ಕೆವಲಾ 5 ಕಪ್‌ ಕಾಫಿಯಲ್ಲಿದೆ ಲಿವರ್‌ ಕ್ಯಾನ್ಸರ್‌ಗೆ ಮದ್ದು..!! ಕುತೂಹಲ ಮಾಹಿತಿ.

0
13921

ದಿನಕ್ಕೆ 2 ಲೋಟಕ್ಕಿಂತ ಅಧಿಕ ಕಾಫಿ ಕುಡಿಯುವ ಅಭ್ಯಾಸ ಇದೆಯೇ ? ಹಾಗದರೆ ನಿಮಗೊಂದು ಸಿಹಿ ಸುದ್ದಿ, ದಿನದಲ್ಲಿ 5 ಲೋಟಕ್ಕಿಂತ ಅಧಿಕ ಕಾಫಿ ಕುಡಿಯುವುದರಿಂದ ಲಿವರ್‌ ಕ್ಯಾನ್ಸರ್‌ ಬರುವುದನ್ನು ತಡೆಯಬಹುದೆಂದು ಲಂಡನ್‌ನಲ್ಲಿ ನಡೆಸಿದ ಸಂಶೋಧನೆಯಿಂದ ತಿಳಿದು ಬಂದಿದೆ.

ಈ ಅಧ್ಯಯನದ ಕುರಿತು ಬಿಎಂಜೆ ಜರ್ನಲ್‌ನಲ್ಲಿ ಪ್ರಕಟವಾಗಿದ್ದು, ಕಾಫಿಯು ಹೆಪ್ಟೋಸೆಲ್ಯೂಲರ್‌ ಕ್ಯಾನ್ಸರ್‌ನಿಂದ (HCC) ನಮ್ಮನ್ನು ರಕ್ಷಿಸುತ್ತದೆ ಎಂದು ಅದರಲ್ಲಿ ಹೇಳಲಾಗಿದೆ. ಕ್ಯಾನ್ಸರ್‌ ಕಾಯಿಲೆಯಿಂದ ಸಾಯುವವರ ಪೈಕಿ ಲಿವರ್‌ ಕ್ಯಾನ್ಸರ್‌ನಿಂದ ಸಾಯುವವರ ಸಂಖ್ಯೆ ಎರಡನೇ ಸ್ಥಾನದಲ್ಲಿದೆ.

ಒಂದು ಕಪ್‌ ಕಾಫಿ ಕುಡಿಯುವುದರಿಂದ ಈ ಕ್ಯಾನ್ಸರ್‌ ಬರುವ ಸಾಧ್ಯತೆ ಶೇ. 20ರಷ್ಟು ಕಡಿಮೆಯಾದರೆ ಎರಡು ಕಪ್‌ ಕಾಫಿ ಕುಡಿಯುವವರಲ್ಲಿ ಶೇ. 35ರಷ್ಟು ಕಡಿಮೆಯಾಗುವುದು.

ನಾವು ಎಲ್ಲರೂ ಕಾಫಿ ಕುಡಿಯಿರಿ ಎಂದು ಸಲಹೆ ನೀಡುತ್ತಿಲ್ಲ, ಅಧಿಕ ಕಾಫಿ ಕುಡಿಯುವುದರಿಂದ ಅಡ್ಡಪರಿಣಾಮವೇನು ಎನ್ನುವುದರ ಕುರಿತು ಅಧ್ಯಯನ ನಡೆಯುತ್ತಿದೆ, ಅದರಲ್ಲೂ ಗರ್ಭಿಣಿಯರು ಕಾಫಿ ಕುಡಿಯಬಾರದೆಂದು ಪ್ರಸಿದ್ಧ ಬರಹಗಾರ ಆಲಿವರ್‌ ಕೆನಡಿ ಹೇಳಿದ್ದಾರೆ.

ಕಾಫಿ ಕುಡಿಯುವುದರಿಂದ ಲಿವರ್‌ ಕ್ಯಾನ್ಸರ್ ತಡೆಗಟ್ಟುವುದು ಮಾತ್ರವಲ್ಲಿ, ಇತರ ಕಾಯಿಲೆಯಿಂದಲೂ ನಮಗೆ ರಕ್ಷಣೆ ನೀಡುತ್ತದೆ ಎಂದು ಈಡನ್‌ಬರ್ಗ್ ವಿಶ್ವವಿದ್ಯಾನಿಲಯದ ಪ್ರೊಫೆಸರ್‌ ಪೀಟರ್‌ ಹೇಯಸ್‌ ಹೇಳಿದ್ದಾರೆ.

ಕಾಫಿಯನ್ನು ನಿಯಮಿತವಾಗಿ ಕುಡಿಯುವುದರಿಂದ ಅದೊಂದು ಪರಿಣಾಮಕಾರಿಯಾದ ನೈಸರ್ಗಿಕ ಮದ್ದಾಗಿದೆ ಎಂದು ಹೇಯಸ್‌ ಹೇಳಿದ್ದಾರೆ.

ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿ ಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.

LEAVE A REPLY

Please enter your comment!
Please enter your name here