ದವಡೆ ಮತ್ತು ಹಲ್ಲು ನೋವಿಗೆ ದಾಳಿಂಬೆ ಚಿಗುರು! ಸಿಂಪಲ್ ಹೋಂ ಟ್ರಿಕ್ಸ್

0
4086

ಹಲ್ಲು ನೋವನ್ನು ಸಹಿಸುವುದು ತುಂಬಾ ಕಷ್ಟ. ಇತ್ತೀಚಿನ ದಿನಗಳಲ್ಲಿ ಹಲ್ಲು ನೋವು ತುಂಬಾ ಜನರನ್ನು ಕಾಡುತ್ತಿದೆ. ಹಲ್ಲು ನೋವು ಬರಲು ಕಾರಣ ಶರೀರದಲ್ಲಿ ಕಬ್ಬಿಣದ ಅಂಶ ಕಡಿಮೆ ಇರುವುದು ಕಾರಣವಾಗುತ್ತದೆ ಹಾಗೆಯೇ ಕ್ಯಾಲ್ಸಿಯಂ ಅಂಶ ಕೂಡ ಸಾಕಷ್ಟು ಇರೋದಿಲ್ಲ ಹಲ್ಲು ನೋವು ಭೀಕರವಾಗಿ ಕಾಣಲು ಶುರು ಮಾಡಿದೆ.

ಚಿಕ್ಕ ವಯಸ್ಸಿನಿಂದಲೇ ಹಲ್ಲುಗಳನ್ನು ಶುಚಿಯಾಗಿ ಇಟ್ಟುಕೊಳ್ಳಬೇಕು. ಇಲ್ಲದಿದ್ದರೆ ಬಹಳ ಬೇಗ ದಂತಕ್ಷಯ ಉಂಟಾಗಿ ಹಲ್ಲುಗಳು ಬೇಗ ಉದುರಿ ಹೋಗುವುದು, ವಸಡು ಊದಿಕೊಳ್ಳುವುದು, ಹಲ್ಲು ನೋವು ನಿರಂತರವಾಗಿ ಕಾಣುವುದು ಅಂತಹ ನೋವನ್ನು ಬರದಂತೆ ತಡೆಗಟ್ಟಲು ಕೆಲವು ಉಪಾಯಗಳು ಇಲ್ಲಿದೆ ನೋಡಿ.

ಬಡವರ ಆಪಲ್ ಎಂದು ಕರೆಸಿಕೊಳ್ಳುವ ಸೀಬೆ ಹಣ್ಣನ್ನು ಸೇವನೆ ಮಾಡುವುದರಿಂದ ಹಲ್ಲುಗಳು ಗಟ್ಟಿಯಾಗುತ್ತದೆ. ಸೀಬೆ ಎಲೆಗಳನ್ನು ಕುಟ್ಟಿ ಪೇಸ್ಟ್ ಮಾಡಿ ಹಲ್ಲುಗಳಿಗೆ ಹಚ್ಚಿದರೆ ನೋವು ದೂರವಾಗುತ್ತದೆ. ಸೀಬೆ ಹೆಣ್ಣಿಗಿಂತ ಸೇಬಿನಲ್ಲಿ ಕಡಿಮೆ ಪೋಷಕಾಂಶಗಳು ಉಂಟು. ಹೀಗಾಗಿ ಸೀಬೆಹಣ್ಣು ದೊರಕುವ ಕಾಲದಲ್ಲಿ ಸೀಬೆ ಹಣ್ಣನ್ನು ತಿನ್ನಿ. ಹಣವಂತರು ಸೇಬನ್ನು ಸೇವಿಸಬಹುದು.

ಹಲ್ಲು ನೋವು ತೀವ್ರವಾಗಿ ಕಾಡಿದಾಗ ಮೆಣಸನ್ನು ಅರೆದು, ಪೇಸ್ಟನ್ನು ನೋವಿರುವ ಹಲ್ಲಿನ ಸುತ್ತಲೂ ಹಚ್ಚುವುದರಿಂದ ಕೆಟ್ಟ ನೀರು ಸೋರಿಹೋಗಿ ನೋವು ಕಡಿಮೆಯಾಗುತ್ತದೆ.

ಲವಂಗದ ಎಣ್ಣೆಯನ್ನು ಆಗಾಗ್ಗೆ ವಸಡುಗಳಿಗೆ ಹಚ್ಚುವುದರಿಂದ ಹಲ್ಲುನೋವು, ವಸಡಿನ ಬಾಧೆಯಿಂದ ದೂರವಾಗಬಹುದು. ಎಳೆ ದಾಳಿಂಬೆ ಚಿಗುರನ್ನು ಅಗಿದು ತಿನ್ನುವುದರಿಂದ ವಸಡಿನ ನೋವು ದೂರವಾಗುತ್ತದೆ, ಹಲ್ಲು ನೋವು ಬಂದಕಡೆ ಲವಂಗವನ್ನು ಕಚ್ಚಿ ಇಟ್ಟುಕೊಳ್ಳುವುದರಿಂದ ನೋವು ಶಮನವಾಗುವುದು

ದಂತಕ್ಷಯ ದೂರ ವಾಗಬೇಕಾದರೆ ಆಗಾಗ್ಗೆ ಜೀರಿಗೆಯನ್ನು ಅಗಿದು ತಿನ್ನಬೇಕು, ಹೀಗೆ ಮಾಡಿದರೆ ಹಲ್ಲುನೋವು ಯಾವುದೇ ಕಾರಣಕ್ಕೂ ಹತ್ರ ಬರಲ್ಲ ಕಂಡ್ರಿ.

LEAVE A REPLY

Please enter your comment!
Please enter your name here