಇತರ ಉಚ್ಚ ದೇವತೆಗಳ ದೇವಸ್ಥಾನಗಳಿಗೆ ತೆರಳಿ ಅಲ್ಲಿ ದೃಷ್ಟಿಯನ್ನು ತೆಗೆಯಬೇಕು, ದೃಷ್ಟಿ ತೆಗೆಯಲು ಮೊದಲು ವಾಹನದ ಬಾಗಿಲು ಮತ್ತು ಮುಂದಿನ ಭಾಗವನ್ನು ತೆರೆದು ಇಡಬೇಕು, ನಂತರ ವಾಹನದ ಮುಂದೆ ನಿಂತು ಒಂದು ತೆಂಗಿನಕಾಯಿಯಿಂದ ಬಲಭಾಗಕ್ಕೆ ವರ್ತುಲ ಕೃತಿಯಲ್ಲಿ ಮೂರು ಬಾರಿ ತೆಂಗಿನಕಾಯಿಯನ್ನು ನಿವಾಳಿಸಬೇಕು, ದೃಷ್ಟಿ ತೆಗೆದ ನಂತರ ಆ ತೆಂಗಿನಕಾಯಿಯನ್ನು ಮಾರುತಿಯ ದೇವಾಲಯ ಅಥವಾ ಉಚ್ಚ ದೇವಾಲಯ ಮೆಟ್ಟಿಲಿನ ಮೇಲೆ ಹೊಡೆಯಬೇಕು, ಹೀಗೆ ಮಾಡುವುದರಿಂದ ತೆಂಗಿನಕಾಯಿಯಲ್ಲಿ ಸೆಳೆಯಲ್ಪಟ್ಟ ತ್ರಾಸದಾಯಕ ಸ್ಪಂದನಗಳು ದೇವತೆಯ ಆಶೀರ್ವಾದದೊಂದಿಗೆ ನಾಶವಾಗುತ್ತದೆ.

ಅಥವಾ ನೀವು ಇರುವ ಜಾಗದಲ್ಲಿ ದೇವಾಲಯಗಳು ಸಿಗದಿದ್ದರೆ ನೀವು ಇರುವ ಸ್ಥಳದಲ್ಲಿ ತೆಂಗಿನಕಾಯಿಯಿಂದ ವಾಹನ ದೃಷ್ಟಿಯನ್ನು ತೆಗೆದ ನಂತರ ಸಂಪೂರ್ಣ ಬಲವನ್ನು ಉಪಯೋಗಿಸಿ ನಿಮ್ಮ ತೆಂಗಿನಕಾಯಿಯನ್ನು ನೆಲಕ್ಕೆ ಹೊಡೆಯಬೇಕು, ಒಡೆದ ತೆಂಗಿನಕಾಯಿಯ ತುಂಡುಗಳನ್ನು ಒಟ್ಟುಗೂಡಿಸಿ ಅವುಗಳನ್ನು ಗಾಡಿಯ ಮೇಲಿಂದ ನಾಲ್ಕು ದಿಕ್ಕುಗಳಿಗೆ ಎಸೆಯಬೇಕು, ಹೀಗೆ ಬಲವಾಗಿ ಭೂಮಿಗೆ ಕಾಯಿಂದ ಹೊಡೆಯುವುದರಿಂದ ತ್ರಾಸದಾಯಕ ಸ್ಪಂದನಗಳು ಭೂಮಿಯಲ್ಲಿ ವಿಸರ್ಜಿಸಲ್ಪಡುತ್ತದೆ.

ಹೀಗೆ ದೃಷ್ಟಿ ತೆಗೆದ ನಂತರ ನಿಮ್ಮ ವಾಹನವನ್ನು ಊದುಬತ್ತಿ ಗಳಿಂದ ಬೆಳಗಿಸಿ ಮತ್ತು ದೇವತೆಯ ಜಯಘೋಷ ಮಾಡಿ ಹೊರಡಿ, ಊದುಬತ್ತಿ ಗಳಿಂದ ಬೆಳಗುವುದರಿಂದ ಆ ಸ್ಥಳದ ಶುದ್ಧೀಕರಣವಾಗುತ್ತದೆ, ಹಾಗೂ ಯಾವುದೇ ಅಪಾಯ ಅವಗಡ ಗಳಿಲ್ಲದೆ ನಿಮ್ಮ ಪ್ರಯಾಣ ಸಂಪೂರ್ಣವಾಗುತ್ತದೆ.

ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.

LEAVE A REPLY

Please enter your comment!
Please enter your name here