ಸಕ್ಕರೆ ಕಾಯಿಲೆ ಇದ್ದವರು ದಪ್ಪ ಈರುಳ್ಳಿಯನ್ನು ಈ ರೀತಿ ಬಳಸಿದರೆ ಬಹಳ ಒಳ್ಳೆಯದು..!!

0
3620

ಪ್ರಪಂಚದಲ್ಲಿ ಎಲ್ಲೇ ಹೋದರು ನಿಮಗೆ ಈರುಳ್ಳಿ ಸಿಗಬಹುದು, ಅಷ್ಟು ಚಿರಪರಿಚಿತ ತರಕಾರಿಯಲ್ಲಿ ಈರುಳ್ಳಿ ಸಹ ಒಂದು, ಅದರಲ್ಲೂ ನಿಮಗೆ ಅಚ್ಚರಿ ಮೂಡಿಸುವ ವಿಷಯವೆಂದರೆ ಈರುಳ್ಳಿಯಲ್ಲಿ ೩೦೦ರಕ್ಕೂ ಅಧಿಕ ಪ್ರಭೇದಗಳಿವೆ, ಇನ್ನು ಹಿತಿಹಾಸದಲ್ಲೂ ಈರುಳ್ಳಿಯನ್ನ ಕಾಣಬಹುದು ಗರುಡ ಪುರಾಣದಲ್ಲಿ ಇದರ ಉಲ್ಲೇಖವಿದೆ ಹಾಗು ಸಂಸ್ಕೃತದಲ್ಲಿ ಈರುಳ್ಳಿಯನ್ನು ಪಲಾಂಡು ಎನ್ನುತ್ತಾರೆ, ಮನುಷ್ಯ ತೀರ ಪ್ರಾಚೀನ ಕಾಲದಿಂದಲೂ ಬೆಟ್ಟ ಗುಡ್ಡ ಕಾಡುಗಳಿಂದ ಹಲವು ಬಗೆಯ ಗಿಡಮೂಲಿಕೆಗಳನ್ನು ಸಂಗ್ರಹಿಸಿ ಬಳಸುತ್ತಿದ್ದ ಆದರೆ ಸ್ವತಃ ಬೆಳೆಸಿ, ಬಳಸತೊಡಗಿದ ಮೊದಮೊದಲ ಗಿಡಮೂಲಿಕೆಗಳ ಪೈಕೆ ಈರುಳ್ಳಿಯೂ ಒಂದು.

ಈರುಳ್ಳಿಯ ಪ್ರಬಲ ರಾಸಾಯನಿಕವು ಅದನ್ನು ಹಸಿಯಗಿ ತಿಂದಾಗ ಹೆಚ್ಚಿನ ಪ್ರಮಾಣದಲ್ಲಿ ದೇಹದಲ್ಲಿ ಉಳಿದು ಕೊಳ್ಳುತ್ತದೆ, ಸಣ್ಣ ಈರುಳ್ಳಿಯಲ್ಲಿ ಪೋಷಕಾಂಶ ಅಧಿಕ ಆದರೆ ನಾರಿನಾಂಶ ಕಡಿಮೆ ಇರುತ್ತದೆ.

ಇನ್ನು ಸಕ್ಕರೆ ಕಾಯಿಲೆ ಇದ್ದವರು ಪ್ರತಿದಿನ ನಿಮ್ಮ ಅಡುಗೆಯಲ್ಲಿ ತಪ್ಪದೆ ದಪ್ಪ ಈರುಳ್ಳಿಯನ್ನು ಬಳಸಬೇಕು ಅಥವಾ ಆಹಾರ ಸೇವನೆ ಮಾಡುವಾಗ ಜೊತೆಯಲ್ಲಿ ಹಸಿ ಈರುಳ್ಳಿಯನ್ನು ತಿನ್ನಬೇಕು.

ಕೆಂಪಾಗಿರುವ ದಪ್ಪ ಈರುಳ್ಳಿಯಲ್ಲಿ ನಾರಿನಂಶ ಅಧಿಕವಾಗಿದ್ದು, ಜೀರ್ಣಕ್ರಿಯೆಯನ್ನು ಸುಗಮವಾಗಿಸುತ್ತದೆ, ಹಾಗಂತ ಸ್ಪ್ರಿಂಗ್ ಆನಿಯನ್ ಸೇವಿಸಿ ಪ್ರಯೋಜನವಿಲ್ಲ, ಯಾಕೆಂದರೆ ಇದರಲ್ಲಿ ನಾರಿನಂಶ ಕಡಿಮೆ.

ಅಷ್ಟೇ ಅಲ್ಲ ಈರುಳ್ಳಿಯಲ್ಲಿರುವ ಗ್ಲೈಕೆಮಿಕ್ ಅಂಶ ಸಕ್ಕರೆ ಕಾಯಿಲೆ ಇದ್ದವರಿಗೆ ಅಗತ್ಯವಾದಷ್ಟೇ ಇದೆ, ಈ ಅಂಶ ಆಹಾರದಲ್ಲಿರುವ ಗ್ಲುಕೋಸ್ ಅಂಶ ರಕ್ತಕ್ಕೆ ಸೇರ್ಪಡೆಯಾಗುವುದನ್ನು ನಿಧಾನಗೊಳಿಸುತ್ತದೆ, ಆದ್ದರಿಂದ ಸಕ್ಕರೆ ಕಾಯಿಲೆ ಇದ್ದವರಿಗೆ ಸಲಾಡ್ ರೂಪದಲ್ಲಿಯೋ, ಸ್ಯಾಂಡ್ ವಿಚ್ ರೂಪದಲ್ಲಿಯೋ ಈರುಳ್ಳಿ ಹೇರಳವಾಗಿ ಸೇವಿಸುವುದು ಒಳ್ಳೆಯದು.

ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿ ಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.

LEAVE A REPLY

Please enter your comment!
Please enter your name here