ಒಂದು ವಾರದಲ್ಲಿ ನಿಮ್ಮ ಮುಖವನ್ನು ಬಿಳಿಯಾಗಿಸಲು ಒಂದೇ ಒಂದು ಬಾಳೆಹಣ್ಣು ಸಾಕು ಶಾಕಿಂಗ್ ಫಲಿತಾಂಶ ಕಾಣುತ್ತಿರಾ!

0
6275

ಸೌಂದರ್ಯ ಯಾರಿಗೆ ಬೇಡ ಹೇಳಿ, ತಾವು ಸುಂದರವಾಗಿ ಕಾಣಬೇಕು ಎಂಬುದು ಎಲ್ಲರ ಸಾಮಾನ್ಯ ಆಸೆ. ಇದಕ್ಕೆ ಮಾರುಕಟ್ಟೆಯಲ್ಲಿ ಸಿಗುವ ಬಗೆ ಬಗೆಯ ಸೌಂದರ್ಯ ವರ್ದಕಗಳನ್ನು ಹಚ್ಚಿಕೊಂಡು ಪ್ರಯೋಗಿಸುತ್ತಿರರುತ್ತಾರೆ ಆದರೆ ಎಷ್ಟೇ ಬಣ್ಣ ಹಚ್ಚಿಕೊಂಡು ಸುಂದರಾಗಿ ಕಾಣಿಸುವ ಪ್ರತಿಯೊಬ್ಬರಿಗೂ ಸಹಜ ಸೌಂದರ್ಯವೇ ನಿಜವಾದ ಸೌಂದರ್ಯ ಎಂಬ ನಿಜ ಗೊತ್ತಿದೆ. ನಿಜವಾದ ಸೌಂದರ್ಯವನ್ನು ನಿಸರ್ಗ ಮಾತ್ರ ನೀಡಬಲ್ಲದು. ಯಾವುದೇ ಕೃತಕ ಪ್ರಸಾಧನ ಆ ಹೊತ್ತಿಗೆ ಪ್ರಖರ ಸೌಂದರ್ಯ ನೀಡಬಲ್ಲದಾದರೂ ಕ್ರಮೇಣ ಇದರ ಪರಿಣಾಮ ವ್ಯತಿರಿಕ್ತವಾಗಬಹುದು, ಅಷ್ಟೆಲ್ಲ ಕರ್ಚು ಮಾಡುವ ಬದಲು ಮನೆಯಲ್ಲೇ ಸಿಗುವ ಬಾಳೆಹಣ್ಣಿನಿಂದ ನಿಮ್ಮ ಮುಖ ಕಾಂತಿಯುತವಾಗಿ, ಹೊಳೆಯುವಂತೆ ಮಾಡಿಕೊಳ್ಳಬಹುದು, ಹೇಗೆ ಅಂತೀರಾ ನೋಡಿ.

ಬಾಳೆಹಣ್ಣಿನ ಫೆಷಯಲ್ (Banana Facial) : ಯಾವುದೋ ಕೃತಕ ಫೆಷಯಲ್ ಮಾಡಿಸುವುದಕ್ಕಿಂತ ಈ ನೈಸರ್ಗಿಕವಾದ ಬಾಳೆಹಣ್ಣಿನ ಫೆಷಯಲ್ ನೀವೇ ಮಾಡಿಕೊಂಡರೆ ನಮ್ಮ ಮುಖ ಬಿಳಿಯಾಗಿ, ಕಲೆ ಕೂಡ ಮಾಯವಾಗಿ, ಕಾಂತಿಯುತವಾಗಿರುತ್ತದೆ. ಆದರೆ ಇದನ್ನು ಹೇಗೆ ಮಾಡಿಕೊಳ್ಳುವುದು ಎಂದು ಯೋಚಿಸುತ್ತಿದ್ದೀರಾ ? ಕೆಳಗೆ ತಿಲಿಸಿದ್ದಿವಿ ನೋಡಿ, ಈ ಮೂರು ವಿಧಾನವನ್ನು ಅನುಸರಿಸುವುದು ಬಹುಮುಖ್ಯ, ಮೊಟ್ಟ ಮೊದಲು ನಿಮ್ಮ ಮುಖವನ್ನು ಸ್ವಚ್ಚಗೊಳಿಸಿಕೊಳ್ಳುವುದು. (cleansing), ಮುಖವನ್ನು ತಿಕ್ಕುವುದು (Scrubbing), ಫೇಸ್ ಪ್ಯಾಕ್ (Face pack)

ಮೊದಲು ನಿಮ್ಮ ಮುಖವನ್ನು ಮೊದಲು ಸ್ವಚ್ಚಗೊಳಿಸಿಕೊಳ್ಳಬೇಕು, ಇದಕ್ಕೆ ಒಂದು ಟೇಬಲ್ ಸ್ಪೂನ್ ಬಾಳೆಹಣ್ಣಿನ, 1 ಚಮಚ ಹಾಗು ಹಾಗೆ ಒಂದು ಚಮಚ ನಿಂಬೆ ರಸ ತೆಗೆದುಕೊಂಡು ಈ ಮೂರು ಪದಾರ್ಥಗಳನ್ನು ಒಂದು ಬಟ್ಟಲಿಗೆ ಹಾಕಿ ಮಿಶ್ರಣ ಮಾಡಿ ನಂತರ ಹತ್ತಿಯ ಉಂಡೆ ಸಹಾಯದಿಂದ ನಿಮ್ಮ ಮುಖವನ್ನು ಸ್ವಚ್ಛ ಮಾಡಿಕೊಳ್ಳಿ. ಹಾಲು, ನಿಂಬೆ ಹಾಗು ಬಾಳೆಹಣ್ಣು ನೈಸರ್ಗಿಕವಾಗಿ ಚರ್ಮವನ್ನು ಸ್ವಚ್ಚಗೊಳಿಸುತ್ತದೆ.

ಸ್ಕ್ರಬ್ಬಿಂಗ್ (Scrubbing) : 1 ಚಮಚ ಸಕ್ಕರೆ, 1 ಚಮಚ ಕಡಲೆಹಿಟ್ಟು, 1 ಚಮಚ ಬಾಳೆಹಣ್ಣಿನ ಪೇಸ್ಟ್, 2 ಚಮಚ ಹಾಲು.

ಮೇಲೆ ತಿಳಿಸಿದ ಎಲ್ಲ ಪದಾರ್ಥಗಳನ್ನು ಒಂದು ಬಟ್ಟಲಿಗೆ ಹಾಕಿ ಮಿಶ್ರಣ ಮಾಡಿಕೊಂಡು, ಅದನ್ನು 5 ನಿಮಿಷಗಳ ಕಾಲ ನಿಮ್ಮ ಮುಖಕ್ಕೆ ಹಾಕಿಕೊಂಡು ವೃತ್ತಾಕಾರವಾಗಿ ಚನ್ನಾಗಿ ತಿಕ್ಕಿಕೊಳ್ಳಿ. ನಂತರ ನೀರಿನಿಂದ ತೊಳೆಯಿರಿ, ಬಾಳೆಹಣ್ಣಿನಲ್ಲಿ ವಿಟಮಿನ್ ಎ ಹಾಗು ವಿಟಮಿನ್ ಬಿ ಅಂಶವಿದ್ದು ಇದು ಚರ್ಮವನ್ನು ಕಾಂತಿಯುತವಾಗಿಸುತ್ತದೆ ಹಾಗೆಯೇ ಕಪ್ಪು ಕಲೆಗಳನ್ನು ನಿವಾರಣೆ ಮಾಡುತ್ತದೆ.

ಇನ್ನು ಹಾಲಿನಲ್ಲೂ ಕೂಡ ಮಿನರಲ್ಸ್, ಪ್ರೋಟಿನ್ ಅಂಶವಿದ್ದು ನಿಮ್ಮ ಚರ್ಮಕ್ಕೆ ಕಾಂತಿಯುತ ಹೊಳಪನ್ನು ಚರ್ಮಕ್ಕೆ ನೀಡುವಲ್ಲಿ ಸಹಕಾರಿಯಾಗುತ್ತದೆ, ಇನ್ನು ಸಕ್ಕರೆ ನೈಸರ್ಗಿಕವಾಗಿ ಸ್ಕ್ರಬ್ಬಿಂಗ್ ರೀತಿ ಕಾರ್ಯ ನಿರ್ವಹಿಸುತ್ತದೆ. ಕಡಲೆಹಿಟ್ಟು ಇದು ನಿಮ್ಮ ಚರ್ಮದ ಮೇಲಿನ ಟ್ಯಾನ್ ತಗೆಯಲು ಸಹಾಯ ಮಾಡುತ್ತದೆ ಹಾಗೆಯೇ ಮುಖದ ಮೇಲೆ ಕಲೆಗಳನ್ನ ನಿವಾರಿಸಿ ಹೊಳೆಯುವಂತೆ ಮಾಡುತ್ತದೆ.

ಫೇಸ್ ಪ್ಯಾಕ್ Face Pack : 2 ಚಮಚ ಹಾಲು, 2 ಚಮಚ ಬಾಳೆಹಣ್ಣಿನ ಪೇಸ್ಟ್, 1 ಚಮಚ ಜೇನು ತುಪ್ಪ, 1 ಚಮಚ ನಿಂಬೆರಸ, 2 ಚಮಚ ಹಾಲಿನ ಪುಡಿ.

ಈ ಎಲ್ಲ ಪದಾರ್ಥಗಳನ್ನು ಮಿಶ್ರಣ ಮಾಡಿ ನಿಮ್ಮ ಮುಖಕ್ಕೆ ಹಚ್ಚಿಕೊಳ್ಳಿ 15 ನಿಮಿಷ ಒಣಗಲು ಬಿಡಿ ನಂತರ ನೀರಿನಿಂದ ತೊಳೆದುಕೊಳ್ಳಿ. ನಂತರ ನೋಡಿ ಬಾಳೆಹಣ್ಣಿನಲ್ಲಿರುವ ಪೊತಾಷಿಯುಮ್ ಸಹಾಯದಿಂದ ನಿಮ್ಮ ಮುಖ ಹೊಳೆಯುತ್ತಿರುತ್ತದೆ ಹಾಗೆ ಕಪ್ಪು ಕಲೆ ನಿವಾರಿಸಿ ಬಿಳಿಯಾಗಿಸುತ್ತದೆ, ಆರೋಗ್ಯಕಾರಿಯೂಕೂಡ.

LEAVE A REPLY

Please enter your comment!
Please enter your name here