ನಿಮ್ಮ ಮನೆಯಲ್ಲಿ ಯಾರಿಗಾದರೂ ಅತಿಯಾದ ಕೋಪ ಬರುತ್ತದೆ ಎಂದರೆ ಇವುಗಳನ್ನು ತಪ್ಪದೆ ಅವರಿಗೆ ತಿನ್ನಿಸಿ..

0
7029

ಕೆಲವು ಅಧ್ಯಯನಗಳ ಪ್ರಕಾರ ಅತಿಯಾಗಿ ಕೋಪ ಬರುವುದು ಪುರುಷರಿಗಿಂತ ಮಹಿಳೆಯರಿಗೆ ಹೆಚ್ಚು, ಹೆಚ್ಚಾಗಿ ಅವರು ಎಲ್ಲರನ್ನೂ ಕಂಟ್ರೋಲ್ ಮಾಡಲು ಬಯಸುತ್ತಾರೆ, ಹಾಗೂ ಎಲ್ಲಾ ವಿಚಾರಗಳ ಬಗ್ಗೆಯೂ ಪ್ರಯತ್ನ ಮಾಡುತ್ತಾರೆ ಇದರಿಂದ ಇವರಿಗೆ ಅತಿಯಾದ ಕೋಪ ಬರುತ್ತದೆ, ಹಾಗೂ ಇದೇ ಕೋಪದಿಂದ ಎಲ್ಲ ಸಂಬಂಧಗಳನ್ನು ಕಳೆದುಕೊಳ್ಳುತ್ತಾರೆ, ಕೋಪ ಬರುವುದು ಸಾಮಾನ್ಯ ಗುಣವೇ.

ಆದರೆ ಕೋಪ ಬಂದಾಗ ಯಾವ ರೀತಿ ನಡೆದುಕೊಳ್ಳಬೇಕು ಎಂಬುವುದು ತಿಳಿಯ ಬೇಕಾದ ವಿಚಾರ, ಬಹಳಷ್ಟು ಜನರು ಕೋಪ ಬಂದಾಗ ತಮ್ಮ ಮುಂದೆ ಇರುವ ವ್ಯಕ್ತಿಗಳ ಮೇಲೆ ಅದನ್ನು ತೋರಿಸುತ್ತಾರೆ ಇದು ಸರಿಯಲ್ಲ, ಈ ರೀತಿ ಕೋಪ ಮಾಡಿಕೊಳ್ಳುವುದರಿಂದ ಸಂಬಂಧಗಳನ್ನು ಹಾಳುಮಾಡಿಕೊಳ್ಳುವುದರ ಜೊತೆಯಲ್ಲಿ ಆರೋಗ್ಯದ ಮೇಲೂ ಇದು ಕೆಟ್ಟ ಪರಿಣಾಮಗಳನ್ನು ಬೀರುತ್ತವೆ.

ಉದಾಹರಣೆಗೆ ದೇಹದಲ್ಲಿ ರಕ್ತದ ಒತ್ತಡ ಹೆಚ್ಚಾಗುತ್ತದೆ, ಹೃದಯದ ಬಡಿತವು ಹೆಚ್ಚಾಗುತ್ತದೆ, ವೈದ್ಯಕೀಯ ಲೋಕ ಹೇಳುವ ಹಾಗೆ ದೇಹದಲ್ಲಿ ನ್ಯೂಟ್ರಿಯೆಂಟ್ಸ್, ಮೆಗ್ನೀಷಿಯಂ, ವಿಟಮಿನ್ ಸಿ ಮತ್ತು ವಿಟಮಿನ್ ಬಿ ಕಡಿಮೆ ಇರುವ ಜನರಿಗೆ ಹೆಚ್ಚಾಗಿ ಕೋಪ ಬರುತ್ತದೆ, ಆದಕಾರಣ ಈ ಅಂಶಗಳು ಹೆಚ್ಚಾಗಿ ದೊರೆಯುವ ಆಹಾರಗಳನ್ನು ಸೇವನೆ ಮಾಡುವುದರಿಂದ ಅವರ ಕೋಪವನ್ನು ಕಂಟ್ರೋಲ್ ಮಾಡಬಹುದು, ಹಾಗಾದರೆ ಯಾವ ಆಹಾರಗಳನ್ನು ಅವರು ಪ್ರತಿದಿನ ಸೇವಿಸಬೇಕು ಎಂಬುದರ ಬಗ್ಗೆ ತಿಳಿಯೋಣ.

ಬಾದಾಮಿ : ಮೊಟ್ಟಮೊದಲ ಯದಾಗಿ ಬಾದಾಮಿಯನ್ನು ಕೋಪ ಹೆಚ್ಚಾಗಿ ಮಾಡಿಕೊಳ್ಳುವವರು ತಿನ್ನಲೇಬೇಕು, ಈ ಬಾದಾಮಿಯು ಮೆದುಳಿನ ನರಗಳು ಸರಿಯಾಗಿ ಕೆಲಸ ಮಾಡುವಂತೆ ನೋಡಿಕೊಳ್ಳುತ್ತವೆ, ಆದ್ದರಿಂದ ಅತಿಯಾಗಿ ಕೋಪ ಬಂದ ಸಮಯದಲ್ಲಿ ಬಾದಾಮಿಯನ್ನು ತಿಂದರೆ ಕೋಪ ಹತೋಟಿಗೆ ಬರುವ ಸಂಭವ ಗಳು ಹೆಚ್ಚಿರುತ್ತದೆ.

ಎಳನೀರು : ಈಗಾಗಲೇ ಮೇಲೆ ತಿಳಿಸಿದ ಹಾಗೆ ಕೋಪ ಬಂದಾಗ ರಕ್ತದ ಒತ್ತಡ ಹಾಗೂ ಹೃದಯದ ಬಡಿತ ಹೆಚ್ಚಾಗುತ್ತದೆ ಅದರ ಜೊತೆಯಲ್ಲಿ ರಕ್ತದಲ್ಲಿನ ಸಕ್ಕರೆ ಅಂಶವು ಹೆಚ್ಚಾಗುವ ಸಂಭವ ಇರುತ್ತದೆ, ಇಂತಹ ಸಂದರ್ಭದಲ್ಲಿ ಎಳನೀರು ಸೇವನೆ ತುಂಬಾ ಒಳ್ಳೆಯದು ಕೋಪವನ್ನು ಕಡಿಮೆ ಮಾಡಲು ಇದು ಬಹಳಷ್ಟು ಸಹಕಾರಿ, ಇಲ್ಲವಾದರೆ ತೆಂಗಿನಕಾಯಿಯನ್ನು ಹಾಗೆ ಸೇವನೆ ಮಾಡಬಹುದು ಇದರಿಂದಲೂ ಕೋಪ ಕಡಿಮೆಯಾಗುತ್ತದೆ.

ಹಸಿರು ತರಕಾರಿಗಳು : ತಾಜಾ ಹಸಿರು ತರಕಾರಿಗಳನ್ನು ನೀವು ಪ್ರತಿದಿನ ಆಹಾರದಲ್ಲಿ ತಪ್ಪದೇ ಬಳಸಿ ಇವುಗಳಲ್ಲಿ ಹೆಚ್ಚಿನ ಪ್ರಮಾಣದ ಕ್ಯಾಲ್ಸಿಯಂ ಮತ್ತು ಮೆಗ್ನೀಷಿಯಂ ಇರುತ್ತದೆ, ದೇಹದ ಮಾಂಸ ಖಂಡಗಳು ಆರಾಮಾಗಿ ಇರುವಂತೆ ಮಾಡುತ್ತವೆ, ಅಷ್ಟೇ ಅಲ್ಲದೆ ಮೆದುಳಲ್ಲಿ ಉಂಟಾಗುವ ಎಕ್ಸೈಟ್ಮೆಂಟ್ ಕೂಡ ಕಡಿಮೆ ಮಾಡುತ್ತದೆ, ಆದ್ದರಿಂದ ಕೋಪ ಬಂದಾಗ ತಾಜಾ ಹಸಿರು ತರಕಾರಿಗಳನ್ನು ಸೇವನೆ ಮಾಡಿ.

LEAVE A REPLY

Please enter your comment!
Please enter your name here