ಈ‌ ದಿನದ ಶುಭ ಶುಕ್ರವಾರದಂದು ತಪ್ಪದೆ ಈ ಕೆಲಸ ಮಾಡಿ ಹಾಗೂ ಲಕ್ಷ್ಮೀ ಒಲಿಸಿಕೊಳ್ಳಿ !

0
146

ಶುಕ್ರವಾರ ಹಿಂದೂಗಳಿಗೆ ಬಹಳ ಶುಭದಿನ.ಅಮ್ಮನವರ ಶುಭ ವಾರವಾದ ಇಂದು ಹೆಣ್ಣು ‌ಮಕ್ಕಳು ದೇಬಿಯೆ ಪೂಜೆ ಮಾಡುವ ಸಂಪ್ರದಾಯ ಇದೆ.ಪವಿತ್ರ ಶುಕ್ರವಾರ ಹಿಂದೂಗಳ ಪವಿತ್ರ ದೇವತೆಯಾದ ಲಕ್ಷ್ಮೀದೇವಿಗೆ ತುಂಬಾ ಇಷ್ಟವಾದ ದಿನ.ಈ ದಿನ ಹೆಣ್ಣು ಮಕ್ಕಳು ಯಾವ ಕೆಲಸ ಮಾಡಿದರೆ ಒಳ್ಳೆಯದು , ಯಾವ ಕೆಲಸ ಮಾಡಬಾರದು ಎಂದು ಹೇಳುತ್ತೇವೆ ಓದಿ.

ಯಾವ ಕೆಲಸ ಮಾಡಬಾರದು ಎಂದು ಮೊದಲಿಗೆ ನೋಡೋಣ. ಶುಕ್ರವಾರದ ದಿನ ಮಹಿಳೆಯರು ಕಪ್ಪು ಬಣ್ಣದ ವಸ್ತ್ರವನ್ನು ಧರಿಸಬಾರದು. ಕಪ್ಪು ಬಣ್ಣದ ಬೆಳೆಗಳನ್ನು ಧರಿಸುವುದು ಒಳ್ಳೆಯದಲ್ಲ. ಹಾಗೆಯೆ ಕಪ್ಪು ಬಣ್ಣದ ಕುಂಕುಮವನ್ನು ಧಾರಣೆ ಮಾಡುವುದು ಒಳ್ಳೆಯದಲ್ಲ.

ಯಾರಾದರೂ ಮುತ್ತೈದೆ ಮಹಿಳೆಯರು ಮನೆಗೆ ಬಂದರೆ ಅವರಿಗೆ ಕುಂಕುಮ ಧಾರಣೆ ಮಾಡದೆ ಕಳಿಸಬಾರದು. ಹಾಗಯೇ ಶುಕ್ರವಾರದ ದಿನ ಮಹಿಳೆಯರು ಕುಂಕುಮ ಧರಿಸದೇ ಬರೀ ಹಣೆಯಲ್ಲಿ ಇರಬಾರದು. ಹಾಗೆಯೇ ಅಶ್ವತ್ತ ಮರವನ್ನು ಮುಟ್ಟಬಾರದು . ಹಾಗೂ ಅದರ ಎಲೆಗಳನ್ನು ಕೀಳಬಾರದು. ಈ ದಿನ ಮಂಗಳಕರ ವಸ್ತುಗಳಾದ ಕುಂಕುಮ , ಕಪ್ಪು ಬಳೆ ಇವುಗಳನ್ನು ಖರೀದಿ ಮಾಡಬಾರದು. ಶುಕ್ರವಾರದ ದಿನ ಪುರುಷರು ತಲೆ ಸ್ನಾನವನ್ನು ಮಾಡಬಾರದು.

ಯಾವ ಕೆಲಸ ಮಾಡಿದರೆ ಒಳ್ಳೆಯದು ಎಂದು ನೋಡೋಣ ಬನ್ನಿ . ಶುಕ್ರವಾರದ ದಿನ ಮಹಿಳೆಯರು ಅರಿಸಿನ ಲೇಪನ ಮಾಡಿಕೊಂಡು ತಲೆ ಸ್ನಾನ ಮಾಡುವುದು ಶ್ರೇಯಸ್ಕರ. ಈ ದಿನ ಲಕ್ಷ್ಮಿಗೆ ಇಷ್ಟವಾದ ಬಣ್ಣವಾದ ಹಸಿರು , ಕೆಂಪು , ಅರಿಸಿನ ಬಣ್ಣದ ವಸ್ತ್ರವನ್ನು ಧರಿಸುವುದು ಒಳ್ಳೆಯದು. ಈ ದಿನ ತುಳಸಿ ಗಿಡದ ಪೂಜೆ ಮಾಡಬೇಕು. ತುಳಸಿ ಕಟ್ಟೆಯನ್ನು ಮೂರು ಸುತ್ತು ಸುತ್ತು ಹಾಕಬೇಕು. ಈ ದಿನ ಸಂಜೆಯ ವೇಳೆ ಎಳ್ಳೆಣ್ಣೆ ದೀಪವನ್ನು ಹಚ್ಚಬೇಕು. ಈಗಿನ ಬಿಜಿ ಕಾಲದಲ್ಲಿ ಪೂಜೆ ಮಾಡಲು ಸಮಯ ಇಲ್ಲವೆಂದರೆ ಕನಿಷ್ಠ ಪಕ್ಷ ತುಳಸಿಗೆ ನೀರನ್ನಾದರೂ ಹಾಕಿ ಕೈ ಮುಗಿಯಬೇಕು.

ಹತ್ತಿರದ ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡಬೇಕು. ಪೂಜೆ ಮಾಡುವ ವೇಳೆ ಗಾಯತ್ರಿ ಮಂತ್ರವನ್ನು 21 ಬಾರಿ ಮನದಲ್ಲಿ ಪಠಿಸಬೇಕು.ಇದರಿಂದ ನೀವು ಬಯಸಿದ ಕಾರ್ಯ ಅತೀ ಶೀಘ್ರದಲ್ಲೇ ನೆರವೇರುತ್ತದೆ. ಕೊನೆಯದಾಗಿ ದೇವರನ್ನು ಹೇಗೆ ಭಕ್ತಿಯಿಂದ ಪೂಜಿಸುತ್ತೀರೋ ಹಾಗೆಯೇ ತಂದೆ – ತಾಯಿಯರಿಗೆ ಗೌರವ ಕೊಡಬೇಕು.ತಂದೆ ತಾಯಿಯರು ಮೊದಲ ದೇವರು. ಅವರಿಗೆ ಸಂತೋಷವಾದರೇ ದೇವರೇ ನಮಗೆ ಒಲಿಯುವನು.

LEAVE A REPLY

Please enter your comment!
Please enter your name here