ಈ ಸಿನಿಮಾದಲ್ಲಿ ಎಷ್ಟು ಹಾಡುಗಳನ್ನು ಬಳಸಿದ್ದು ಎಂದು ತಿಳಿದರೆ ಅಚ್ಚರಿಪಡ್ತೀರಿ!

0
2071

ಸಿನಿಮಾ ಎಂದರೆ ಅದೊಂದು ಮನರಂಜನೆಯ ರಸದೂತಣದಂತಿರಬೇಕು. ಫೈಟ್, ಡಾನ್ಸ್, ಹಾಡುಗಳು, ನಾಯನಟನ ಸಂಭಾಷಣೆ, ನಾಯಕ ಗೆಲ್ಲುವಲ್ಲಿ ವಿಲನ್’ಗೆ ಸವಾಲು ಹಾಕುವುದು ಇವೆಲ್ಲವೂ ಒಂದು ಸಿನಿಮಾದಲ್ಲಿ ಇರಬಹುದಾದ ಸಾಮನ್ಯ ಪರಿಕರಗಳು.

ಸಂಗೀತ ಇಲ್ಲದ ಸಿನಿಮಾವೇ ಇಲ್ಲ. ಹಾಡುಗಳು ಒಂದು ಸಿನಿಮಾವನ್ನು ಇನ್ನಷ್ಟು ಎತ್ತರಕ್ಕೆ ಒಯ್ಯುತ್ತವೆ. ಹಾಡುಗಳಿಂದಲೇ ಸಿನಿಮಾ ಹಿಟ್ ಆಗಿದ್ದಿದೆ. ಮೊದಲು ಹಾಡುಗಳನ್ನು ಬಿಡುಗಡೆ ಮಾಡಲು ಕಾರಣ ಚಿತ್ರದ ಪ್ರಚಾರಕ್ಕೆ ಜನರನ್ನು ಸಿನಿಮಾ ಮಂದಿರಕ್ಕೆ ಸೆಳೆಯುವ ಉದ್ದೇಶ. ಭಾರತೀಯ ಸಿನಿಮಾ ಮಾತ್ರ ಹಾಡುಗಳನ್ನು ಹೊಂದಿದೆ. ಇಂಗ್ಲಿಷ್, ಇತರ ಭಾಷೆಗಳಲ್ಲಿ ಹಾಡುಗಳು ಇದ್ದರೂ ಅವು ಆಲ್ಬಂ ಆಗಿ ಬೇರೆ ಬಿಡುಗಡೆ ಆಗುತ್ತವೆ. ಸಿನಿಮಾದಲ್ಲಿ ಹಾಡುಗಳು ಬರುವುದು ಕಡಿಮೆಯೇ.

ಹಿಂದಿ, ತೆಲುಗು, ತಮಿಳು, ಕನ್ನಡ, ಮಲಯಾಳಂ ಭಾಷೆಯ ಚಿತ್ರಗಳು ಹಾಡುಗಳನ್ನು ಜನರು ಭಾಷೆ ಬರದಿದ್ದರೂ ಗುನುಗುತ್ತಾರೆ. ಸಂಗೀತ ನಮ್ಮನ್ನು ಮೈಮರೆಸುವ ಶಕ್ತಿ ಹೊಂದಿದೆ. ಕನ್ನಡದಲ್ಲಿ ಹಂಸಲೇಖ, ಜೆ.ಕೆ. ವೆಂಕಟೇಶ್, ರಾಜನ್- ನಾಗೆಂದ್ರ ಮುಂತಾದ ಸಂಗೀತ ನಿರ್ದೇಶಕರಿಂದ ಈಗಿನ ಅರ್ಜುನ್ ಜನ್ಯ, ಹರಿಕೃಷ್ಣ ತನಕ ಅತ್ಯುತ್ತಮ ಹಾಡುಗಳನ್ನು ಕೊಟ್ಟಿದ್ದಾರೆ.

ಒಂದು ಸಿನಿಮಾದಲ್ಲಿ ಎಷ್ಟು ಹಾಡುಗಳು ಇರುತ್ತವೆ ? ಈಗ ಆದರೆ ಒಂದರಿಂದ 5 ಹಾಡುಗಳು. ಒಂದೊಂದು ಸಿನಿಮಾದಲ್ಲಿ ಹಾಡುಗಳು ಇರುವುದೇ ಇಲ್ಲ. ಏಕೆಂದರೆ ಕತೆಯ ಓಟಕ್ಕೆ ಹಾಡುಗಳು ಬ್ರೇಕ್ ಹಾಕುತ್ತವೆ ಎಂಬುದೂ ಕಾರಣವಂತೆ. ಆದರೆ ಈಗ ಅವು ಕೇಳುವುದಕ್ಕೆ ಆಗುವುದಿಲ್ಲ ಎನ್ನುವುದು ಮಾತ್ರ ಸತ್ಯ.

ಆದರೆ ಹಿಂದಿನ ಕಾಲದ ಸಿನಿಮಾದಲ್ಲಿ ಹಾಡುಗಳು ಸಿನಿಮಾದ ಕತೆಗೆ ಪುರಕವಾಗಿದ್ದವು. ಹಾಡುಗಳಿಗೆ ಹೆಚ್ಚು ಮಹತ್ವ ಕೊಡುತ್ತಿದ್ದರು.ಒಂದು ಸಿನಿಮಾದಲ್ಲಿ 10, 12 , 15 ಹಾಡುಗಳು ಇರುತ್ತಿತ್ತು . ರವಿಚಂದ್ರನ್ ನಟಿಸಿ ನಿರ್ದೇಶಿಸಿದ ಸಂಗೀತಮಯ ಚಿತ್ರ ಪ್ರೇಮ ಲೋಕದಲ್ಲಿ 12 ಹಾಡುಗಳು ಇದ್ದವು. ವಿಶೇಷ ಅಂದರೆ ಅವೆಲ್ಲವೂ ಸುಪರ್ ಹಿಟ್ ಆಗಿದ್ದವು.

ಆದರೆ ಹಿಂದಿಯ ಈ ಸಿನಿಮಾದಲ್ಲಿ ಎಷ್ಟು ಹಾಡುಗಳಿದ್ದವು ಅಂದ್ರೆ ಆಶ್ಚರ್ಯ ಪಡ್ತೀರಿ! 1932 ರಲ್ಲಿ ತೆರೆ ಕಂಡ ಈ ಸಿನಿಮಾದ ಹೆಸರು ಇಂದ್ರಸಭಾ. ಈ ಚಿತ್ರ ಮುರೂವರೆ ಗಂಟೆ ಇತ್ತು. ಇದರಲ್ಲಿ ಬರೋಬ್ಬರಿ 71 ಹಾಡುಗಳು ಇದ್ದವು. ಅವು ಕತೆಗೆ ಪೂರಕವಾಗಿದ್ದು ಜನರು ಇದನ್ನು ಇಷ್ಟಪಟ್ಟಿದ್ದರು. ಸಯ್ಯದೆ ಅಗ ಹಸನ್ ಅಮನತ್ ಅವರ ಕತೆ ಆಧಾರಿತ ಈ ಚಿತ್ರವನ್ನು ಜೆಜೆ ಮದನ್ ನಿರ್ದೇಶಿಸಿದ್ದರು. ತಾರಾಗಣದಲ್ಲಿ ಜೆಹನಾತ ಕಜ್ಜನ್, ಮಾಸ್ಟರ್ ನಿಶನ್, ಅಬ್ದುಲ್ ರೆಹಮಾನ್ ಕಬುಲಿ ಇದ್ದರು. ಈ ಚಿತ್ರ ಐತಿಹಾಸಿಕ ಕತೆ ಆಧಾರಿತವಾಗಿದೆ

LEAVE A REPLY

Please enter your comment!
Please enter your name here