ಮಗನನ್ನು ರೈತನಾಗಿ ಮಾಡಲು ಒಂದು ಲಕ್ಷ ಸಂಬಳದ ಕೆಲಸ ಬಿಟ್ಟ ಮಹಾ ತಾಯಿ

0
7181

ಇಂಧೋರ್’ನ ಹಳ್ಳಿಯೊಂದರಲ್ಲಿ ಹತ್ತು ವರ್ಷದ ಮಗನಿಗೆ ಕೃಷಿ ಕೆಲಸ ಕಲಿಸುತ್ತಿರುವ ತಾಯಿಯ ಕೆಲಸ ಅಚ್ಚರಿ ಮೂಡಿಸುತ್ತಿದೆ. ಕಾರಣ ತಾಯಿ ಏನು ಸಾಮಾನ್ಯ ರೈತ ಕುಟುಂಬದವರೂ ಅಲ್ಲ. ಮತ್ತು ಹಳ್ಳಿಯವರೂ ಅಲ್ಲ. ಅವರ ಬಗ್ಗೆ ತಿಳಿದರೇ ನೀವು ಹೆಮ್ಮೆ ಪಡುತ್ತೀರ! ಈಗಿನ ಕಾಲದಲ್ಲಿ ರೇಸಿನ ಹಿಂದೆ ಹೋದಂತೆ ಜೀವನ ಕಳೆಯುತ್ತಿರುವ ತಂದೆ ತಾಯಿಯರು, ತಮ್ಮ ಮಕ್ಕಳು ಓದಿನಲ್ಲಿ ಇನ್ನೊಬ್ಬರಿಗಿಂತ ಮೊದಲು ಬರಬೇಕು, ಅವರಿಗೆ ಇಷ್ಟ ಇಲ್ಲದಿದ್ದರೂ ಅವರು ಡಾಕ್ಟರ್, ಎಂಜಿನಿಯರಿಂಗ್ ಆಗಬೇಕು ಎಂದು ಅವರಿಗೆ ಒತ್ತಡ ತರುತ್ತಿರುವುದು ಈಗಿನ ಸಮಾಜದ ಸಾಮಾನ್ಯ ಜೀವನವಾಗಿದೆ.

ಆದರೆ ರಾಜಸ್ಥಾನದ ರಾಜೇಂದ್ರ ಸಿಂಗ್ ಮತ್ತು ಅವರ ಪತ್ನಿ ಚಂಚಲ್ ಕೌರ್ ಇಬ್ಬರೂ ಸರ್ಕಾರಿ ಉದ್ಯೋಗಸ್ಥರು. ಅವರಿಗೆ ಒಬ್ಬನೇ ಮಗ. ಅವನಿಗೆ ಹನ್ನೊಂದು ವರ್ಷ. ಸಿಟಿಯ ಬದುಕು , ಟ್ರಾಫಿಕ್ , ಅಶುದ್ಧ ಗಾಳಿ , ಹೆಚ್ಚು ಜನಸಂಖ್ಯೆ, ಗೌಜು, ಗದ್ದಲದಿಂದ ಚಂಚಲ್ ಕೌರ್ ಬೇಸತ್ತಿದ್ದರು. ಅವರಿಗೆ ತಮ್ಮ ಮಗನ ಭವಿಷ್ಯದ ಬಗ್ಗೆ ಹೆದರಿಕೆ ಉಂಟಾಯಿತು. ನನ್ನ ಮಗನೂ ಇದೇ ರೀತಿಯಲ್ಲಿ ಬದುಕಬೇಕೇ ? ಈ ಒತ್ತಡದ ಬದುಕು ನನ್ನ ಮಗನಿಗೆ ಬೇಡ. ಅವನಿಗೆ ಅವನ ಇಷ್ಟದಂತೆ ಸ್ವತಂತ್ರವಾಗಿ ಬದುಕಬೇಕು. ಶುದ್ಧ ಗಾಳಿ, ಆಹಾರ ಅವನು ಅನುಭವಿಸಬೇಕು ಎಂದು ತೀರ್ಮಾನಿಸಿದರು. ತಮಗೆ ಬರುತ್ತಿದ್ದ ಒಂದು ಲಕ್ಷ ಸಂಬಳದ ಕೆಲಸವನ್ನು ಬಿಟ್ಟು ಹಳ್ಳಿಯಲ್ಲಿ ಒಂದೂವರೆ ಎಕರೆ ಜಮೀನನ್ನು ಖರೀದಿಸಿದರು. ಅಲ್ಲಿ ಸಾವಯವ ಕೃಷಿಯನ್ನು ಬೆಳೆದರು. ತಮ್ಮ ಮಗನಿಗೆ ಹಳ್ಳಿಯ ಬದುಕನ್ನು ಹೇಳಿ ಕೊಟ್ಟರು. ಅವನಿಗೆ ಅಲ್ಲಿನ ಮಕ್ಕಳೊಂದಿಗೆ ಬೆರೆಯಲು ಬಿಟ್ಟರು. ಓದಿನ ಜೊತೆಗೆ ಅವನು ಕೂಡ ಕೃಷಿಯನ್ನು ಮಾಡುತ್ತಾನೆ. ತಾಯಿ ಇದಕ್ಕೆ ಬೆನ್ನೆಲುಬಾಗಿ ಇರುತ್ತಾರೆ. ಪತಿ ಕೂಡ ತಿಂಗಳಿಗೊಮ್ಮೆ ಬಂದು ಹೋಗುತ್ತಾರೆ. ಅವರಿಗೆ ಇವರಿಬ್ಬರನ್ನು ನೋಡಿ ಖುಷಿಯಾಗಿದೆ .

ಈ ಜಂಜಾಟದ ಬದುಕು ನಮಗೆ ಶಾಶ್ವತವಲ್ಲ.ಹಳ್ಳಿಯ ಸ್ವಚ್ಚ ಬದುಕು ನಮಗೆ ಸಂಸ್ಕೃತಿ ಜೊತೆಗೆ ಆನಂದವನ್ನು , ನೆಮ್ಮದಿಯನ್ನು ತರುತ್ತದೆ.ಇದಕ್ಕೆ ಈ ಮಹಾತಾಯಿನೇ ಉದಾಹರಣೆ. ನಿಮಗೇನನ್ನಿಸುತ್ತದೆ ? ತಪ್ಪದೇ ಕಾಮೆಂಟ್ ಮಾಡಿ.

LEAVE A REPLY

Please enter your comment!
Please enter your name here