ಇಂದು ಹುನಮ ಜಯಂತಿ ! ಯಾವ-ಯಾವ ರಾಶಿಯವರು‌ ಏನೆಲ್ಲಾ ಮಾಡಬೇಕು ನೋಡಿ !

0
3568

ಹನುಮ ಅಥವಾ ಹನುಮಂತ ಎಲ್ಲರಿಗೂ ಪ್ರಿಯವಾದ ದೇವರು. ಇಂದು ವಿಶೇಷ ಏನೆಂದರೆ ಇವತ್ತು ಹನುಮ ಜಯಂತಿ. ಅಂದರೆ ಹನುಮಂತನು ಹುಟ್ಟಿದ ದಿನ ಎಂದರ್ಥ. ಆಂಜನೇಯನ ಹುಟ್ಟಿನ ಬಗ್ಗೆ ಅನೇಕ ಕಥೆಗಳಿವೆ. ಹನುಮಂತನ ತಾಯಿ ಶಿವ-ಪಾರ್ವತಿಯರ ತಪಸ್ಸು ಮಾಡುತ್ತಿರುವಾಗ. ತಪಸ್ಸಿನ ಅಂತರಾರ್ಥವನ್ನು ತಿಳಿದು ಪಾರ್ವತಿಯ ಹೊಟ್ಟೆ ಭಾಗದ ಹೊಕ್ಕಳು ಬಳ್ಳಿಯನ್ನು ಹನುಮಂತನ ತಾಯಿಗೆ ನೀಡಿದ್ದರು. ಇದನ್ನು ತಿಳಿದ ಹನುಮಂತನ ತಾಯಿ ಅಂಜನೆಯು ಆ ಹೊಕ್ಕುಳ ಬಳ್ಳಿಯನ್ನು ಭಕ್ತಿಪೂರ್ವಕವಾಗಿ ತನ್ನ ಹೊಟ್ಟೆ ಭಾಗಕ್ಕೆ ಸುತ್ತಿಕೊಂಡು ಕಠಿಣವಾದ ತಪಸ್ಸು ಮಾಡಿದಳು. ಶಿವ ಹಾಗೂ ದೇವಿ ಅನುಗ್ರಹದಿಂದ ಅಂಜನೆಗೆ ಮಗುವಾಯಿತು ಎಂಬ ಪ್ರತೀತಿ ಇದೆ. ಹುಟ್ಟಿದ ಮಗುವಿನ ಹೆಸರು ಆಂಜನೇಯ ಅಥವಾ ಹನುಮಂತ.

ಪ್ರತಿವರ್ಷ ಹನುಮಾನ್ ಜಯಂತಿ ಮಾರ್ಗಶಿರ ಮಾಸದ ಶುಕ್ಲಪಕ್ಷದ ತ್ರಯೋದಶಿ ದಿನದಂದು ಬರುತ್ತದೆ. ಹನುಮಾನ್ ವ್ರತ ಎಂದರೆ ಆಂಜನೇಯನನ್ನು ಪೂಜಿಸುವುದು. ಕೆಲವು ಕಡೆ ನಲವತ್ತೇಳು ದಿನಗಳ ಕಾಲ ಹನುಮನ್ ದಿಕ್ಷೆ ತೆಗೆದುಕೊಂಡು 48ನೇ ದಿನ ದೀಕ್ಷೆ ಕೊನೆ ಗೊಳಿಸಲಾಗುತ್ತದೆ. ಇನ್ನು ಉತ್ತರ ಕರ್ನಾಟಕದಲ್ಲಿ ಹನುಮ ಜಯಂತಿಯನ್ನು ಚೈತ್ರ ಮಾಸದ ಹುಣ್ಣಿಮೆ ದಿನ ಆಚರಿಸಿದರೆ, ದಕ್ಷಿಣ ಕರ್ನಾಟಕ ಭಾಗದಲ್ಲಿ ಇಂದು ಆಚರಿಸುತ್ತಾರೆ.

ಇಂದು ನೀವು ಹನುಮಂತನ ಕೃಪೆ ಪಡೆದುಕೊಳ್ಳಲು ಕೆಳಗಿನ ನಿಯಮ ಪಾಲಿಸಿ.ಇಂದು ತಪ್ಪದೆ ಹನುಮಂತನ ದೇವಸ್ಥಾನಕ್ಕೆ ಪೂಜೆ ಸಲ್ಲಿಸಿ. ಎಳ್ಳು ಎಣ್ಣೆಯನ್ನು ಒಂದು ಪಾತ್ರೆಯಲ್ಲಿ ಹಾಕಿ ಅದರಲ್ಲಿ ನಿಮ್ಮ ಮುಖವನ್ನು ನೋಡಿ. ದೇವರ ಮುಂದೆ ಇರುವ ದೀಪದ ಮುಂದೆ ನಿಮ್ಮ ಮನಸ್ಸಿನ ಆಸೆ ಆಕಾಂಕ್ಷೆಗಳನ್ನು ಕೇಳಿಕೊಳ್ಳುತ್ತಾ ಎಳ್ಳೇಣ್ಣೆಯನ್ನು ದೀಪಕ್ಕೆ ಹಾಕಿ. ಈ ಮೂಲಕ ನಿಮ್ಮ ಮನಸ್ಸಿನ ಆಸೆ ಆಕಾಂಕ್ಷೆ ಖಂಡಿತ ನೇರವೇರವುದು.

ಇನ್ನೂ ಇಂದು ಮಕರ,ಧನುಸ್ಸು,ವೃಶ್ಚಿಕ,ಕಟಕ ಹಾಗೂ ಸಿಂಹ ರಾಶಿಯವರಿಗೆ ವಿಶೇಷ ದಿನವಾಗಿದ್ದು. ಆಕಸ್ಮಿಕ ಧನಲಾಭ ಬರುವ ಸಂಭಂಬ ಜಾಸ್ತಿ‌ ಇದೆ. ಆದುದರಿಂದ ಆದರೆ ಇಂದು ಹನುಮಾನ ಚಾಲಿಸ ಒಂದು ಸಲ ಪಠಿಸಿ.ಮೇಷ,ಕಟಕ ಹಾಗೂ ವೃಷಭ ರಾಶಿಯವರು ತಪ್ಪದೆ ಯಾವುದಾದರೂ ಒಂದು ಹನುಮಂತನ ದೇವಸ್ಥಾನಕ್ಕೆ ಹೋಗಿ ಬನ್ನಿ.

ಮಿಥುನ, ಕಟಕ, ಕನ್ಯಾ, ತಲಾ, ಕುಂಭ ಹಾಗೂ ಮೀನ ರಾಶಿಯವರು ತಪ್ಪದೆ ಇವತ್ತು ಹನುಮಾನ ಚಾಲಿಸ ಪಠಿಸಲೇ ಬೇಕು ಇದರಿಂದ ನಿಮ್ಮ‌ ಜಾಗದ ಸಮಸ್ಯೆ ಹಾಗೂ ಆರೋಗ್ಯದ ಸಮಸ್ಯೆ ದೂರ ಆಗುವುದು. ಇನ್ನೂ ಉದ್ಯೋಗ ಹಾಗೂ ಮನೆಯ ನೆಮ್ಮದಿಗಾಗಿ ನೀವು ಕಠಿಣವಾದ ಸಮಯ ಅನುಭವಿಸುತಿದ್ದು ಹನುಮಾನ್ ಚಾಲಿಸ್ ನಿಂದ ಎಲ್ಲ ಸಮಸ್ಯೆ ದೂರ ಆಗುತ್ತದೆ.

LEAVE A REPLY

Please enter your comment!
Please enter your name here