ಮದುಮೇಹ, ರಕ್ತ ಶುದ್ದಿ ಹಾಗು ಇನ್ನು ಅನೇಕ ಸಮಸ್ಯೆಗಳಿಗೆ ಅರಿಶಿನವನ್ನು ಈ ರೀತಿ ಬಳಸಿ..!!

0
203

ಮುತ್ತೈದೆಯರಿಗೆ ಅರಿಶಿನ ಸೌಭಾಗ್ಯವತಿಯರನ್ನುವುದುಂಟು ಸೌಂದರ್ಯ ಮತ್ತು ಆರೋಗ್ಯ ರಕ್ಷಣೆಗಳೆರಡು ಅರಿಶಿನ ಮಹಿಳೆಯರಿಗೆ ಸಹಕಾರಿ, ವೇದಕಾಲದಿಂದ ಅತ್ಯಾಧುನಿಕ ಯುಗದವರೆಗೂ ಇದು ಸ್ತ್ರೀಯರ ಮೆಚ್ಚುಗೆಗೆ ಪಾತ್ರವಾಗಿದೆ ಸಂಸ್ಕೃತದಲ್ಲಿ ಅರಿಶಿನಕ್ಕೆ ಹಲವು ಹೆಸರುಗಳಿವೆ ಪ್ರತಿಯೊಂದು ಒಂದು ಮಹತ್ವದ ಗುಣಗಳ ಪ್ರತೀಕ, ಆರಿದ್ರ ಎಂದರೆ ಶರೀರದ ಬಣ್ಣವನ್ನು ಸಮರ್ಪಕವಾಗಿಸುವುದು ಎಂದರ್ಥ, ಕಾಂಚನೀ ಎಂದರೆ ಸ್ವರ್ಣಕ್ಕೆ ಸಮಾನವಾಗಿ ಬಣ್ಣವನ್ನು ಉಂಟು ಮಾಡುವುದು ಎಂದರ್ಥ ಇದು ವರವರ್ಣಿನಿ, ಗೌರಿ, ನಿಶಾ ಹಟವಿಲಾಸಿನಿ ಎಂಬ ಪ್ರಶಂಸೆಗೆ ಪಾತ್ರವಾಗಿದೆ, ತುಳು, ತಮಿಳು ಗಳಲ್ಲಿ ಮಂಜಲ್ ಎಂದೂ, ತೆಲುಗಿನಲ್ಲಿ ಪಸುಪು ಎಂದು ಮಲಯಾಳದಲ್ಲಿ ಹಾಲದ್ ಎಂದೂ ಇದನ್ನು ಕರೆಯುತ್ತಾರೆ ಅರಿಶಿಣದ ಬೇರನ್ನು ಚಿಕಿತ್ಸೆಗಾಗಿ ಉಪಯೋಗಿಸುತ್ತಾರೆ.

ವರ್ಣಕಾರಕ : ಅರಿಶಿಣ ಮುಖ್ಯವಾಗಿ ವರ್ಣಕಾರಕ ಇದರ ಲೇಪನದಿಂದ ದೇಹ ಸುಂದರವಾದ ಬಣ್ಣವನ್ನು ಪಡೆದುಕೊಳ್ಳುತ್ತದೆ ಹಣ್ಣುಗಳು ಹಾಗೂ ಗಾಯಗಳ ಮೇಲೆ ಇದರ ಲೇಪ ಮಾಡುವುದರಿಂದ ಅವು ಬೇಗನೆ ಮಾಯುತ್ತವೆ ಕೆಂಗಣ್ಣಿನಲ್ಲಿ ಇದನ್ನು ಹತ್ತು ಪಾಲು ನೀರಿನೊಂದಿಗೆ ಕದಡಿ ಕಣ್ಣನ್ನು ತೊಳೆಯುವುದರಿಂದ ಒಳ್ಳೆಯದು.

ಅರಿಶಿನಕ್ಕೆ ಅಡಿಗೆಯಲ್ಲಿ ಮಹತ್ವದ ಸ್ಥಾನವಿದೆ ಇದು ರುಚಿವರ್ಧಕ, ಹೊಟ್ಟೆಯುಬ್ಬರ, ಅರಿಶಿನಮಂಡಿಗೆ, ಜಾಂಡಿಸ್, ರಕ್ತ ಕೆಟ್ಟು ಉಂಟಾಗುವ ರೋಗಗಳು, ತುರಿಕೆ, ಅಲರ್ಜಿ, ರಕ್ತಹೀನತೆಗಳಿಗೂ ಔಷಧಿ ಮಧುಮೇಹ ರೋಗದಲ್ಲಿ ಇದರ ರಸ ಅಥವಾ ಚೂರ್ಣವನ್ನು ಸೇವಿಸಬೇಕು.

ಬೆಂಕಿಯ ಕೆಂಡಗಳ ಮೇಲೆ ಅರಿಶಿಣದ ಪುಡಿ ಉದುರಿಸಿದರೆ ಹೊಗೆಯೇಳುತ್ತದೆ ಇದನ್ನು ಅಘರಾಣಿಸಿದರೆ ಚಿಕ್ಕಳಿಗೆ, ಉಬ್ಬಸ ಮತ್ತು ನೆಗಡಿ ಕಡಿಮೆಯಾಗುತ್ತದೆ ಇದರಿಂದ ಮೂರ್ಛೆ ಹೋದವನು ಎಚ್ಚರಗೊಳ್ಳುತ್ತಾನೆ, ಚೇಳು ಕಚ್ಚಿದಾಗ ಉಂಟಾಗುವ ಅತೀವ ವೇದನೆಯು ಶಾಂತವಾಗುತ್ತದೆ.

ಉತ್ಸಾಹದಾಯಕ : ಪ್ರಸವದ ನಂತರ ಅರಿಶಿಣವನ್ನು ನಿಯಮಿತವಾಗಿ ಸೇವಿಸಿದರೆ ಗರ್ಭಾಶಯ ಶುದ್ಧವಾಗುತ್ತದೆ, ಮೊಲೆಹಾಲು ದೋಷತಗೊಂಡೆರೆ ಸಮರ್ಪಕವಾಗುತ್ತದೆ, ಹಲವಾರು ಸ್ತನ್ಯ ವಿಕಾರಗಳಿಗೆ ಅರಿಶಿಣ ಮದ್ದು ತುಂಬ ಸಮಯದಿಂದ ಬರುವ ಜ್ವರಕ್ಕೆ ಔಷಧಿಯಾಗುತ್ತದೆ, ಚಿತ್ರಣ ದೌರ್ಬಲ್ಯಗಳನ್ನು ನಿವಾರಿಸಿ ಹೆಂಗಸರಿಗೆ ಉತ್ಸಾಹ ತಂದು ಕೊಡುವುದರಲ್ಲಿ ಅರಿಶಿನ ಅದ್ವಿತೀಯವಾದದ್ದು.

ಅರಿಶಿಣದ ಸೇವನೆಯಿಂದ ಬಾಯಿಯ ಕ್ಯಾನ್ಸರನ್ನು ತಡೆಗಟ್ಟಬಹುದು ಹೈದರಾಬಾದಿನ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ನ್ಯೂಟ್ರಿಶನ್ ನ ವಿಜ್ಞಾನಿಗಳು ಘೋಷಿಸಿದ್ದಾರೆ, ಜೀವಕೋಶಗಳಲಾಗುವ ಏರುಪೇರು ಡಿಎನ್ಎ ಗಳಿಗಾಗುವ ಆಘಾತಗಳು ಮತ್ತು ಅವುಗಳ ರೋಗಗಳನ್ನು ಅರಿಶಿನದ ಸೇವನೆಯಿಂದ ಗುಣ ಪಡಿಸುವುದು ಎಂದು ಸಂಶೋಧಕರು ಕಂಡುಕೊಂಡಿದ್ದಾರೆ.

ಹಲ್ಲಿನ ರೋಗಗಳು ಅರಿಶಿನಕ್ಕೆ ಚಿಕಿತ್ಸಾತ್ಮಕ ಮಹತ್ವವಿದೆ, ಪಣಾಜೆ ಪಂಡಿತರೆಂದೇ ಜನಪ್ರಿಯವಾದ ಶಂಕರನಾರಾಯಣ ಭಟ್ಟರ ಸರಳ ಚಿಕಿತ್ಸಾ ರಹಸ್ಯ ಒಂದು ಹೀಗಿದೆ, ಅರಿಶಿಣದ ಪುಡಿಯನ್ನು ಹಾಕಿ ಎಣ್ಣೆಯಲ್ಲಿ ನೆನಪಿದೆ ಚಿಂಡಿ ಬಟ್ಟೆಯನ್ನು ಬತ್ತಿ ಮಾಡಿ ಹೊತ್ತಿಸಿ ಅದರಿಂದ ಬರುವ ಹೊಗೆಯನ್ನು ಸೆಳೆತವಿರುವ ಹಲ್ಲಿಗೆ ಒಡ್ಡಿದರೆ ಕೀವು ಮತ್ತು ನೀರು ಸೋರಿ ಹೋಗಿ ಅಲ್ಲಿನ ಸೆಳೆತ ಕೂಡಲೇ ಗುಣವಾಗುತ್ತದೆ.

ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿ ಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.

LEAVE A REPLY

Please enter your comment!
Please enter your name here