ಈ ಮಂತ್ರ ಜಪಿಸಿದರೆ ಸಿಗುತ್ತೆ ಸರ್ವ ರೋಗಕ್ಕೆ ಪರಿಹಾರ..!!

0
14715

ಜಗತ್ತಿನ ಮೊದಲ ವೈದ್ಯ ವಿಷ್ಣುವಿನ ಅವತಾರ ಧನ್ವಂತರಿ ದೇವರ ಮಂತ್ರ ಸರ್ವರೋಗಕ್ಕೂ ಪರಿಹಾರ ಇಲ್ಲಿದೆ ನೋಡಿ.

ಧನ್ವಂತರಿ : ಹಿಂದೂ ಸಂಪ್ರದಾಯದಲ್ಲಿ ವಿಷ್ಣುವಿನ ಅವತಾರ, ವೇದ ಹಾಗು ಪುರಾಣಗಳಲ್ಲಿ ದೇವತೆಗಳ ವೈದ್ಯನೆಂದು ಧನ್ವಂತರಿಯ ಉಲ್ಲೇಖವಿದೆ. ಆಯುರ್ವೇದದ ದೇವತೆ ಕೂಡ ಧನ್ವಂತರಿ. ಹಿಂದೂ ಸಂಪ್ರದಾಯದಲ್ಲಿ ಆಯುರಾರೋಗ್ಯ ಬಯಸುವವರು ಧನ್ವಂತರಿಯ ಕುರಿತು ಪ್ರಾರ್ಥನೆ ಮಾಡುವುದು ಸಾಮಾನ್ಯ.

ಪುರಾಣ : ಧನ್ವಂತರಿ ಭಾರತದ ಮೊದಲ ವೈದ್ಯನೆಂಬ ಪ್ರತೀತಿ ಹಾಗು ನಂಬಿಕೆ ಇದೆ. ವೈದಿಕ ಸಂಪ್ರದಾಯದ ಪ್ರಕಾರ ಧನ್ವಂತರಿ ಆಯುರ್ವೇದದ ಹರಿಕಾರ. ಹಿಂದೂ ಸಂಪ್ರದಾಯದಲ್ಲಿ ಹಲವು ಸಸ್ಯಗಳ, ಗಿಡಮೂಲಿಕೆಗಳ ಪಾರಿಸರಿಕ ಬಳಕೆಯಿಂದ ಔಷಧ ತಯಾರಿಸಿದ ಗೌರವ ಧನ್ವಂತರಿಗೆ ಸಲ್ಲುತ್ತದೆ.

ಕ್ಷೀರೋದಮಥನೋದ್ಭೂತಂ ದಿವ್ಯ ಗಂಧಾನುಲೇಪಿತಂ ಸುಧಾಕಲಶಹಸ್ತಂ ತಂ ವಂದೇ ಧನ್ವಂತರಿಂ ಹರಿಂ.

ಎಂಬ ಶ್ಲೋಕದಂತೆ ಕ್ಷೀರ ಸಮುದ್ರ ಮಥನ ಕಾಲದಲ್ಲಿ ದಿವ್ಯ ಗಂಧಾನುಲೇಪಿತನಾಗಿ ಅಮೃತ ಕಲಶ ಕೈಯಲ್ಲಿ ಹಿಡಿದು ಮಹಾವಿಷ್ಣು ಧನ್ವಂತರಿಯ ಅವತಾರ ತಾಳಿದನು ಎಂದು ಪುರಾಣಗಳಲ್ಲಿ ವರ್ಣಿತವಾಗಿದೆ.

ದೇವತೆಗಳು ರಾಕ್ಷಸರೊಂದಿಗೆ ಹೋರಾಡುವ ಸಂದರ್ಭಗಳಲ್ಲಿ ಗುಣಪಡಿಸಲಾರದ ನೋವು ವ್ಯಾಧಿಗಳಿಗೆ ತುತ್ತಾಗುವುದನ್ನು ಕಂಡು ವೈದ್ಯನಾಗಿ ಚಿಕಿತ್ಸೆ ನೀಡಲು ಧನ್ವಂತರಿ ರೂಪಧಾರಿಯಾಗಿ ವಿಷ್ಣು ಅವತರಿಸಿದನೆಂದು ನಂಬಲಾಗಿದೆ.

ಧನು+ಏವ+ಅಂತಃ+ಅರಿ=ಧನ್ವಂತರಿ(ಸರ್ಜನ್), ಧನುಷಾ+ತರತೇ+ತಾರಯತೇ+ಪಾಪಾತ್=ಧನ್ವಂತರಿ(ಪಾಪ ವಿಮುಕ್ತಿ).

ಎಂಬುದು ಧನ್ವಂತರಿ ಪದದ ನಿಷ್ಪತ್ತಿಯಾಗಿದೆ, ನಮಾಮಿ ಧನ್ವಂತರಿಯಾದಿದೇವಂ ಸುರಾಸುರೈರ್ವಂದಿತ ಪಾದಪದ್ಮಂ ಲೋಕೇಜರಾಋಗ್ವಯ ಮೃತ್ಯುನಾಶಂ ದಾತಾರಮೀಶಂ ವಿವಿಧೌಷಧೀನಾಂ.

ಎಂಬ ಶ್ಲೋಕದೊಂದಿಗೆ ಧನ್ವಂತರಿಯನ್ನು ನಿತ್ಯ ಪ್ರಾರ್ಥಿಸಿ ಕಾರ್ಯ ಆರಂಭಿಸಿದರೆ ದಿನವಿಡೀ ಚೈತನ್ಯಪೂರ್ಣತೆ ಉಳಿಯುತ್ತದೆ ಎನ್ನಲಾಗಿದೆ. ಧನ್ವಂತರಿ ಸುಪ್ರಭಾತ, ಧನ್ವಂತರಿ ಪ್ರಪತ್ತಿ, ಧನ್ವಂತರಿ ಸ್ಮೃತಿಗಳಲ್ಲಿ ಧನ್ವಂತರಿ ದೇವರ ವಿಶೇಷತೆಯನ್ನು ಬಣ್ಣಿಸಲಾಗಿದೆ.

ಈ ಕೆಳಗಿರುವ ಸ್ತೋತ್ರವನ್ನು ನಿತ್ಯ ಪಠಿಸಿ ಆರೋಗ್ಯದಿಂದಿರಿ.

ನಮೋ ಭಗವತೇ ಮಹಾಸುದರ್ಶನಾಯ, ವಾಸುದೇವಾಯ ಧನ್ವಂತರಯೇ, ಅಮೃತ ಕಲಶ ಹಸ್ತಾಯ ಸರ್ವಭಯ ವಿನಾಶಾಯ, ಸರ್ವರೋಗ ನಿವಾರಣಾಯ, ತ್ರೈಲೋಕ್ಯ ಪತಯೇ ತ್ರೈಲೋಕ್ಯ ನಿಧಯೇ, ಶ್ರೀ ಮಹಾವಿಷ್ಣು ಸ್ವರೂಪ, ಶ್ರೀ ಧನ್ವಂತರೀ ಸ್ವರೂಪ
ಶ್ರೀ ಶ್ರೀ ಶ್ರೀ ಔಷಧಚಕ್ರ ನಾರಾಯಣಾಯ ಸ್ವಾಹಾ.

ನಿಮ್ಮ ಹುಟ್ಟಿದ ಸಮಯ, ಜಾತಕ, ಮುಖಲಕ್ಷಣ ನೋಡಿ ಸಂಪೂರ್ಣ ಭವಿಷ್ಯ ನುಡಿಯುತ್ತಾರೆ, ನಿಮ್ಮ ಯಾವುದೇ ಘೋರ ನಿಗೂಢ ಮತ್ತು ಗುಪ್ತ ಸಮಸ್ಯೆಗಳಿಗೆ ಕೆಲವೇ ದಿನಗಳಲ್ಲಿ ಪರಿಹಾರ ಶತಸಿದ್ಧ ಮಾಡಿಕೊಡುತ್ತಾರೆ, ವಿಶೇಷ ಸೂಚನೆ : ( ವಶೀಕರಣ ಮಾಂತ್ರಿಕರು ) ಕರೆ ಮಾಡಿ : 9740202800

LEAVE A REPLY

Please enter your comment!
Please enter your name here