ಯಾವುದೇ ಕಾರಣಕ್ಕೂ ಈ 10 ವಸ್ತುಗಳನ್ನು ಬೇರೆಯವರೊಂದಿಗೆ ಹಂಚಿಕೊಳ್ಳಬೇಡಿ

0
163

ನಾವು ಪ್ರತಿ ನಿತ್ಯ ಕೆಲವು ವಸ್ತುಗಳನ್ನು ಬಳಸುತ್ತೇವೆ.ಅವು ನಮಗೆ ಅನಿವಾರ್ಯವೂ ಹೌದು.‌ಅಂತಹ ವಸ್ತುಗಳನ್ನು ನಾವು ಮಾತ್ರ ಬಳಸಿದರೇ ಉತ್ತಮ .ಇಲ್ಲದಿದ್ದರೆ ನಮಗೆ ಹಾನಿಯಾಗುತ್ತದೆ. ಅವು ಯಾವುವು ತಿಳಿಯೋಣ ಬನ್ನಿ.

ಬ್ರಷ್- ಟೂತ್ ಬ್ರಷ್ ನ್ನು ಎಲ್ಲರೂ ಪ್ರತಿ ದಿನ ಬೆಳಿಗ್ಗೆ ಬಳಸುತ್ತೇವೆ. ಹಲ್ಲುಗಳ ಶುಚಿತ್ವಕ್ಕೆ ಬ್ರಷ್’ನಿಂದ ಉಜ್ಜಿದರೆ ಅವುಗಳಲ್ಲಿನ ಕೀಟಾಣುಗಳು ಹೋಗುತ್ತವೆ. ನಮ್ಮ ದೇಹದ ಬೇರೆ ಭಾಗಗಳಿಗಿಂತ ಹಲ್ಲುಗಳಲ್ಲಿ ಕೀಟಾಣುಗಳು ಹೆಚ್ಚು ಇರುತ್ತವೆ. ಆದುದರಿಂದ ಬ್ರಷನ್ನು ನಾವು ಬೇರೆಯವರೊಂದಿಗೆ ಹಂಚಿಕೊಳ್ಳಬಾರದು.

ಟೂತ್ ಪೇಸ್ಟ್ – ಟೂತ್ ಪೇಸ್ಟನ್ನು ನಾವು ಒಂದು ಬ್ರಷ್’ಗೆ ಹಾಕುವಾಗ ಅದು ತಾಕುತ್ತದೆ. ಬ್ರಷಿನಲ್ಲಿರುವ ಕೀಟಾಣುಗಳು ಪೇಸ್ಟಿಗೆ ತಾಗುವ ಸಂಭವ ಇರುತ್ತದೆ. ಆದುದರಿಂದ ಪೇಸ್ಟನ್ನ ತಾಗಿಸದೇ ಬಳಸಬೇಕು. ಒಂದು ವೇಳೆ ತಾಗಿಸುವ ಅಭ್ಯಾಸ ಇದ್ದರೆ ಅದನ್ನು ಬೇರೆಯವರೊಂದಿಗೆ ಹಂಚಿಕೊಳ್ಳಬಾರದು

ಟವೆಲ್- ನಾವು ಸ್ನಾನ ಮಾಡುವಾಗ ಟವೆಲ್ ಬಳಸುತ್ತೇವೆ. ಅದರಿಂದ ನಮ್ಮ ಮೈಯನ್ನು ಒರೆಸಿಕೊಳ್ಳುತ್ತೇವೆ. ಅದರಿಂದ ನಮ್ಮ ದೇಹದ ಕೀಟಾಣುಗಳು ಹಾಗೂ ನಮ್ಮ ಬೆವರು ಟವಲ್’ಗೆ ಸೇರಿಕೊಳ್ಳುತ್ತದೆ .ಇದನ್ನು ಬೇರೆಯವರಿಗೆ ಕೊಟ್ಟರೆ ಅವರಿಗೂ ಖಾಯಿಲೆ ಬರುತ್ತದೆ.

ಸೋಪು- ಸೋಪನ್ನು ನಮ್ಮ ಮೈ ತೊಳೆಯಲು ಬಳಸುತ್ತೇವೆ. ಇದನ್ನು ಉಪಯೋಗಿಸಿ ಇನ್ನೊಬ್ಬರಿಗೆ ಕೊಡಬಾರದು.ಕೊಟ್ಟರೆ ನಮ್ಮ ದೇಹದ ಕೀಟಾಣುಗಳು ಅವರ ದೇಹಕ್ಕೆ ಹೋಗುವ ಸಂಭವ ಇರುತ್ತದೆ.

ಕಿವಿಯೋಲೆ – ಕಿವಿಯೋಲೆಯನ್ನು ಕಂಡರೆ ಮಹಿಳೆಯರಿಗೆ ಆಸೆ ಜಾಸ್ತಿ ‌. ಕಿವಿಯೋಲೆಯನ್ನು ಬೇರೆಯವರಿಗೆ ಕೊಡಬಾರದು. ಏಕೆಂದರೆ ಚುಚ್ಚಿದ ಕಿವಿಯಿಂದ ಕಿವಿಯೋಲೆಯನ್ನು ತೆಗೆದು ಇನ್ನೊಬ್ಬರಿಗೆ ಕೊಟ್ಟಾಗ ರೋಗಾಣುಗಳು ಅವರಿಗೂ ಹರಡುವ ಸಂಭವ ಇರುತ್ತದೆ.

ಚಪ್ಪಲಿ- ಚಪ್ಪಲಿಯನ್ನು ಎಲ್ಲರು ಹಾಕಿಕೊಳ್ಳುತ್ತಾರೆ. ಚಪ್ಪಲಿಯನ್ನು ಬಳಸಿ ಇನ್ನೊಬ್ಬರಿಗೆ ಕೊಡಬಾರದು. ನಮ್ಮ ಪಾದದ ಬೆವರು ಬೇರೆಯವರ ಪಾದಕ್ಕೆ ತಗುಲುತ್ತದೆ.ಇದರಿಂದ ರೋಗಾಣುಗಳು ಬಹುಬೇಗನೆ ಹರಡುತ್ತದೆ.

ರೇಜರ್- ಟ್ರಿಮ್ಮರ್ – ಶೇವಿಂಗ್ ಮಾಡುವಾಗ ಚರ್ಮಕ್ಕೆ ತಾಗಿ ರಕ್ತ ಸೋರಿ ಬ್ಲೇಡ್’ಗೆ ಅಂಟಿಕೊಳ್ಳುತ್ತದೆ. ಆ ಬ್ಲೇಡ್ ಅಥವಾ ಟ್ರಿಮ್ಮರನ್ನ ಇನ್ನೊಬ್ಬರು ಬಳಸಿದಾಗ ಖಾಯಿಲೆ ಬರಬಹುದು.

ಇಯರ್ ಬಡ್ – ಹಾಡುಗಳನ್ನು ಇಯರ್ ಬಡ್ ಬಳಸಿ ಕೇಳುತ್ತಾರೆ. ಇಯರ್ ಬಡ್ ಗಳನ್ನು ಕಿವಿಯೊಳಗೆ ಹಾಕಿದಾಗ ಸಾವಿರಾರು ಕೀಟಾಣುಗಳು ಉತ್ಪಾದನೆ ಆಗುತ್ತದೆ. ಹಾಗೂ ಇಯರ್ ಬಡ್ ‘ನಿಂದ ಗುಗ್ಗೆಗಳು ಅದಕ್ಕೆ ಅಂಟಿಕೊಳ್ಳುತ್ತದೆ.ಅದನ್ನು ಇನ್ನೊಬ್ಬರು ಬಳಸಿದಾಗ ಕಾಯಿಲೆ ಬರಬಹುದು.

ಲಿಪ್ ಸ್ಟಿಕ್ – ನಮ್ಮ ತುಟಿಯ ನಾಳಕ್ಕೆ ಲಿಪ್ ಸ್ಟಿಕ್ ಹಚ್ಚಿದಾಗ ಅದರ ಮೂಲಕ ಲಿಪ್ ಸ್ಟಿಕ್’ಗೆ ಕೀಟಾಣುಗಳು ಬರುವ ಸಂಭವ ಇರುತ್ತದೆ.

LEAVE A REPLY

Please enter your comment!
Please enter your name here